ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ; ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ

ರಂಗಮಾಧ್ಯಮ ‌ಕಲಾತಂಡ ಹಾಗೂ ‌ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ‌ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲಾ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ ಯುದ್ಧ ಭಾರತ ನಾಟಕವನ್ನು ಪ್ರದರ್ಶಿಸಿದ್ದರು.

ಹಿರಿಯ ರಂಗಕಲಾವಿದೆ ಶೋಭಾ ರಂಜೋಳಕರ್ ಇನ್ನಿಲ್ಲ; ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ
ಶೋಭಾ ರಂಜೋಳಕರ್
Follow us
preethi shettigar
|

Updated on: May 17, 2021 | 9:03 AM

ಕಲಬುರಗಿ: ಹಿರಿಯ ರಂಗಕಲಾವಿದೆ, ರಂಗ ನಿರ್ದೇಶಕಿ ಹಾಗೂ ಚಿತ್ರನಟಿ ಶೋಭಾ ರಂಜೋಳಕರ್ (67) ನಿನ್ನೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ತೆಲಂಗಾಣದ ಕೋಡಂಗಲ್​ನವರಾದ ಶೋಭಾ ಅವರನ್ನು ಸೇಡಂನ ರಂಜೋಳದ ಎಂಜಿನಿಯರ್ ‌ಭೀಮರಾವ ಕುಲಕರ್ಣಿ ಅವರಿಗೆ ಮದುವೆ ಮಾಡಿಕೊಡಲಾಯಿತು. ಅಂದಿನಿಂದ ತಮ್ಮ ಮನೆತನದ ಹೆಸರನ್ನು ರಂಜೋಳಕರ ಎಂದು ಕರೆಸಿಕೊಂಡರು.

ರಂಗಮಾಧ್ಯಮ ‌ಕಲಾತಂಡ ಹಾಗೂ ‌ಸಂಗಮೇಶ್ವರ ಮಹಿಳಾ ಮಂಡಳದ ಮೂಲಕ ನಾಟಕಗಳನ್ನು ‌ನಿರ್ಮಿಸಿ ಅಭಿನಯಿಸಿದ್ದಾರೆ. ಕಳೆದ ವರ್ಷ ನಗರದ ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಎಲ್ಲಾ 35 ಪಾತ್ರಗಳಲ್ಲಿ ಮಹಿಳೆಯರೇ ಇದ್ದ ಯುದ್ಧ ಭಾರತ ನಾಟಕವನ್ನು ಪ್ರದರ್ಶಿಸಿದ್ದರು. ಡಾ.ಚಂದ್ರಶೇಖರ ‌ಕಂಬಾರರೊಂದಿಗೆ ಬೆಳದಿಂಗಳಾಗಿ ಬಾ ಸೇರಿದಂತೆ ಮಹಾದಾಸೋಹಿ ಶರಣಬಸವೇಶ್ವರ, ಗೌತಮ್ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಖರೋಖರ, ಅನೆಬಂತಾನೆ, ಹರಕೆ ಕುರಿ, ಕೇಳು ಜನಮೇಜಯ, ಶಾಂತತಾ ಕೋರ್ಟ ಚಾಲೂ ಆಹೆ, ಆಧುನಿಕ ದ್ರೋಣ, ಕಾಡುಕುದುರೆ, ಶರಣು ಶರಣಾರ್ಥಿ, ನಾಪತ್ತೆಯಾದ ಪ್ರೇಮಪ್ರಸಂಗ, ಮಾತನಾಡುವ ಟೊಂಗೆಗಳು, ನೆಳಲಿಯ ಪ್ರಸಂಗ, ಜೈಸಿದನಾಯಕ, ಓಕಳಿ, ಅಮೀನಪುರದ ಸಂತೆ, ಗ್ರಹಣ, ಹುಲಿಯ ‌ನೆರಳು, ಹಾಸ್ಯ ತರಂಗ, ಅಳಿಯನ ಅವಾಂತರ, ಜೀವನಚಕ್ರ, ಜೀವನ ಸಂಘರ್ಷ, ಲಕ್ಕವ್ವನ ಮಂದಿ, ಸ್ತ್ರೀಲೋಕ ಮತ್ತಿತರ ನಾಟಕಗಳಲ್ಲಿ ಅಭಿನಯಿಸಿದ್ದರು.

ಇದನ್ನೂ ಓದಿ:

Coronavirus: ಬೆಳಗಾವಿ, ಬಾಗಲಕೋಟೆಯಲ್ಲಿ ನಿಲ್ಲದ ಶಿಕ್ಷಕರ ಸಾವು; ಬೆಂಗಳೂರಿನಲ್ಲಿ ಬಿಬಿಎಂಪಿಯ 14 ಅಧಿಕಾರಿಗಳು ನಿಧನ

Covid-19 Karnataka Update: ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 41,664 ಜನರಿಗೆ ಕೊವಿಡ್ ಸೋಂಕು ದೃಢ, 349 ಜನರು ನಿಧನ