Quran: ಕುರಾನ್​ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಎಫ್​ಐಆರ್ ದಾಖಲು

| Updated By: ಸಾಧು ಶ್ರೀನಾಥ್​

Updated on: Jul 06, 2022 | 3:29 PM

ಜುಲೈ 1 ರಂದು ಕನ್ನಯ್ಯ ಲಾಲ್​ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ದೋ.ಕೇಶವಮೂರ್ತಿ ಅವರು ಕುರಾನ್​ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಮುಸ್ಲಿಂ ಸಂಘಟನೆಗಳಿಂದ ಕೋಲಾರ ಎಸ್ಪಿ ದೇವರಾಜ್​ ಅವರಿಗೆ ದೂರು ನೀಡಲಾಗಿತ್ತು.

Quran: ಕುರಾನ್​ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಎಫ್​ಐಆರ್ ದಾಖಲು
ಕುರಾನ್​ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಎಫ್​ಐಆರ್ ದಾಖಲು
Follow us on

ಕೋಲಾರ: ಕುರಾನ್​ ವಿರುದ್ಧ ವಿವಾದಾತ್ಮಕ ಹೇಳಿಕೆ ಕೊಟ್ಟ ಹಿನ್ನೆಲೆ ಹಿಂದೂ ಜಾಗರಣ ವೇದಿಕೆ ಮುಖಂಡರೊಬ್ಬರ ವಿರುದ್ಧ ಎಫ್​ಐಆರ್ (FIR) ದಾಖಲು ಮಾಡಿಕೊಳ್ಳಲಾಗಿದೆ. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂಥ ಮುಖಂಡ ದೋ. ಕೇಶವ ಮೂರ್ತಿ ವಿರುದ್ದ ಕೋಲಾರ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​- 295, 295a, 153, 504, 505 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜುಲೈ 1 ರಂದು ಕನ್ನಯ್ಯ ಲಾಲ್​ ಹತ್ಯೆ ಖಂಡಿಸಿ ಪ್ರತಿಭಟನೆ ವೇಳೆ ದೋ.ಕೇಶವಮೂರ್ತಿ ಅವರು ಕುರಾನ್​ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಮುಸ್ಲಿಂ ಸಂಘಟನೆಗಳಿಂದ ಕೋಲಾರ ಎಸ್ಪಿ ದೇವರಾಜ್​ ಅವರಿಗೆ ದೂರು ನೀಡಲಾಗಿತ್ತು.

Also Read:

ಅನುಶ್ರೀ ಡ್ರಗ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ತರಾಟೆ!

Also Read:

ಮನೆ ದೇವರು ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಭೆ: 26 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಚಿಂತನೆ

 

Published On - 3:29 pm, Wed, 6 July 22