ಕುಮಾರಸ್ವಾಮಿ, ದೇವರಾಜ್ ಬಗ್ಗೆ ಮಾತನಾಡಿದ್ದಕ್ಕೆ ಧಮ್ಕಿ.. ಕೊಲೆ ಬೆದರಿಕೆ; ಕಮಲ್ ಪಂತ್‌ಗೆ ದೂರು ನೀಡಿದ ಜೆಡಿಎಸ್ ಕಾರ್ಯಕರ್ತ
ಹಾಪ್ ಕಾಮ್ಸ್ ದೇವರಾಜ್ರ ಬೆಂಬಲಿಗ ಶಿವುಸಾಗರ್, ಲಕ್ಷ್ಮೀಕಾಂತ್ ಅವರಿಗೆ ಕರೆ ಮಾಡಿ ಆವಾಚ್ಯ ಶಬ್ಧಗಳಿಂದ ನಿಂದಿನಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಕ್ಷ್ಮೀಕಾಂತ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಘಿಸಿದ್ದಾರೆ.
ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಹಾಗೂ ದೇವರಾಜ್ ಬಗ್ಗೆ ಮಾತನಾಡಿದ್ದಕ್ಕೆ ಧಮ್ಕಿ ಹಾಕಿ ಜೀವಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತ ಲಕ್ಷ್ಮೀಕಾಂತ್‌ಗೆ ದೂರು ದಾಖಲಿಸಿದ್ದಾರೆ. ಶಿವುಸಾಗರ್ ಎಂಬಾತನಿಂದ ಜೀವಬೆದರಿಕೆ ಇದೆ. ಅವನ ವಿರುದ್ಧ ಕ್ರಮಕೈಗೊಳ್ಳುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ಲಕ್ಷ್ಮೀಕಾಂತ್ ದೂರು ನೀಡಿದ್ದಾರೆ.
ಕುಮಾರಸ್ವಾಮಿ ಹಾಗೂ ಹಾಪ್ ಕಾಮ್ಸ್ ದೇವರಾಜ್ ಬಗ್ಗೆ ಮಾತನಾಡ ಬೇಡಿ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಹಾಪ್ ಕಾಮ್ಸ್ ದೇವರಾಜ್, ಕುಮಾರಸ್ವಾಮಿ ಅವರ ಆಪ್ತ ಹೀಗಾಗಿ ಇವರಿಬ್ಬರ ಬಗ್ಗೆ ಮಾತನಾಡುವಂತಿಲ್ಲ ಎಂದು ವಾರ್ನ್ ಮಾಡಿದ್ದಾರೆ. ಪೊಲೀಸರಿಗೆ ಸಿಗುವ ಲೈವ್ ಲೊಕೇಷನ್ ಇವರಿಗೆ ಹೇಗೆ ಸಿಕ್ತು. ತಪ್ಪು ಮಾಡಿದವರ ವಿರುದ್ಧ ನಾನು ಧ್ವನಿ ಎತ್ತಿದ್ದೇ ತಪ್ಪಾ? ಹೀಗಾಗಿ ಜೀವಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಲಕ್ಷ್ಮೀಕಾಂತ್ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೊಲೆ ಬೆದರಿಕೆ ಹಾಕಿದ್ದೇಕೆ? ಲಕ್ಷ್ಮೀಕಾಂತ್, ಮಾರ್ಚ್ 16 ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ JDS ಪಕ್ಷದ ಯುವ ಘಟಕ ಮತ್ತು ಪಕ್ಷದ ಮುಖಂಡರ ಕುರಿತು ಕಾರ್ಯಕರ್ತರಿಗೆ ಸ್ಪಂದಿಸದೆ ಹೋರಾಟವನ್ನು ರೂಪಿಸದಿರುವ ಕುರಿತು ವಿಮರ್ಶಕನಾಗಿ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ನೋಡಿದ ಹಾಪ್ ಕಾಮ್ಸ್ ದೇವರಾಜ್ರ ಬೆಂಬಲಿಗ ಶಿವುಸಾಗರ್, ಲಕ್ಷ್ಮೀಕಾಂತ್ ಅವರಿಗೆ ಕರೆ ಮಾಡಿ ಆವಾಚ್ಯ ಶಬ್ಧಗಳಿಂದ ನಿಂದಿನಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಕ್ಷ್ಮೀಕಾಂತ್ ತಮ್ಮ ದೂರು ಪ್ರತಿಯಲ್ಲಿ ಉಲ್ಲೇಘಿಸಿದ್ದಾರೆ.
ಇದನ್ನೂ ಓದಿ: ಶಿವಣ್ಣ ಮನೆ ಮುಂದೆ ಟೈಟ್ ಸೆಕ್ಯೂರಿಟಿ; ಶಿವರಾಜ್ ಕುಮಾರ್, ಬಿ.ಟಿ. ಲಲಿತಾ ನಾಯಕ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ..