ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 37 ವರ್ಷ!

ಬೆಂಗಳೂರಿನಿಂದ ಮದ್ರಾಸ್​ಗೆ ತೆರಳಿದ ಜಗ್ಗೇಶ್​ ಅವರು ಮಡದಿಯನ್ನು ಕರೆದುಕೊಂದು ಬಂದೇ ಬಿಟ್ಟಿದ್ದರು. ಆಗ ‘ಚಿತ್ರನಟನಿಂದ ಹುಡುಗಿಯ ಕಿಡ್ನಾಪ್​’ ಎಂದು ಸುದ್ದಿ ಪ್ರಕಟ ಆಗಿತ್ತು. ಈ ಅಪಹರಣದ ಕಿರಿಕ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು!

ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 37 ವರ್ಷ!
ಜಗ್ಗೇಶ್​-ಪರಿಮಳಾ ಮದುವೆ ಫೋಟೋ
Follow us
ಮದನ್​ ಕುಮಾರ್​
| Updated By: Digi Tech Desk

Updated on:Mar 22, 2021 | 1:34 PM

ನಟ ಜಗ್ಗೇಶ್​ ಅವರ ರಿಯಲ್​ ಲೈಫ್​ ಘಟನೆಗಳು ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಅದರಲ್ಲೂ ಪರಿಮಳಾ ಜೊತೆಗಿನ ಅವರ ಲವ್​ಸ್ಟೋರಿ ಸಖತ್​ ಸಿನಿಮೀಯವಾಗಿದೆ. ಅದು ಸುಪ್ರೀಂ ಕೋರ್ಟ್​ ಮೆಟ್ಟಿಲು ಕೂಡ ಏರಿತ್ತು. ಅದೇನೇ ಇದ್ದರೂ ಜಗ್ಗೇಶ್​ ಮತ್ತು ಪರಿಮಳಾ ದಾಂಪತ್ಯ ಜೀವನಕ್ಕೆ ಈಗ 37ರ ವಸಂತ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಈ ದಂಪತಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಜಗ್ಗೇಶ್​ ಮತ್ತು ಪರಿಮಳಾ ಅವರದ್ದು ಲವ್​ ಮ್ಯಾರೇಜ್​. ತುಂಬ ಚಿಕ್ಕ ವಯಸ್ಸಿನಲ್ಲಿಯೇ ಜಗ್ಗೇಶ್ ಪ್ರೀತಿಯಲ್ಲಿ ಬಿದ್ದಿದ್ದರು. ಆಗ ಪರಿಮಳಾ ಅವರಿಗೆ ಕೇವಲ 14 ವರ್ಷ. ಜಗ್ಗೇಶ್​ ಅವರಿಗೆ 19ರ ಪ್ರಾಯ. ಕೆಲವೇ ಕೆಲವು ಸ್ನೇಹಿತರ ಸಮ್ಮುಖದಲ್ಲಿ 1984ರ ಮಾ.22ರಂದು ಜಗ್ಗೇಶ್​ ಮತ್ತು ಪರಿಮಳಾ ರಿಜಿಸ್ಟರ್​ ಮ್ಯಾರೇಜ್​ ಆದರು.

ಮದುವೆಯಾದ ಮೂರನೇ ದಿನವೇ ಪರಿಮಳಾ ತಂದೆ ಬಂದು ಪರಿಮಳಾರನ್ನು ಕರೆದುಕೊಂಡು ಹೋದರು. ನಂತರ ಒಂದೂವರೆ ವರ್ಷ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ. ಬಳಿಕ ಬೆಂಗಳೂರಿನಿಂದ ಮದ್ರಾಸ್​ಗೆ ತೆರಳಿದ ಜಗ್ಗೇಶ್​ ಅವರು ಮಡದಿಯನ್ನು ಕರೆದುಕೊಂದು ಬಂದೇ ಬಿಟ್ಟರು. ಆಗ ‘ಚಿತ್ರನಟನಿಂದ ಹುಡುಗಿಯ ಕಿಡ್ನಾಪ್​’ ಎಂದು ಸುದ್ದಿ ಪ್ರಕಟ ಆಯಿತು. ಈ ಅಪಹರಣದ ಕಿರಿಕ್​ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿತ್ತು! ಆದರೆ ಅಲ್ಲಿಯೂ ಅವರಿಬ್ಬರ ಪ್ರೀತಿಗೆ ಜಯ ಸಿಕ್ಕಿತು.

ಮದುವೆ ನಂತರವೂ ಜಗ್ಗೇಶ್​ ಮತ್ತು ಪರಿಮಳಾ ತುಂಬ ಕಷ್ಟದ ಜೀವನ ನಡೆಸಿದರು. ಚಿತ್ರರಂಗದಲ್ಲಿ ಜಗ್ಗೇಶ್​ ಯಶಸ್ಸು ಕಾಣುತ್ತಿದ್ದಂತೆಯೇ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಅನೇಕ ಏಳು-ಬೀಳುಗಳನ್ನು ದಾಟಿಕೊಂಡು ಈ ಜೋಡಿ ಇಲ್ಲಿಯವರೆಗೂ ಬಂದಿದೆ. 37ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೆಲವು ಫೋಟೋಗಳನ್ನು ಜಗ್ಗೇಶ್​ ಹಂಚಿಕೊಂಡಿದ್ದಾರೆ.

‘ಋಣಾನುಬಂಧಂರೂಪೇಣಾಂ ಪಶುಪತ್ನಿಸುತಆಲಯ. Marrages are made in heaven. ಪ್ರೀತಿಸುವುದು ತಪ್ಪಲ್ಲಾ, ಪ್ರೀತಿಸಿದ ಮೇಲೆ ಬಾಳದಿರುವುದು ತಪ್ಪು. 22/3/1984 ನಾನು ಪರಿಮಳನಿಗೆ ತಾಳಿ ಕಟ್ಟಿ ಇಂದಿಗೆ 37 ವರ್ಷ! ನನ್ನ ಎಲ್ಲಾ ಗುಣ ಕಷ್ಟ ಸಹಿಸಿ ಹೆಜ್ಜೆ ಹಾಕಿ ಬದುಕಿದ ಮಡದಿಗೆ ಧನ್ಯವಾದ ಸಣ್ಣ ಪದ. ನನ್ನ ಎರಡನೇ ತಾಯಿ ಸ್ಥಾನ ನೀಡಿರುವೆ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಜಗ್ಗೇಶ್​ ನಟನಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ಗುರುಗಳ ನಿಧನ! ಕಂಬನಿ ಮಿಡಿದ ನವರಸ ನಾಯಕ

ನವರಸ ನಾಯಕ ಜಗ್ಗೇಶ್​ಗೆ ಹ್ಯಾಪಿ ಬರ್ತ್​​ಡೇ ಹೇಳಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್!

Published On - 1:06 pm, Mon, 22 March 21