ಜನ್ಮದಿನ ಸಂಭ್ರಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ: ಮಕ್ಕಳೊಂದಿಗೆ ಬೆರೆತು ಮಸ್ತ್ ಮಸ್ತ್ ಡಾನ್ಸ್..
ಹುಬ್ಬಳ್ಳಿ: ಅವರಲ್ಲಿ ಬಹುತೇಕ ಮಕ್ಕಳು ತಂದೆಯ ಮುಖವನ್ನೇ ಕಂಡಿಲ್ಲ. ಇನ್ನು ಕೆಲವರಂತೂ ತಾಯಿಯ ವಾತ್ಸಲ್ಯ ಅನುಭವಿಸಿಲ್ಲ. ನಾವು ಅನಾಥರು, ನಮಗ್ಯಾರು ದಿಕ್ಕೇ ಇಲ್ಲಾ ಅನ್ನೋ ಫೀಲಿಂಗ್‌ನಲ್ಲಿದ್ದ ಆ ಮಕ್ಕಳೆಲ್ಲ 2 ದಿನ ಜಾಲಿ ಮೂಡ್ನಲ್ಲಿದ್ರು. ಅವರ ಆ ಖುಷಿ ಸಂಭ್ರಮಕ್ಕೆ ಕಾರಣವಾಗಿದ್ದು ಒಬ್ಬ ಸಚಿವೆ. ಪುಟಾಣಿ ಮಕ್ಕಳ ಖುಷಿಗೆ, ಸಂಭ್ರಮಕ್ಕೆ ಪಾರವೇ ಇರಲಿಲ್ಲ.. ಪಟ ಪಟ ಹಾರೋ ಗಾಳಿಪಟ ಅಂತ ಹಾಡು ಬರ್ತಿದ್ರೆ, ಆ ಹಾಡಿಗೆ ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಮಕ್ಕಳು. ಮಕ್ಕಳ ಜೊತೆ ತಾವು ಹೆಜ್ಜೆ […]

ಹುಬ್ಬಳ್ಳಿ: ಅವರಲ್ಲಿ ಬಹುತೇಕ ಮಕ್ಕಳು ತಂದೆಯ ಮುಖವನ್ನೇ ಕಂಡಿಲ್ಲ. ಇನ್ನು ಕೆಲವರಂತೂ ತಾಯಿಯ ವಾತ್ಸಲ್ಯ ಅನುಭವಿಸಿಲ್ಲ. ನಾವು ಅನಾಥರು, ನಮಗ್ಯಾರು ದಿಕ್ಕೇ ಇಲ್ಲಾ ಅನ್ನೋ ಫೀಲಿಂಗ್‌ನಲ್ಲಿದ್ದ ಆ ಮಕ್ಕಳೆಲ್ಲ 2 ದಿನ ಜಾಲಿ ಮೂಡ್ನಲ್ಲಿದ್ರು. ಅವರ ಆ ಖುಷಿ ಸಂಭ್ರಮಕ್ಕೆ ಕಾರಣವಾಗಿದ್ದು ಒಬ್ಬ ಸಚಿವೆ.
ಪುಟಾಣಿ ಮಕ್ಕಳ ಖುಷಿಗೆ, ಸಂಭ್ರಮಕ್ಕೆ ಪಾರವೇ ಇರಲಿಲ್ಲ..
ಪಟ ಪಟ ಹಾರೋ ಗಾಳಿಪಟ ಅಂತ ಹಾಡು ಬರ್ತಿದ್ರೆ, ಆ ಹಾಡಿಗೆ ಖುಷಿಯಿಂದ ಹೆಜ್ಜೆ ಹಾಕುತ್ತಿರುವ ಮಕ್ಕಳು. ಮಕ್ಕಳ ಜೊತೆ ತಾವು ಹೆಜ್ಜೆ ಹಾಕುತ್ತಾ ಸಖತ್ ಎಂಜಾಯ್ ಮಾಡುತ್ತಿರುವ ಸಚಿವೆ. ಇಲ್ಲಿ ಪುಟಾಣಿ ಮಕ್ಕಳ ಖುಷಿಗೆ, ಸಂಭ್ರಮಕ್ಕೆ ಪಾರವೇ ಇರಲಿಲ್ಲ. ತಮ್ಮ ಎಲ್ಲಾ ದುಃಖಗಳನ್ನ ಮರೆತುಬಿಟ್ಟು ಎರಡು ದಿನ ಖುಷಿ ಅಲೆಯಲ್ಲಿ ತೇಲಿದ್ರು. ಇಂತಹ ಸಂಭ್ರಮದ ದೃಶ್ಯ ಕಂಡು ಬಂದಿದ್ದು ಹುಬ್ಬಳ್ಳಿಯ ಘಂಟಿಕೇರಿಯ ಸರ್ಕಾರಿ ಬಾಲ ಮಂದಿರದಲ್ಲಿ.
