ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆ: ಡಿ. ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ಎತ್ತಂಗಡಿ

ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ವಿವಾದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ​ ಸರ್ಕಾರ ಇಂದು ಇತಿಶ್ರೀ ಹಾಡಿದೆ. ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ವಿವಾದಗಳು ನಡೆದು ಸರ್ಕಾರಕ್ಕೆ ಮುಜುಗರವುಂಟಾಗಿತ್ತು.

ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆ: ಡಿ. ರೂಪಾ ಮತ್ತು ಹೇಮಂತ್ ನಿಂಬಾಳ್ಕರ್ ಎತ್ತಂಗಡಿ
ಹೇಮಂತ್ ನಿಂಬಾಳ್ಕರ್ ಮತ್ತು ಡಿ.ರೂಪಾ
Follow us
ಸಾಧು ಶ್ರೀನಾಥ್​
|

Updated on:Dec 31, 2020 | 6:44 PM

ಬೆಂಗಳೂರು: ವಿವಾದಿತ ಹಿರಿಯ IPS ಅಧಿಕಾರಿಗಳ ವರ್ಗಾವಣೆಯಾಗಿದ್ದು, ರೂಪಾ ಮೌದ್ಗಿಲ್ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ನಿರ್ಭಯಾ ನಿಧಿ ಗುತ್ತಿಗೆ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಕಳೆದ ಶುಕ್ರವಾರ ಪ್ರಾರಂಭವಾದ ವಿವಾದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ​ ಸರ್ಕಾರ ಇಂದು ಇತಿಶ್ರೀ ಹಾಡಿದೆ. ಪ್ರಕರಣದಲ್ಲಿ ಈ ಇಬ್ಬರೂ ಹಿರಿಯ ಅಧಿಕಾರಿಗಳ ನಡುವೆ ವಾದ ವಿವಾದಗಳು ನಡೆದು ಸರ್ಕಾರಕ್ಕೆ ಮುಜುಗರವುಂಟಾಗಿತ್ತು.

ಇಂದು ಸಂಜೆ ಹೊರಬಿದ್ದಿರುವ ವರ್ಗಾವಣೆ ಆದೇಶದಲ್ಲಿ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.  ರೂಪಾ ಅವರನ್ನು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿಯೂ ಮತ್ತು ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತೆ ವಿಭಾಗದ ಐಜಿಪಿ ಯನ್ನಾಗಿ ವರ್ಗಾಯಿಸಲಾಗಿದೆ.

ವರ್ಗಾವಣೆಗೊಂಡ ಇತರೆ 7 ಅಧಿಕಾರಿಗಳು

1. ಡಾ. ಕೆ ರಾಮಚಂದ್ರರಾವ್ -ಎಡಿಜಿಪಿ, ಮಾನವ ಹಕ್ಕುಗಳು ಮತ್ತು ಕುಂದುಕೊರತೆ ಇಲಾಖೆ 2. ಮಾಲಿನಿ ಕೃಷ್ಣಮೂರ್ತಿ -ಪ್ರಧಾನ ಕಾರ್ಯದರ್ಶಿ (ಪಿಸಿಎಎಸ್), ಗೃಹ ಖಾತೆ 3. ಎಂ ಚಂದ್ರಶೇಖರ್​ -ಐಜಿ, ಸೆಂಟ್ರಲ್ ರೇಂಜ್-ಬೆಂಗಳೂರು 4. ವಿಫುಲ್​ ಕುಮಾರ್ -ನಿರ್ದೇಶಕ, ಪೊಲೀಸ್ ಅಕಾಡೆಮಿ, ಮೈಸೂರು 5. ವಿಕಾಶ್​ ಕುಮಾರ್​ ವಿಕಾಶ್​ -ಡಿಐಜಿ, ಕೆ ಎಸ್​ ಆರ್​ಪಿ, ಬೆಂಗಳೂರು 6. ವರ್ತಿಕಾ ಖಟಿಯಾರ್ -ಎಸ್​ಪಿ, ರಾಜ್ಯ ಕ್ರೈಂ ರೆಕಾರ್ಡ್ಸ್​​ ಬ್ಯೂರೋ 7. ರಂಜಿತ್​ ಕುಮಾರ್​ ಬಂಡಾರು – ಎ ಎಸ್​ಪಿ, ಭಟ್ಕಳ

Published On - 6:25 pm, Thu, 31 December 20

ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್