ಸಲ್ಲೇಖನ ವ್ರತ ಕೈಗೊಂಡ ಹುಬ್ಬಳ್ಳಿಯ ನೇಮಿಸಾಗರ ಮುನಿಗಳು; ರಾಜ್ಯದಲ್ಲೇ ಮೊದಲು

ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ 88 ವರ್ಷದ ಜೈನ ಮುನಿಗಳಿಂದ ಸಲ್ಲೇಖನ ವ್ರತ ಆಚರಣೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ‌ ಕಲ್ಲೋಳಿ ಗ್ರಾಮದ ಶ್ರೀ ನೇಮಿಸಾಗರ ಮಹಾರಾಜರಿಂದ ಕಳೆದ 22 ದಿನಗಳಿಂದ ಈ ಕಠಿಣ ಸಲ್ಲೇಖನ ವ್ರತ ನಡೆಯುತ್ತಿದೆ.

ಸಲ್ಲೇಖನ ವ್ರತ ಕೈಗೊಂಡ ಹುಬ್ಬಳ್ಳಿಯ ನೇಮಿಸಾಗರ ಮುನಿಗಳು; ರಾಜ್ಯದಲ್ಲೇ ಮೊದಲು
ನೇಮಿಸಾಗರ ಮುನಿಗಳು
Follow us
sandhya thejappa
|

Updated on: Mar 22, 2021 | 12:06 PM

ಹುಬ್ಬಳ್ಳಿ: ಸಾಮಾನ್ಯವಾಗಿ ಸಾಧು ಸಂತರು, ಮಠಾಧೀಶರು ತಮ್ಮ ಜೀವನದುದ್ದಕ್ಕೂ ಮಠಮಾನ್ಯಗಳಲ್ಲಿ ಜೀವನಗೈದು ತಮ್ಮ ಜೀವಿತಾವಧಿಯ ಕೊನೆಯಲ್ಲಿ ಲಿಂಗೈಕ್ಯ ಹೋಂದುವುದು ಸಾಮಾನ್ಯ. ಆದರೆ ಜೈನ ಸಮುದಾಯದ ಜೈನಮುನಿಗಳು ತಮ್ಮದೇ ಒಂದು ಸಂಪ್ರದಾಯ ಆಚಾರ ಬದ್ದವಾಗಿ ಕಠಿಣ ವ್ರತದ ಮೂಲಕ ತಮ್ಮ ಜೀವಿತಾವಧಿಯನ್ನ ಪೂರ್ಣಗೊಳಿಸುತ್ತಾರೆ. ಇಂತಹ ಕಠಿಣ ವ್ರತದ ಮೂಲಕ ಜಿಲ್ಲೆಯ ಜೈನಮುನಿಗಳು ತಮ್ಮ ದೇಹ ತ್ಯಾಗಕ್ಕಾಗಿ ಮುಂದಾಗಿದ್ದಾರೆ.

ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ 88 ವರ್ಷದ ಜೈನ ಮುನಿಗಳಿಂದ ಸಲ್ಲೇಖನ ವ್ರತ ಆಚರಣೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ‌ ಕಲ್ಲೋಳಿ ಗ್ರಾಮದ ಶ್ರೀ ನೇಮಿಸಾಗರ ಮಹಾರಾಜರಿಂದ ಕಳೆದ 22 ದಿನಗಳಿಂದ ಈ ಕಠಿಣ ಸಲ್ಲೇಖನ ವ್ರತ ನಡೆಯುತ್ತಿದೆ. ಈ ಮೊದಲು ಗ್ರಹಸ್ತರಾಗಿದ್ದ ನೇಮಿಸಾಗರ ಮುನಿಗಳು ಕಳೆದ 25 ವರ್ಷಗಳ ಹಿಂದೆ ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದು, ಇದೀಗ ಕಠಿಣ ಸಲ್ಲೇಖನ ವ್ರತ ಆಚರಿಸುವ ಮೂಲಕ ತಮ್ಮ ದೇಹ ತ್ಯಾಗಕ್ಕೆ ಮುಂದಾಗಿದ್ದಾರೆ.

