ದಾವಣಗೆರೆಯ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾಯ್ತು ಕೊರೊನಾರ್ಭಟ; 38ಕ್ಕೂ ಹೆಚ್ಚು ಗ್ರಾಮದ ಜನರಿಗೆ ಸೋಂಕು

| Updated By: Digi Tech Desk

Updated on: May 17, 2021 | 9:53 AM

Davanagere News: ದಾವಣಗೆರೆಯ ನಗರ ಪ್ರದೇಶದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಕೊರೊನಾ ಈಗ ಹಳ್ಳಿಗಳತ್ತ ಪಯಣ ಬೆಳೆಸಿದೆ. ಜಿಲ್ಲೆಯ 38ಕ್ಕೂ ಹೆಚ್ಚು ಗ್ರಾಮಗಳಿಗೆ ಅಂದ್ರೆ ಇಡೀ ಜಿಲ್ಲೆಯನ್ನ ಕೊರೊನಾ ಆವರಿಸಿಕೊಂಡಿದೆ. ಹೀಗೆ ಹಳ್ಳಿಗೆ ನುಗ್ಗಿದ ಕೊರೊನಾ ಕಂಟ್ರೋಲ್ ಮಾಡುವುದೇ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ದಾವಣಗೆರೆಯ ಹಳ್ಳಿ ಹಳ್ಳಿಗಳಲ್ಲಿ ಹೆಚ್ಚಾಯ್ತು ಕೊರೊನಾರ್ಭಟ; 38ಕ್ಕೂ ಹೆಚ್ಚು ಗ್ರಾಮದ ಜನರಿಗೆ ಸೋಂಕು
ಪ್ರಾತಿನಿಧಿಕ ಚಿತ್ರ
Follow us on

ದಾವಣಗೆರೆ: ಕೊರೊನಾ ಬೆಣ್ಣೆನಗರಿ ದಾವಣಗೆರೆಯಲ್ಲಿ ಸೋಂಕಿನ ಸುನಾಮಿಯನ್ನೇ ಎಬ್ಬಿಸಿದೆ. ಕಳೆದ ಒಂದು ವಾರದಲ್ಲಿ 200 ಸಕ್ರಿಯ ಸೋಂಕಿತರ ಸಂಖ್ಯೆ ಈಗ ಸಾವಿರ ಸಾವಿರ ಗಡಿ ದಾಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಈಗ ಬರೋಬ್ಬರಿ 38ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡಿದೆ. ಇನ್ನೇನು ಕೊರೊನಾ ಆಟ ಮುಗಿಯಿತು ಅನ್ನುವಾಗ ಡೆಡ್ಲಿ ವೈರಸ್‌ ನಗರ ಬಿಟ್ಟು ಹಳ್ಳಿಗಳಿಗೆ ಒಕ್ಕರಿಸುತ್ತಿದೆ. ಈ ಮೊದಲು ಕೇವಲ ನಗರ ಹಾಗೂ ಕೆಲಪ್ರದೇಶದಲ್ಲಿ ಮಾತ್ರ ಸೋಂಕು ಕಾಣಿಸಿತ್ತು. ಆದ್ರೀಗ ಹಳ್ಳಿಗೆ ಕೊರೊನಾ ಅಂಟಿಕೊಂಡಿದ್ದು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ.

ಇನ್ನು ಹಳ್ಳಿ ಹಳ್ಳಿಗಳಿಗೆ ಈ ಸೋಂಕು ನುಗ್ಗಿದ್ದು ಹೇಗೆ ಎಂಬುದೇ ತಿಳಿಯುತ್ತಿಲ್ಲ. ನ್ಯಮತಿ ತಾಲೂಕಿನ ರಾಮೇಶ್ವರದಲ್ಲಿ 70ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ಬಂದು ಇಬ್ಬರು ಸಾವನ್ನಪ್ಪಿದ್ದಾರೆ. ಹಾಗೇ ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿ ಕೊವಿಡ್ ಕೇರ್ ಸೆಂಟರ್‌ ಮಾಡಲಾಗಿದೆ. ಆದ್ರೆ ಅಲ್ಲಿ ವ್ಯವಸ್ಥೆ ಸರಿಯಿಲ್ಲ ಎಂದು ಸೋಂಕಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ಹೆಚ್ಚಾದ್ರೆ ಕಂಟ್ರೋಲ್ ಮಾಡುವುದು ಬಹಳ ಕಷ್ಟವಾಗುತ್ತೆ. ಹೀಗಾಗಿ ಒಂದು ಮನೆಯಲ್ಲಿ ಪಾಸಿಟಿವ್ ಬಂದ್ರೆ ಇಡೀ ಕುಟುಂಬದ ಸದಸ್ಯರಿಗೆ ಮೆಡಿಕಲ್ ಕಿಟ್ ನೀಡಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ.

ಕೊರೊನಾ ಹಳ್ಳಿ ಹಳ್ಳಿಗೆ ನುಗ್ಗುತ್ತಿರುವುದರಿಂದ ಸೋಂಕು ಹೆಚ್ಚಾಗುವ ಭಯ ಕಾಡುತ್ತಿದೆ. ಹೀಗಾಗಿ ನಗರದಿಂದ ಹಳ್ಳಿಗೆ ಹಾರಿದ ಮಹಾಮಾರಿಗೆ ಯಾರ ಬಲಿಯಾಗದಂತೆ ಜಿಲ್ಲಾಡಳಿತ ನಿಗಾ ವಹಿಸಬೇಕಾಗಿದೆ.

ಇದನ್ನೂ ಓದಿ: ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ; ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ

Published On - 9:31 am, Mon, 17 May 21