ನೆತ್ತಿ ಸುಡುತ್ತಿದ್ದಾನೆ ಸೂರ್ಯ.. ಕೋಲಾರದಲ್ಲಿ ಜೋರಾದ ತಂಪು ಪಾನೀಯ ವ್ಯಾಪಾರ

|

Updated on: Mar 22, 2021 | 1:38 PM

ಕೋಲಾರ ಎಂದರೆ ಬರದ ಜಿಲ್ಲೆ, ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ ಜನರ ನೆತ್ತಿ ಸುಡುತ್ತಿರುತ್ತಾನೆ. ಹೀಗಿರುವಾಗ ಈ ವರ್ಷ ಮುಂಗಾರು ಮಳೆಯೂ ಇಲ್ಲಾ. ಹಿಂಗಾರು ಮಳೆಯೂ ಇಲ್ಲದೆ ಭೂಮಿ ಕಾದು ಕೆಂಡದಂತಾಗಿದೆ. ಮಾರ್ಚ್ ಆರಂಭದಲ್ಲೇ ಬೇಸಿಗೆ ತೀವ್ರತೆ ಹೆಚ್ಚಾಗಿದೆ.

ನೆತ್ತಿ ಸುಡುತ್ತಿದ್ದಾನೆ ಸೂರ್ಯ.. ಕೋಲಾರದಲ್ಲಿ ಜೋರಾದ ತಂಪು ಪಾನೀಯ ವ್ಯಾಪಾರ
ರಸ್ತೆಯುದ್ದಕ್ಕೂ ಇರುವ ಕಲ್ಲಂಗಡಿಗಳು
Follow us on

ಕೋಲಾರ: ಈ ಬಾರಿಯ ಬಿರು ಬಿಸಿಲು ಜನರ ನೆತ್ತಿ ಸುಡುತ್ತಿದೆ.  ಸೂರ್ಯ ಉದಯಿಸುತ್ತಿದ್ದಂತೆ ಜನರು ಮನೆಯಿಂದ ಹೊರಬರುವುದಕ್ಕೂ ಯೋಚಿಸುವ ಪರಿಸ್ಥಿತಿ ಎದುರಾಗಿದೆ. ರಾಜ್ಯ ಹಲವು ಕಡೆ ನೀರಿಗಾಗಿ ಪರದಾಟ ಪಡುತ್ತಿದ್ದಾರೆ. ಬಿಸಿಲಿನ ತಾಪಮಾನದಿಂದ ಬೆಳೆಗೂ ತೊಂದರೆಯಾಗುತ್ತಿದೆ. ಈ ಮದ್ಯೆ ಬರದನಾಡಿನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಬಿಸಿಲಿನ ತಾಪಕ್ಕೆ ಬೆಂಡಾಗಿರುವ ಜನರು ದಣಿವಾರಿಸಿಕೊಳ್ಳಲು ಹಲವು ಸರ್ಕಸ್ ಮಾಡುತ್ತಿದ್ದಾರೆ. 

34-38 ಡಿಗ್ರಿ ತಾಪಮಾನ ದಾಖಲು
ಕೋಲಾರ ಎಂದರೆ ಬರದ ಜಿಲ್ಲೆ, ವರ್ಷಪೂರ್ತಿ ಸುಡುವ ಬಿಸಿಲು, ಧಗ ಧಗಿಸುವ ಸೂರ್ಯ ಜನರ ನೆತ್ತಿ ಸುಡುತ್ತಿರುತ್ತಾನೆ. ಹೀಗಿರುವಾಗ ಈ ವರ್ಷ ಮುಂಗಾರು ಮಳೆಯೂ ಇಲ್ಲಾ. ಹಿಂಗಾರು ಮಳೆಯೂ ಇಲ್ಲದೆ ಭೂಮಿ ಕಾದು ಕೆಂಡದಂತಾಗಿದೆ. ಮಾರ್ಚ್ ಆರಂಭದಲ್ಲೇ ಬೇಸಿಗೆ ತೀವ್ರತೆ ಹೆಚ್ಚಾಗಿದೆ. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಈ ಬಾರಿ ಅತಿ ಹೆಚ್ಚು ತಾಪಮಾನ 34-38 ಡಿಗ್ರಿ ದಾಖಲಾಗಿದೆ. ಎಂದೂ ಕಂಡರಿಯದ ಈ ರಣಬಿಸಿಲಿಗೆ ಜನ ತತ್ತರಿಸಿ ಹೋಗಿದ್ದು, ಜನ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ಎಳನೀರು ಮಜ್ಜಿಗೆಯಂತಹ ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಹಾಗಾಗಿ ನಗರದ ಒಳಗೆ ಹಾಗೂ ಹೊರಗೆ ಎಲ್ಲೆಂದರಲ್ಲಿ ಕಲ್ಲಂಗಡಿ ಹಣ್ಣಿನ ಸ್ಟಾಲ್ಗಳು ಜೋರಾಗಿದೆ. ಎಲ್ಲಾ ಕಡೆ ಜನರು ಮುಗಿಬಿದ್ದು, ಬಿಸಿಲಲ್ಲಿ ಕಲ್ಲಂಗಡಿ ಸವಿಯುತ್ತಿರುವ ಜನ ಬಿಸಿಲಿನಿಂದ ಬೆಂದು ಕೊಂಚ ನಿಟ್ಟುಸಿರು ಬಿಡುತ್ತಿದ್ದಾರೆ.

