Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋ ಬೈಡನ್ ಜೀವನದ ಏಳುಬೀಳುಗಳು.. ಕೊನೆಗೆ ವಿಳಂಬಿತ ‘ಟ್ರಂಪ್​’

ಜೋ ಬೈಡನ್, ಇದು ಇತ್ತೀಚೆಗೆ ಎಲ್ಲರಿಗೂ ಪರಿಚಿತ ಹೆಸರು. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅವರು, ಅಧಿಕೃತವಾಗಿ ಶ್ವೇತಭವನ ಪ್ರವೇಶಿಸುವುದಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬೈಡನ್ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಆದರೆ, 77 ವರ್ಷ ವಯಸ್ಸಿನ ಅವರ ಈ ಹಿಂದಿನ ರಾಜಕೀಯ ಬದುಕು, ಪರಿಶ್ರಮ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹಲವು ಏಳು, ಬೀಳುಗಳನ್ನು ಕಂಡಿರುವ ಅವರು ಈ ಹಂತದವರೆಗೆ ಸಾಗಿ ಬಂದದ್ದು ವಿಶೇಷ ಸಾಧನೆ. ಈಗಲೂ ಅಷ್ಟೇ ಅವರದು Trump ವಿರುದ್ಧ ವಿಳಂಬಿತ Triumph. ನಾಲ್ಕು […]

ಜೋ ಬೈಡನ್ ಜೀವನದ ಏಳುಬೀಳುಗಳು.. ಕೊನೆಗೆ ವಿಳಂಬಿತ ‘ಟ್ರಂಪ್​’
Follow us
ಸಾಧು ಶ್ರೀನಾಥ್​
|

Updated on: Nov 20, 2020 | 10:20 AM

ಜೋ ಬೈಡನ್, ಇದು ಇತ್ತೀಚೆಗೆ ಎಲ್ಲರಿಗೂ ಪರಿಚಿತ ಹೆಸರು. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಅವರು, ಅಧಿಕೃತವಾಗಿ ಶ್ವೇತಭವನ ಪ್ರವೇಶಿಸುವುದಷ್ಟೇ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಬೈಡನ್ ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದಾರೆ. ಆದರೆ, 77 ವರ್ಷ ವಯಸ್ಸಿನ ಅವರ ಈ ಹಿಂದಿನ ರಾಜಕೀಯ ಬದುಕು, ಪರಿಶ್ರಮ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹಲವು ಏಳು, ಬೀಳುಗಳನ್ನು ಕಂಡಿರುವ ಅವರು ಈ ಹಂತದವರೆಗೆ ಸಾಗಿ ಬಂದದ್ದು ವಿಶೇಷ ಸಾಧನೆ. ಈಗಲೂ ಅಷ್ಟೇ ಅವರದು Trump ವಿರುದ್ಧ ವಿಳಂಬಿತ Triumph.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣ! 1988ರಲ್ಲಿ ಅಮೆರಿಕಾದ ನ್ಯಾಯಾಂಗ ಸಮಿತಿಯ ಸೆನೆಟ್ ಆಗಿ ಆಯ್ಕೆಯಾದ ಅವರು, 1995ರ ವರೆಗೆ ಸೇವೆ ಸಲ್ಲಿಸಿದರು. 2007ರಿಂದ 2009ರ ವರೆಗೆ ಅಮೆರಿಕಾದ ಅಂತಾರಾಷ್ಟ್ರೀಯ ಡ್ರಗ್ಸ್ ಮತ್ತು ನಾರ್ಕೊಟಿಕ್ ವಿರೋಧಿ ಸಂಸ್ಥೆಯ ಮುಖ್ಯಸ್ಥರಾಗಿ ಮತ್ತು 2001ರಿಂದ 2009ರ ವರೆಗೆ, ಮೂರು ಬಾರಿ ಅಮೆರಿಕಾದ ವಿದೇಶಿ ಸಂಬಂಧಗಳ ಸಮಿತಿಯ ಸೆನೆಟ್ ಆಗಿ ಕಾರ್ಯ ನಿರ್ವಹಿಸಿದರು. ಒಟ್ಟು ಮೂರು ದಶಕಗಳಿಗೂ ಹೆಚ್ಚು ಕಾಲ ಸೆನೆಟ್ ಆಗಿ ಕೆಲಸ ಮಾಡಿದ ಅನುಭವ ಹೊಂದಿರುವ ಬೈಡನ್, 2009ರಿಂದ 2017ರ ವರೆಗೆ ಅಮೆರಿಕಾದ ಉಪಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.

ಹಲವು ಹಿನ್ನಡೆಯನ್ನು ಎದುರಿಸಿದ್ದರು ಬೈಡನ್! ಬೈಡನ್ ಮೊದಲ ಬಾರಿಗೆ ಶ್ವೇತಭವನದ ಒಳ ಹೊಕ್ಕಾಗ (1987), ತಮ್ಮ ಭಾಷಣದ ಕೃತಿಚೌರ್ಯ ಆರೋಪವನ್ನು ಹೊತ್ತರು. 2008ರಲ್ಲಿ, ಅಮೆರಿಕಾದ ಚುನಾವಣೆಯ ಓಟದಲ್ಲಿ ಒಬಾಮಾ ಮತ್ತಿತರ ನಾಯಕರ ನೆರಳಲ್ಲಿ ಎಲೆಮರೆಯ ಕಾಯಿಯಂತಾದರು. 2015ರಲ್ಲಿ ಪುತ್ರ, ಬ್ಯೂ ಬೈಡನ್​ನನ್ನು ಕಳೆದುಕೊಂಡರು. ತಮ್ಮ ಮೊದಲ ಮಗ ಬ್ಯೂ ನಿಧನದಿಂದ 2016ರ ಚುನಾವಣೆಯಲ್ಲೂ ಅವರು ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಬೈಡನ್​ಗೆ ಸರ್ಪ್ರೈಸ್ ಕೊಟ್ಟಿದ್ದರು ಬರಾಕ್ ಒಬಾಮಾ! ಅಮೆರಿಕಾದ ಉಪಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುವಾಗ, ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಬೈಡನ್​ಗೆ ವಿಶೇಷ ಉಡುಗೊರೆಯನ್ನು ನೀಡಿದ್ದರು. 2017ರಲ್ಲಿ ಬೈಡನ್​ಗೆ ’ಪ್ರೆಸಿಡೆನ್ಶಿಯಲ್ ಮೆಡಲ್ ಆಫ್ ಫ್ರೀಡಂ’ ನೀಡಿ ಗೌರವಿಸಿದ್ದರು. ’ಬೈಡನ್, ಅಮೆರಿಕ ಕಂಡ ಅತ್ಯುತ್ತಮ ಉಪಾಧ್ಯಕ್ಷ’ ಎಂದು ವಿವರಿಸಿದ್ದರು.

‘ಪರಸ್ಪರ ನೋಡಿ, ಕೇಳಿ, ಪ್ರತಿಯೊಬ್ಬರನ್ನು ಅರ್ಥಮಾಡಿಕೊಳ್ಳಿ. ಅಮೆರಿಕಾದ ಅಂತಃಸತ್ವವನ್ನು ಅರಿತುಕೊಳ್ಳಿ. ಅಪಾಯಕಾರಿ ಆಡಳಿತವನ್ನು ಕೊನೆಗೊಳಿಸಿ’ ಎಂದಿರುವ ಬೈಡನ್, ಅತಿ ಹಿರಿಯ ಮತ್ತು ಅನುಭವಿ ಅಧ್ಯಕ್ಷರಾಗಿ ಅಧಿಕಾರ ವಹಿಸಲಿದ್ದಾರೆ. ಸವಾಲುಗಳ ನಡುವೆ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡಿದ್ದ ಬೈಡನ್​ಗೆ ಅಮೆರಿಕಾ ಅಧ್ಯಕ್ಷರಾಗುವ ಕಾಲ ಇದೀಗ ಕೂಡಿ ಬಂದಿದೆ.