ಮೈಸೂರು: ಯುವತಿಯನ್ನ ಬಳಸಿಕೊಂಡು ಹಣ ವಸೂಲಿಗೆ ಇಳಿದಿದ್ದ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನವೀನ್, ಶಿವರಾಜು,ಹರೀಶ್, ವಿಜಿ ಮತ್ತು ಅನಿತಾ ಎಂಬುವವರು ಬಂಧಿತ ಆರೋಪಿಗಳಾಗಿದ್ದು, ಈ ನಾಲ್ವರೂ ಮೈಸೂರಿನ ಪಿರಿಯಾಪಟ್ಟಣ ನಿವಾಸಿಗಳು. ಅನಿತಾ ಎಂಬ ಯುವತಿಯನ್ನು ಬಳಸಿಕೊಂಡು ಹನಿಟ್ರಾಪ್ಗೆ ಯತ್ನಿಸಿದ್ದ ಈ ತಂಡ ಮೈಸೂರಿನ ಖಾಸಗಿ ವೈದ್ಯರೊಬ್ಬರನ್ನ ಹನಿಟ್ರಾಪ್ ಜಾಲಕ್ಕೆ ಬೀಳಿಸಿದ್ದರು. ಯುವತಿ ಹಾಗೂ 4 ಮಂದಿ ಆರೋಪಿಗಳು ಸದರಿ ಖಾಸಗಿ ವೈದ್ಯರ ಬಳಿ ಒಂದು ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
ಸದರಿ ಖಾಸಗಿ ವೈದ್ಯ, ಯುವತಿಯೊಂದಿಗೆ ಇರುವ ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿಕೊಂಡು.. ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದರು. ಹಣ ನೀಡದಿದ್ದರೆ ವಿಡಿಯೋವನ್ನ ಸಾಮಾಜಿಕ ಜಾಲತಾಣಕ್ಕೆ ಹಂಚುವ ಬೆದರಿಕೆ ಹಾಕಿದ್ದ ಖದೀಮರು, ಈವರೆಗೆ ಸದರಿ ಖಾಸಗಿ ವೈದ್ಯರಿಂದ 31 ಲಕ್ಷದ 30 ಸಾವಿರ ರೂಪಾಯಿಯನ್ನು ಪೀಕಿದ್ದಾರೆ.
ಸದರಿ ಖಾಸಗಿ ವೈದ್ಯ ಪಿರಿಯಾಪಟ್ಟಣದಲ್ಲಿ ವಾಸವಿದ್ದಾಗ ಈ ಘಟನೆ ನಡೆದಿದೆ. ಹಾಗಾಗಿ 2019 ಡಿಸೆಂಬರ್‌ನಿಂದ 2020 ಅಕ್ಟೋಬರ್ ತಿಂಗಳವರೆಗೂ ಬಾಬು ಬಳಿ ಹಣ ವಸೂಲಿ ಮಾಡಿದ್ದಾರೆ. ಪಿರಿಯಾಪಟ್ಟಣ ಬಿಟ್ಟು ಮೈಸೂರು ನಗರಕ್ಕೆ ಬಂದ ಸದರಿ ಖಾಸಗಿ ವೈದ್ಯ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಹನಿಟ್ರ್ಯಾಪ್ಗೆ ಬಳಕೆಯಾಗಿದ್ದ ಯುವತಿ ಸೇರಿದಂತೆ 5 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.