ಕರ್ನಾಟಕದಲ್ಲಿ ನಿರಂತರ ಮಳೆಗೆ ಅಪಾರ ಬೆಳೆ ನಾಶ! ಪರಿಹಾರಕ್ಕೆ ರೈತರು ಆಗ್ರಹ

| Updated By: sandhya thejappa

Updated on: May 21, 2022 | 8:22 AM

ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ.

ಕರ್ನಾಟಕದಲ್ಲಿ ನಿರಂತರ ಮಳೆಗೆ ಅಪಾರ ಬೆಳೆ ನಾಶ! ಪರಿಹಾರಕ್ಕೆ ರೈತರು ಆಗ್ರಹ
ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು
Follow us on

ಚಿಕ್ಕಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ (Rain) ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದ್ದು, ಪರಿಹಾರ ನೀಡುವಂತೆ ರೈತರು (Farmers) ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇನ್ನು ಧಾರಾಕಾರ ಮಳೆ ಸುರಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಿರುಗಿ ನೋಡಲಿಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಾನಿಯಾದ ಪ್ರದೇಶಗಳಿಗೆ ಸಚಿವರ ಭೇಟಿ:
ದಾವಣಗೆರೆ: 4 ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 4 ದಿನಗಳ ಕಾಲ ಸುರಿದ ಮಳೆಗೆ 197 ಮನೆಗಳಿಗೆ ಹಾನಿಯಾಗಿದೆ. 30 ಮನೆಗಳು ಸಂಪೂರ್ಣ ಕುಸಿದಿವೆ. ಮೂರು ಜಾನುವಾರುಗಳು ಸಾವನ್ನಪ್ಪಿದ್ದರೆ, ಒಂದು ಶಾಲೆ ಕುಸಿದು ಹೋಗಿದೆ. ಮಳೆಯಿಂದಾಗಿ 41 ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯಲ್ಲಿ ಒಟ್ಟು 2632.98 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಇದನ್ನೂ ಓದಿ: Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?

ಇದನ್ನೂ ಓದಿ
RCB: ಆರ್​ಸಿಬಿ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಮುಂಬೈ-ಡೆಲ್ಲಿ ಪಂದ್ಯಕ್ಕೆ ಕಾದು ಕುಳಿತ ಆರ್​ಸಿಬಿ ಫ್ಯಾನ್ಸ್
Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?
ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದಾಗ ಧಾರವಾಡದಲ್ಲಿ ಭೀಕರ ಅಪಘಾತ; 9 ಜನರು ಸಾವು, 4 ಜನರ ಸ್ಥಿತಿ ಗಂಭೀರ
Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ

ಇನ್ನು ಕೊಪ್ಪಳದಲ್ಲೂ ಮಳೆಯಿಂದ ಬೆಳೆ ಹಾನಿಯಾಗಿದೆ. ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನೆಲೆ ನೀರು ಹರಿದಿದೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಅನಾಹುತ ಆಗಿದೆ. ನಾವು ಅಧಿಕಾರಿಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನ ಗೇಟ್ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವು. ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಕಳಪೆ ಆಗಿಲ್ಲ. ಆದರೆ ಕೆಲ ಕಡೆ ರೈತರು ಗೇಟ್ ತೆರೆಯಲು ಬಿಡಲ್ಲ. ನೀರು ಹೋಗತ್ತದೆ ಅಂತ ರೈತರು ಗೇಟ್ ತೆರೆಯಲು ಬಿಡಲ್ಲಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ತಿಳಿಸಿದರು.

ಬಾಗಲಕೋಟೆಯಲ್ಲಿ 114 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂದು ಮನೆ ಸಂಪೂರ್ಣ ಕುಸಿದಿದೆ. ಮನೆಗಳು ಕುಸಿದು ಬಿದ್ದ ಕಾರಣ ಕುಟುಂಬಗಳು ಪರದಾಡುತ್ತಿವೆ. ಭಾರಿ ಮಳೆಯಿಂದಾಗಿ ಮುಧೋಳ ತಾಲೂಕಿನ ಮಿರ್ಜಿ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆ ಸಂಪರ್ಕ ಕಟ್ ಆಗಿದೆ.

ಇದನ್ನೂ ಓದಿ: ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಮನೆ ಗೋಡೆ ಕುಸಿದು ಅವಘಡ:ಮಂಡ್ಯ: ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅವಘಡ ನಡೆದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ. ಜನರು ಮನೆಯಲ್ಲಿ ಸಿಲುಕಿದ್ದ ತಾಯಿ, ಮಗನನ್ನು ರಕ್ಷಿಸಿದ್ದಾರೆ.

 ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 am, Sat, 21 May 22