ಪಟ ಪಟ ಗಾಳಿಪಟ ಹಾಡಿಗೆ ಸ್ಟೆಪ್ ಹಾಕಿದ ಶಶಿಕಲಾ ಜೊಲ್ಲೆ.. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ಜನ್ಮದಿನ. ಹೀಗಾಗಿ ಈ ಬಾರಿ ಪ್ರತಿ ವರ್ಷದಂತೆ ವಿಭಿನ್ನವಾಗಿ ಆಚರಿಸಬೇಕು ಅಂತ ಶಶಿಕಲಾ ಜೊಲ್ಲೆ ಇಲ್ಲಿನ ಮಕ್ಕಳೊಂದಿಗೆ ಎರಡು ದಿನ ಕಾಲ ಕಳೆದ್ರು. ಇಲ್ಲೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ರು. ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಪಟ ಪಟ ಗಾಳಿಪಟ ಹಾಡಿಗೆ ಸ್ಟೇಜ್‌ನಲ್ಲಿ ನೇರವಾಗಿ ಮಕ್ಕಳ ಬಳಿ ಬಂದು ಸ್ಟೆಪ್ ಹಾಕಿಯೇ ಬಿಟ್ರು. ಸಚಿವರ ಜೊತೆಯೆಲ್ಲಿ ಮಕ್ಕಳು ಫುಲ್ ಜೋಷ್‌ನಲ್ಲಿ ನೃತ್ಯ ಮಾಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡ್ರು.
ಬಾಲಮಂದಿರದ ಎಲ್ಲಾ ಮಕ್ಕಳಿಗೆ ಹೊಸ ಬಟ್ಟೆ.. ಸಚಿವೆ ಜೊಲ್ಲೆ ಮತ್ತು ಇವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಈ ಸರ್ಕಾರಿ ಬಾಲಮಂದಿರದ 100ಕ್ಕೂ ಹೆಚ್ಚು ಮಕ್ಕಳಿಗೆ ಹೊಸ ಬಟ್ಟೆ, ಸ್ವೀಟ್ ನೀಡಿದ್ರು. ಅಷ್ಟೇ ಅಲ್ಲ ಅನಾಥ ಮಕ್ಕಳ ಜೊತೆಯಲ್ಲಿ ಕತೆ ಆಲಿಸಿದ ಜೊಲ್ಲೆ ಬಳಿಕ ಮಕ್ಕಳೊಟ್ಟಿಗೆ ನಿದ್ರೆಗೆ ಜಾರಿದರು. ಎರಡು ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜೊಲ್ಲೆ ಈ ಅನಾಥ ಮಕ್ಕಳ ಜೊತೆಯೆಲ್ಲಿ ಜಾಲಿ ಮೂಡ್ನಲ್ಲಿದ್ರು. ಮಕ್ಕಳು ತಾವು ಮಿನಿಸ್ಟರ್ ಜೊತೆಯೆಲ್ಲಿದ್ದೀವಿ ಅನ್ನೋದನ್ನು ಮರೆತು ಖುಷಿಯಾಗಿ ಮುಳುಗಿದ್ರು.
ಒಟ್ಟಾರೆ ಸಚಿವರು ಎರಡು ದಿನ ಅನಾಥ ಮಕ್ಕಳ ಜೊತೆ ಕಳೆದ ಕ್ಷಣಗಳು ಮಕ್ಕಳಿಗೆ ನೈತಿಕ ಸ್ಥೈರ್ಯವನ್ನು ಇಮ್ಮಡಿಗೊಳಿಸಿದಂತಾಯ್ತು. ಅಷ್ಟೇ ಅಲ್ಲ ಮಕ್ಕಳ ವಿವಿಧ ಕಾರ್ಯಕ್ರಮಗಳು ಕೂಡ ನೆರೆದಿದ್ದವರಿಗೆ ಖುಷಿ ನೀಡ್ತು. -ರಹಮತ್ ಕಂಚಗಾರ್
Published On - 9:30 am, Fri, 20 November 20