AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಕಮಾಲ್ ಮಾಡಿದ ಲೇಡಿ ರೈಡರ್ಸ್..

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಿನ್ನೆ (ಮಾರ್ಚ್ 21) ನಡೆದ ಮೊಟಾರ್ ರೇಸ್​ನಲ್ಲಿ ಲೇಡಿ ರೈಡರ್ಸ್​ಗಳದ್ದೇ ಕಮಾಲ್. ಮಾಮೂಲಿಯಾಗಿ ಮೊಟಾರ್ ರೇಸ್ ಎಂದರೆ ಅಲ್ಲಿ ಪುರುಷ ಸ್ಪರ್ಧಿಗಳೇ ಇರುತ್ತಾರೆ. ಆದರೆ ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ ರೇಸ್​ನಲ್ಲಿ ಪಾಲ್ಗೊಂಡಿದ್ದ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು.

ಹಾಸನದಲ್ಲಿ ಕಮಾಲ್ ಮಾಡಿದ ಲೇಡಿ ರೈಡರ್ಸ್..
ಕಾರ್​ ರೇಸ್​
sandhya thejappa
|

Updated on: Mar 22, 2021 | 1:04 PM

Share

ಹಾಸನ: ಮೊಟಾರ್ ರೇಸ್ ಎಂದರೆ ಎದೆ ನಡುಗಿಸುವ ಥ್ರಿಲ್ಲಿಂಗ್ ಇರುತ್ತದೆ. ರೋಮಾಂಚನಕಾರಿ ಅನುಭವ ಇರುತ್ತದೆ. ಮೈ ಜುಮ್ಮೆನ್ನಿಸುವ ಅನುಭವ ಇರುತ್ತದೆ. ರಸ್ತೆಯಲ್ಲಿ ರಾಕೆಟ್ ಓಡಾಡಿದಂತೆ ಗುರಿಯತ್ತ ಮುನ್ನುಗ್ಗುವ ಕಾರುಗಳು, ಧೂಳೆಬ್ಬಿಸುತ್ತಾ ಮಿಂಚಿಮಾಯವಾಗುವ ಸವಾರರ ಚಾಣಾಕ್ಷತೆಯ ರೈಡಿಂಗ್ ನೋಡುವುದು ಎಂದರೆ ತುದಿಗಾಲಲ್ಲಿ ನಿಂತು ಆಟ ನೋಡಬೇಕೆನಿಸುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ಮಹಿಳೆಯರ ರೈಡರ್ಸ್ ಆಟದ ಗಮ್ಮತ್ತು ಬಗ್ಗೆ ಹೇಳೋದೆ ಬೇಡ. ಪುರುಷರಿಗಿಂತ ನಾವೂ ಏನು ಕಡಿಮೆಯಿಲ್ಲಾ ಎಂದು ಕಾರ್ ಓಡಿಸಿ ಲೇಡಿ ರೈಡರ್ಸ್ ಕಮಾಲ್ ಮಾಡಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ನಿನ್ನೆ (ಮಾರ್ಚ್ 21) ನಡೆದ ಮೊಟಾರ್ ರೇಸ್​ನಲ್ಲಿ ಲೇಡಿ ರೈಡರ್ಸ್​ಗಳದ್ದೇ ಕಮಾಲ್. ಮಾಮೂಲಿಯಾಗಿ ಮೊಟಾರ್ ರೇಸ್ ಎಂದರೆ ಅಲ್ಲಿ ಪುರುಷ ಸ್ಪರ್ಧಿಗಳೇ ಇರುತ್ತಾರೆ. ಆದರೆ ಸಕಲೇಶಪುರದಲ್ಲಿ ನಡೆದ ರಾಜ್ಯಮಟ್ಟದ ಕಾರ್ ರೇಸ್​ನಲ್ಲಿ ಪಾಲ್ಗೊಂಡಿದ್ದ ಮಹಿಳಾ ಸ್ಪರ್ಧಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ಕೊಡಗಿನ ಬೆಡಗಿಯರಾದ ಮೀನಾ ಹಾಗು ನಿರ್ಮಲಾ ಮತ್ತು ಸಕಲೇಶಪುರದ ಯುವ ರೇಡರ್ ಬೆಡಗಿ ಜಾಸ್ಮಿನ್ ನೋಡುಗರಿಗೆ ಸಖತ್ ರಂಜಿಸಿದರು. ಇಲ್ಲಿನ ವಿಶಿಷ್ಟ ಟ್ರ್ಯಾಕ್​ನಲ್ಲಿ ಕಾರ್ ರೇಸ್​ಗಿಳಿದ ಕೊಡಗಿನ ಮೀನಾ ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರೆ, ಮತ್ತೊಬ್ಬ ಸುಂದರಿ ರೇಡರ್ ನಿರ್ಮಲಾ ಕೂಡ ತಮ್ಮ ಚಾಣಾಕ್ಷತೆಯಿಂದ ಟ್ರ್ಯಾಕ್​ನಲ್ಲಿ ರೇಸ್​ಗೆ ಇಳಿದು ಕಮಾಲ್ ಮಾಡಿದರು. ಇವರಿಬ್ಬರಿಗಿಂತ ವೇಗವಾಗಿ ಕಾರ್ ಚಲಾಯಿಸಿ ತಾವು ಯಾರಿಗೂ ಕಡಿಮೆಯಿಲ್ಲ ಎನ್ನುವಂತೆ ಸ್ಪರ್ಧೆಯೊಡ್ಡಿದ ಜಾಸ್ಮಿನ್ ಗೆಲುವಿನ ಮಾಲೆ ಧರಿಸಿದರು. ಮಾಮೂಲಿಯಾಗಿ ರೇಸ್​ಗೆ ಬಂದು ನೋಡಿ ಖುಷಿ ಪಡುತ್ತಿದ್ದ ಮಹಿಳಾ ಮಣಿಗಳು ಇದೀಗ ತಾವೇ ಖುದ್ದಾಗಿ ರೇಸಿಗಿಳಿದು ಗಮನಸೆಳೆದರು.

