ಮಾಜಿ ಶಾಸಕನ ಪುತ್ರನಿಗೆ ಯುವತಿಯಿಂದ ವೀಡಿಯೊ ಬ್ಲಾಕ್ಮೇಲ್, ಠಾಣೆಯಲ್ಲಿ ದೂರು ದಾಖಲು
ರಾಜ್ಯ ರಾಜಕೀಯದಲ್ಲಿ ಸೆಕ್ಸ್ ಸಿಡಿ ಪ್ರಕರಣಗಳು ಉದ್ಭವಿಸುತ್ತಿವೆ. ರಮೇಶ್ ಜಾರಕಿಹೊಳಿ ಪ್ರಕರಣ ಬೆನ್ನಲ್ಲೇ ಮಾಜಿ ಶಾಸಕರ ಮಗನಿಗೆ ಯುವತಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಮಾದರಿಯಲ್ಲೇ ಅಮಾಯಕರಿಗೆ ಬ್ಲಾಕ್ ಮೇಲ್ ಮಾಡಿ ಹಣ ಪೀಕುತ್ತಿದ್ದ ಗ್ಯಾಂಗ್ವೊಂದು ಹುಬ್ಬಳ್ಳಿಯಲ್ಲಿ ತಲೆ ಎತ್ತಿದೆ. ಈಗ ಈ ಕಿರಾತಕ ಗ್ಯಾಂಗ್ ಧಾರವಾಡ ಜಿಲ್ಲೆಯ ಮಾಜಿ ಶಾಸಕನ ಪುತ್ರನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದೆ. ಅಶ್ಲೀಲ ವಿಡಿಯೋ ಇಟ್ಟುಕೊಂಡು ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ. ಈ ಸಂಬಂಧ ಮಾಜಿ ಶಾಸಕನ ಪುತ್ರನಿಂದ ಯುವತಿಗೆ ಹಣ ವರ್ಗಾವಣೆಯಾಗಿದೆ. ಸದ್ಯ ಈಗ ಹಣಕ್ಕಾಗಿ ಕಾಟ ಕೊಟ್ಟ ಯುವತಿ ವಿರುದ್ಧ FIR ದಾಖಲಾಗಿದೆ.
ರಾಜ್ಯ ರಾಜಕೀಯದಲ್ಲಿ ಸೆಕ್ಸ್ ಸಿಡಿ ಪ್ರಕರಣಗಳು ಉದ್ಭವಿಸುತ್ತಿವೆ. ರಮೇಶ್ ಜಾರಕಿಹೊಳಿ ಪ್ರಕರಣ ಬೆನ್ನಲ್ಲೇ ಮಾಜಿ ಶಾಸಕರ ಮಗನಿಗೆ ಯುವತಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಪೀಕಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಯುವತಿ, ಮಾಜಿ ಶಾಸಕನ ಪುತ್ರನಿಗೆ ವೀಡಿಯೊ ಕಾಲ್ ಮಾಡುತ್ತಿದ್ದಳು. ವಿಡಿಯೋ ಕಾಲ್ ಮೂಲಕವೇ ಸಲುಗೆ ಬೆಳೆಸಿಕೊಂಡಿದ್ದಳು. ಬಳಿಕ ವಿಡಿಯೋ ಕಾಲ್ ಎಡಿಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದಿದ್ದರೆ ವೀಡಿಯೊ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಬೆದರಿಕೆಗೆ ಹೆದರಿ ಮಾಜಿ ಶಾಸಕನ ಪುತ್ರ ಯುವತಿಗೆ 13 ಸಾವಿರ ಹಣವನ್ನು ಫೋನ್ ಪೇ ಮೂಲಕ ಟ್ರಾನ್ಸ್ಫರ್ ಮಾಡಿದ್ದಾನೆ. ಹಣದ ರುಚಿ ಕಂಡ ಗ್ಯಾಂಗ್ ಪದೇಪದೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೇಸತ್ತ ಮಾಜಿ ಶಾಸಕನ ಪುತ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಹುಬ್ಬಳ್ಳಿಯಲ್ಲಿ ಶುರುವಾಗಿದೆ ಬ್ಲಾಕ್ ಮೇಲ್ ಮಾಡೋ ಗ್ಯಾಂಗ್ನ ಆಟ ಮೊದಲಿಗೆ ಅನ್ನೋನ್ ನಂಬರ್ನಿಂದ ವಾಟ್ಸಪ್ ವೀಡಿಯೊ ಕಾಲ್ ಮಾಡ್ತಾರೆ. ಅದ್ರಲ್ಲಿ ಯುವತಿಯೊಬ್ಬಳು ನಿಮ್ಮ ಮುಂದೆ ಸಂಪೂರ್ಣ ಬೆತ್ತಲಾಗ್ತಾಳೆ. ಬಳಿಕ ನಿಮ್ಮನ್ನೂ ನಗ್ನವಾಗುವಂತೆ ಪ್ರಚೋದಿಸ್ತಾಳೆ. ಸ್ವಲ್ಪ ಯಾಮಾರಿದ್ರೆ ಸಿಡಿ ಹೊರಗಡೆ ಬರೋದು ಗ್ಯಾರಂಟಿ. ವೀಡಿಯೊ ಕಾಲ್ ಮಾಡಿದಾಗ ಎದುರುಗಡೆ ವ್ಯಕ್ತಿಯ ಫೋಟೋವನ್ನ ಈ ಖದೀಮರು ಸ್ಕ್ರೀನ್ ಕ್ಯಾಪ್ಚರ್ ಮಾಡಿಕೊಳ್ಳುತ್ತಾರೆ. ಬಳಿಕ ಆ ಫೋಟೋ ಅನ್ನು ಅಶ್ಲೀಲ ವೀಡಿಯೋಗೆ ಹೊಂದಾಣಿಕೆಯಾಗುವಂತೆ ಎಡಿಟ್ ಮಾಡ್ತಾರೆ. ಅಲ್ಲಿಂದ ಅವರ ನಿಜವಾದ ಆಟ ಶುರುವಾಗುತ್ತೆ.
ಮೊದಲು 50 ಸಾವಿರ ಹಣ ಕೇಳ್ತಾರೆ. ಕೊಡಲ್ಲ ಅಂದ್ರೆ ಎಡಿಟ್ ಮಾಡಿದ ವೀಡಿಯೊ ತೋರಿಸಿ ಬ್ಲಾಕ್ ಮೇಲ್ ಮಾಡ್ತಾರೆ. ಹಣ ನೀಡದಿದ್ರೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಮಾಡೋದಾಗಿ ಧಮ್ಕಿ ಹಾಕ್ತಾರೆ. ಕೊನೆಗೆ 20 ಸಾವಿರ ಕೊಟ್ರೆ ವೀಡಿಯೋ ಡಿಲೀಟ್ ಮಾಡೋ ಅಭಯ ನೀಡ್ತಾರೆ. ಪ್ರತಿಷ್ಠಿತ ಮನೆತನದ ಯುವಕರೇ ಈ ಖದೀಮರ ಟಾರ್ಗೆಟ್. ಇದೀಗ ವಾಣಿಜ್ಯ ನಗರಿಯಲ್ಲಿ ಇಂತಹ ಬ್ಲಾಕ್ ಮೇಲಿಂಗ್ ದಂಧೆ ನಡೆಯುತ್ತಿದೆ. ಸದ್ಯ ಇಂತಹುದೇ ಭಯದಲ್ಲಿ ಹುಬ್ಬಳ್ಳಿಯ ಯುವಕರು ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ಹನಿಟ್ರಾಪ್ ಜಾಲಕ್ಕೆ ಬಿದ್ದ ಮೈಸೂರಿನ ವೈದ್ಯ! ಕಿರಾತಕರು ಸುಲಿದ ಹಣವೆಷ್ಟು ಗೊತ್ತಾ?
ವೀಡಿಯೋ ಕಾಲ್ ಮಾಡಿ, ಮೋಡಿ ಮಾಡ್ತಾರೆ.. ಯಾಮಾರಿದ್ರೆ ಜಾರಕಿಹೊಳಿ ಮಾದರಿ ಸಿಡಿ ರಿಲೀಸ್ ಮಾಡ್ತಾರೆ!
Published On - 1:47 pm, Mon, 22 March 21