ಮಲಗಿರುವ ನೇಮಿಸಾಗರ ಮುನಿ

ಹುಬ್ಬಳ್ಳಿ ತಾಲೂಕಿನ ವರೂರು ನವಗ್ರಹ ತೀರ್ಥ ಕ್ಷೇತ್ರ

ಕಠಿಣ ವ್ರತ ಕಳೆದ 22 ದಿನಗಳಿಂದ ಸಲ್ಲೇಖನ ವ್ರತ ಕೈಗೊಂಡಿರುವ ಜೈನ ಮುನಿಗಳು ಕಠಿಣ ರೀತಿಯ ವ್ರತಕ್ಕೆ ಮುಂದಾಗಿದ್ದಾರೆ. ಅಂದರೆ ಪ್ರತಿ ನಿತ್ಯ ಯಾವುದೇ ಆಹಾರ ಸೇವಿಸದೇ, ಹಣ್ಣು ಹಂಪಲು ಸೇವಿಸದೇ ಕೇವಲ 2 ಬೊಗಸೆ ನೀರು ಹಾಗೂ ದ್ರವರೂಪದ ಹಣ್ಣಿನ ರಸ ಸೇವಿಸುವ ಅವರು ಹಂತ ಹಂತವಾಗಿ, ದಿನದಿಂದ ದಿನಕ್ಕೆ ನೀರನ್ನೂ ಸಹ ತ್ಯಜಿಸುತ್ತಾರೆ. ಯಾವುದೇ ಸುಖಭೋಗಗಳನ್ನು ಬಯಸದೇ ಅತ್ಯಂತ ಕಠಿಣ ಪರಿಶ್ರಮ ಹಾಗೂ ಜೈನ ತೀರ್ಥಂಕರನ ಆರಾಧನೆ ಮಾಡುವ ಮೂಲಕ ತಮ್ಮ‌ ಜೀವನದುದ್ದಕ್ಕೂ ಅತ್ಯಂತ ಕಠಿಣ ರೀತಿಯ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ದೈವಿ ಭಕ್ತರಾಗಿ ಜೈನ‌ ಸಮುದಾಯದವರಲ್ಲಿ ದೈವಿ ಸಂಭೂತರಾಗಿದ್ದಾರೆ. ಇನ್ನು ಕರ್ನಾಟಕದಲ್ಲೇ ಈ ಮುನಿಗಳು ಸತತ 22 ದಿನಗಳ ಕಾಲ ಸಲ್ಲೇಖನ ವ್ರತ ಕೈಗೊಂಡಿರುವ ಏಕೈಕ ಮುನಿಗಳಾಗಿದ್ದು, ಈ ರೀತಿಯ ಕಠಿಣ ವ್ರತದ ಮೂಲಕ ತಮ್ಮ ಜೀವನ ತ್ಯಾಗಕ್ಕೆ ಮುಂದಾಗಿರುವುದು ವಿಶೇಷ.

ಇದನ್ನೂ ಓದಿ

ಶಿವಣ್ಣ ಮನೆ ಮುಂದೆ ಟೈಟ್ ಸೆಕ್ಯೂರಿಟಿ; ಶಿವರಾಜ್ ಕುಮಾರ್, ಬಿ.ಟಿ. ಲಲಿತಾ ನಾಯಕ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ..

ದಾವಣಗೆರೆ: ತಮ್ಮ ಸಮಸ್ಯೆಯನ್ನು ತಾವೆ ಬಗೆಹರಿಸಿಕೊಂಡ ದೇವರಳ್ಳಿ ಗ್ರಾಮದ ಜನರು; ಸುತ್ತುವರೆದ ರಾಜಕೀಯ ದ್ವೇಷ

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