ಕಲ್ಲಂಗಡಿ ತಿನ್ನುತ್ತಿರುವ ಜನರು

ಜೋರಾದ ಕಲ್ಲಂಗಡಿ ವ್ಯಾಪಾರ

ಕೊಂಚ ಬೆಲೆ ಹೆಚ್ಚಳ
ಜಿಲ್ಲೆಯಲ್ಲೂ ಈ ಬಾರಿ ತಾಪಮಾನ ಏರಿಕೆಯಾಗಿದೆ. ಮಳೆ ಇಲ್ಲ.. ಬೆಳೆಯೂ ಇಲ್ಲಾ.. ಹಾಗಾಗಿ ಜಿಲ್ಲೆಯಲ್ಲಿ ನೀರಾವರಿ ಇರುವ ಅಲೊಬ್ಬ ಇಲ್ಲೊಬ್ಬ ರೈತರು ಕಲ್ಲಂಗಡಿ ಹಣ್ಣು ಬೆಳೆಯುತ್ತಿದ್ದರು. ಆದರೆ ಈ ಬಾರಿ ಕಲ್ಲಂಗಡಿಗೆ ಬೇಡಿಕೆ ಇರುವ ಕಾರಣ ತಮಿಳುನಾಡು, ಆಂಧ್ರ ಸೇರಿದಂತೆ ಹೊರ ರಾಜ್ಯಗಳಿಂದಲೂ ಕಲ್ಲಂಗಡಿ ಹಣ್ಣು ತರಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಕೊಂಚ ಬೆಲೆಯೂ ಹೆಚ್ಚಾಗಿದೆ. ಬೆಲೆ ಹೆಚ್ಚಾಗಿದ್ದರೂ ಜನರು ಬಿರು ಬಿಸಿಲಿನ ತಾಪಕ್ಕೆ ಹಣ್ಣಿನ ಬೆಲೆ ಹೆಚ್ಚಾದರೂ ಕೂಡಾ ಹಣ್ಣು ಖರೀದಿ ಮಾಡುವುದನ್ನು ತಪ್ಪಿಸಿಲ್ಲ. ಹಾಗಾಗಿ ವ್ಯಾಪಾರಸ್ಥರಿಗೂ ಒಳ್ಳೆಯ ವ್ಯಾಪಾರ ನಡೆಯುತ್ತಿದೆ. ಕೇವಲ ಕಲ್ಲಂಗಡಿ ಹಣ್ಣಿಗೆ ಅಷ್ಟೇ ಅಲ್ಲಾ, ಎಳನೀರು, ಕಬ್ಬಿನ ಹಾಲು, ಕರಬೂಜದ ಹಣ್ಣು ಸೇರಿದಂತೆ ಐಸ್ ಕ್ರೀಂ ವ್ಯಾಪಾರ ಕೂಡಾ ಜೋರಾಗಿದೆ.

ಬಾಯಾರಿಕೆ ತೀರಿಸಿಕೊಳ್ಳಲು ಎಳನೀರು ಕುಡಿಯುತ್ತಿದ್ದಾರೆ

ಕಬ್ಬಿನ ಜ್ಯೂಸ್​ ಕುಡಿಯುತ್ತಿರುವ ಜನರು

ಇದನ್ನೂ ಓದಿ

ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 37 ವರ್ಷ!

ಹಾಸನದಲ್ಲಿ ಕಮಾಲ್ ಮಾಡಿದ ಲೇಡಿ ರೈಡರ್ಸ್..

Published On - 1:35 pm, Mon, 22 March 21