ದಿನ ಕಳೆದಂತೆ ಕುಗ್ಗುತ್ತಿದೆ ಕೊರೊನಾ ಹಾವಳಿ; ರಾಜ್ಯದಲ್ಲಿಂದು 1,196 ಕೇಸ್​ ದೃಢ

| Updated By: ಸಾಧು ಶ್ರೀನಾಥ್​

Updated on: Dec 14, 2020 | 11:44 AM

ಸೋಂಕಿತರ ಪೈಕಿ 8,72,038 ಜನ ಗುಣಮುಖರಾಗಿ ಡಿಸ್ಚಾರ್ಜ್. 17,409 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಿನ ಕಳೆದಂತೆ ಕುಗ್ಗುತ್ತಿದೆ ಕೊರೊನಾ ಹಾವಳಿ; ರಾಜ್ಯದಲ್ಲಿಂದು 1,196 ಕೇಸ್​ ದೃಢ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿದ್ದ ಕೊರೊನಾ ಹಾವಳಿ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ದಿನೇದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಹೊಸದಾಗಿ 1,196 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 9,01,410ಕ್ಕೇರಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ. ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 11,944 ಜನರ ಸಾವನಪ್ಪಿದ್ದಾರೆ. ಸೋಂಕಿತರ ಪೈಕಿ 8,72,038 ಜನ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದಾರೆ. 17,409 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿಂದು 672 ಹೊಸ ಕೊರೊನಾ ಕೇಸ್ ಪತ್ತೆ ಆಗಿದೆ. ಐವರ ಪೈಕಿ ಮೂವರು ಬೆಂಗಳೂರಿನಲ್ಲೇ ಮೃತಪಟ್ಟಿದ್ದಾರೆ. ಗದಗದಲ್ಲಿ ಇಂದು ಒಂದೇ ಒಂದು ಕೇಸ್​ ಕೂಡ ಪತ್ತೆ ಆಗಿಲ್ಲ ಅನ್ನೋದು ವಿಶೇಷ. ಜನವರಿ ವೇಳೆಗೆ ಕೊರೊನಾ ಔಷಧ ಭಾರತದಲ್ಲಿ ಸಿಗುವ ನಿರೀಕ್ಷೆ ಇದೆ. ಅದಕ್ಕೂ ಮೊದಲೇ ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಖುಷಿಯ ವಿಚಾರ.

BJP ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಕೊರೊನಾ ಪಾಸಿಟಿವ್‌‌, ಹೋಂ ಐಸೋಲೇಷನ್​ನಲ್ಲಿ ಚಿಕಿತ್ಸೆ

Published On - 8:27 pm, Sun, 13 December 20