ಧೂಳೆಬ್ಬಿಸಕೊಂಡು ಕಾರ್​ ರೇಸ್​ನಲ್ಲಿ ಭಾಗವಹಿಸಿದ ಮಹಿಳೆಯರು

ಕಾರ್​ ರೇಸ್​ಗೆ ತಯಾರಾದ ಮಹಿಳೆ

ಸಾಹಸಮಯ ಕ್ರೀಡೆಗಳಿಗೆ ಹೆಸರಾದ ಜಿಲ್ಲೆಯಲ್ಲಿ ಮೋಟಾರ್ ಸ್ಪೋಟ್ಸ್​ಗೆ ಉತ್ತೇಜನ ನೀಡುವ ಸಲುವಾಗಿ ಹಾಗು ಯುವ ರೇಸರ್​ಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಮೊಟಾರ್ ರೇಸರ್​ಗಳು ನಡೆಸಲಾಗುತ್ತಿದೆ. ಸಕಲೇಶಪುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಆಯೋಜನೆಗೊಂಡಿದ್ದ ಕಾರ್ ರೇಸ್​ನಲ್ಲಿ ಮೊದಲಿಗೆ ಪುರುಷರ 800 ಸಿಸಿ, 100 ಸಿಸಿ, 1400 ಸಿಸಿ ಹಾಗು ನಾವೀಸ್ ಕ್ಲಾಸ್, ಓಪನ್ ಕ್ಲಾಸ್ ಹೀಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ರೇಸ್​ಗೆಂದು ತಯಾರಾಗಿದ್ದ ಟ್ರ್ಯಾಕ್​ನ ರೇಸರ್​ಗಳು ಮಿಂಚಿನ ವೇಗದಲ್ಲಿ ಕಾರ್ ಚಲಾಯಿಸಿದರು. ಕಣ್ಣು ಮಿಟುಕಿಸಿ ಬಿಡುವಷ್ಟರಲ್ಲಿ ರಾಕೇಟ್ ವೇಗದಲ್ಲಿ ಮುನ್ನುಗ್ಗುವ ರೈಡರ್ಸ್ ಗೆಲುವಿಗಾಗಿ ನಡೆಸುವ ಪೈಪೋಟಿ ಎಲ್ಲರೂ ಕುತೂಹಲದಿಂದ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ರೇಸ್ ಪ್ರಿಯರು ಸಕ್ಕತ್ ಖುಷಿಪಟ್ಟರು. ರಸ್ತೆಯಲ್ಲಿ ಕಾರ್ ಓಡಿಸುತ್ತಾ ತಮ್ಮ ಚಾಣಾಕ್ಷತೆ ತೋರುವ ಯುವ ಉತ್ಸಾಹಿ ರೇಡರ್​ಗಳಿಗೆ ಸರಿಯಾದ ಮೊಟಾರ್ ರೇಸ್ ಸ್ಪರ್ಧೆಯ ದಾರಿ ತೋರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಸ್ಪರ್ಧೆಗೆ ಹಾಸನ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ 90ಕ್ಕೂ ಹೆಚ್ಚು ಸ್ಪರ್ಧಿಗಳು ಗೆಲುವಿಗಾಗಿ ಸೆಣಸಾಡಿದರು.

ಸಕಲೇಶಪುರದ ಮಲ್ನಾಡ್ ಬಾಯ್ಸ್ ಸಂಸ್ಥೆಯಿಂದ ಕಾರ್​ ರೇಸ್​ ಆಯೋಜನೆಯಾಗಿತ್ತು

ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ್ದ 90ಕ್ಕೂ ಹೆಚ್ಚು ಸ್ಪರ್ಧಿಗಳು ಗೆಲುವಿಗಾಗಿ ಸೆಣಸಾಡಿದರು

ಇದನ್ನೂ ಒದಿ

ಕೊರೊನಾ ಎರಡನೇ ಅಲೆ: ಮಕ್ಕಳ ಬಗ್ಗೆ ಇರಲಿ ಎಚ್ಚರ, ಬೆಂಗಳೂರಿನಲ್ಲಿ ಕೊರೊನಾಗೆ ಚಿಕ್ಕ ಚಿಕ್ಕ ಮಕ್ಕಳು ಗುರಿ

ಕುಮಾರಸ್ವಾಮಿ, ದೇವರಾಜ್ ಬಗ್ಗೆ ಮಾತನಾಡಿದ್ದಕ್ಕೆ ಧಮ್ಕಿ.. ಕೊಲೆ ಬೆದರಿಕೆ; ಕಮಲ್ ಪಂತ್‌ಗೆ ದೂರು ನೀಡಿದ ಜೆಡಿಎಸ್ ಕಾರ್ಯಕರ್ತ