ನಾಳೆ ಬೆಳಗ್ಗೆಯಿಂದಲೇ ಇಡೀ ರಾಜ್ಯ ಲಾಕ್ಡೌನ್.. 10 ಗಂಟೆ ಬಳಿಕ ಹೊರಗೆ ಕಾಣಿಸಿಕೊಂಡ್ರೆ ಬೀಳುತ್ತೆ ಕೇಸ್, ಫೈನ್
ಇಷ್ಟು ದಿನ ಬೇಕಾಬಿಟ್ಟಿಯಾಗಿ ತಿರುಗಾಡಿದ್ರಿ.. ಪೊಲೀಸ್ರು ಎಷ್ಟೇ ಹೇಳಿದ್ರೂ ಕೇಳದೇ ಓಡಾಡಿದ್ರಿ.. ಕೆಲಸದ ನೆಪ ಮಾಡ್ಕೊಂಡು ಬೈಕ್ನಲ್ಲಿ ಸುತ್ತಾಡಿದ್ರಿ.. ಆದ್ರೆ, ಇನ್ಮುಂದೆ ಪರಿಸ್ಥಿತಿ ಬೇರೆಯದ್ದೇ ಇರುತ್ತೆ.. ಅನಗತ್ಯವಾಗಿ ಹೊರಬರೋದು, ಬೇಕಾಬಿಟ್ಟಿಯಾಗಿ ತಿರುಗಾಡೋಕೆ ಚಾನ್ಸೇ ಇರಲ್ಲ. ಯಾಕಂದ್ರೆ ನಾಳೆ ಬೆಳಗಾದ್ರೆ ಸಾಕು ಇಡೀ ಕರುನಾಡಿಗೆ ಕರುನಾಡೇ ಕಂಪ್ಲೀಟ್ ಲಾಕ್‌ಡೌನ್ ಆಗಲಿದೆ.
ಬೆಂಗಳೂರು: ಮಹಾಮಾರಿ ಕೊರೊನಾ ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ಕೈಗೊಳ್ಳುತ್ತಿದ್ದು ನಾಳೆಯಿಂದ ಇಡೀ ರಾಜ್ಯ ಲಾಕ್ ಆಗಲಿದೆ. ಇವತ್ತೊಂದೇ ದಿನ ಅಷ್ಟೇ.. ನಾಳೆ ಬೆಳಗಾಗ್ತಿದ್ದಂತೆ ರಾಜ್ಯದಲ್ಲಿ ಲಾಕ್ಡೌನ್ ಶುರುವಾಗಲಿದೆ. ನಾಳೆಯಿಂದ 14 ದಿನ ಬೆಂಗಳೂರು ಸೇರಿ ಇಡೀ ಕರ್ನಾಟಕ ರಾಜ್ಯ ಲಾಕ್ಡೌನ್ ಆಗಲಿದ್ದು, ಸುಖಾಸುಮ್ಮನೆ ಯಾರೊಬ್ಬರನ್ನೂ ಹೊರಬರೋಕೆ ಬಿಡಲ್ಲ ಅಂತಾ ಸ್ವತಃ ಸರ್ಕಾರವೇ ಖಡಕ್ ಆಗಿ ಹೇಳಿದೆ.
ನಾಳೆ ಬೆಳಗ್ಗೆ 6ರಿಂದಲೇ ಕಠಿಣಾತಿಕಠಿಣ ರೂಲ್ಸ್ ಕೊರೊನಾ ಕಟ್ಟಿ ಹಾಕೋಕೆ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್, ಇನ್ನು ಕೆಲವೇ ಗಂಟೆಗಳಲ್ಲಿ ಜಾರಿ ಆಗಲಿದೆ. ಅಂದ್ರೆ ನಾಳೆ ಬೆಳಗ್ಗೆ 6ರಿಂದಲೇ ಇಡೀ ಕರುನಾಡಿಗೆ ಬೀಗ ಬೀಳಲಿದ್ದು, ಹಿಂದೆಂದಿಗಿಂತಲೂ ಈ ಬಾರಿ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸರ್ಕಾರ ಸಜ್ಜಾಗಿದೆ. ಯಾರಾದ್ರೂ ಅನಗತ್ಯವಾಗಿ ಹೊರಬಂದ್ರೆ, ಕುಂಟು ನೆಪ ಹೇಳ್ಕೊಂಡು ಹೊರಬಂದ್ರೆ ಪೊಲೀಸರು ತಕ್ಕ ಶಾಸ್ತಿ ಮಾಡೋಕೆ ಸಜ್ಜಾಗಿ ನಿಂತಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆ ದಾಟಿದ್ರೆ ಯಾರೂ ರಸ್ತೆಗಿಳಿಯುವಂತಿಲ್ಲ! ಹಾಲು, ಹಣ್ಣು, ತರಕಾರಿ, ದಿನಸಿ ಖರೀದಿ ಮಾಡೋರಿದ್ರೆ ಇವತ್ತೊಂದು ದಿನ ಮಾತ್ರವೇ ಸಂಜೆ 6 ಗಂಟೆಯವರೆಗೂ ಸಮಯಾವಕಾಶ ಅಷ್ಟೇ.. ಇವತ್ತೊಂದು ದಿನ ಕಳೆದ್ರೆ ಕೇವಲ 4 ಗಂಟೆಗಳ ಬದುಕು ಮಾತ್ರ. ಯಾಕಂದ್ರೆ ನಾಳೆಯಿಂದ ಬೆಳಗ್ಗೆ 6ರಿಂದ ಬೆಳಗ್ಗೆ 10ರವರೆಗೆ ಮಾತ್ರವೇ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತೆ. ಈ ಅವಧಿಯಲ್ಲಿ ಮಾತ್ರ ನೀವು ನಿಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದು. ಆದ್ರೆ, ಅಗತ್ಯ ವಸ್ತುಗಳ ಖರೀದಿಯ ಸಮಯ ಮುಗಿಯುತ್ತಿದ್ದಂತೆ, ಒಳಗಿದ್ದವರು ಒಳಗೇ ಹೊರಗಿದ್ದವರು ಹೊರಗೇ ಲಾಕ್ ಆಗೋದು ಗ್ಯಾರಂಟಿ.. ಯಾಕಂದ್ರೆ, ಹತ್ತು ಗಂಟೆ ನಂತ್ರ ಯಾರೊಬ್ಬರೂ ರಸ್ತೆಗೆ ಬರುವಂತಿಲ್ಲ. ಅದನ್ನೂ ಮೀರಿ ಹೊರಗೆ ಬಂದ್ರೆ ಲಾಠಿ ಏಟಿನ ಜೊತೆ ಕೇಸ್ ಫಿಕ್ಸ್.
ಒಟ್ನಲ್ಲಿ, 14 ದಿನಗಳ ಲಾಕ್ಡೌನ್ಗೆ ಇವತ್ತೊಂದೇ ದಿನ ಬಾಕಿ ಇದೆ. ನಾಳೆ ಬೆಳಗಾದ್ರೆ ಸಾಕು ಕಠಿಣಾತಿಕಠಿಣ ಲಾಕ್ಡೌನ್ ಜಾರಿಯಾಗಲಿದೆ. ಲಾಕ್ಡೌನ್ ಟೈಮ್ನಲ್ಲಿ ಯಾರಾದ್ರೂ ಅನಗತ್ಯವಾಗಿ ಹೊರಬಂದ್ರೆ ಗುನ್ನಾ ತಪ್ಪಿದ್ದಲ್ಲ. ಸೋ ಬಿ ಕೇರ್‌ಫುಲ್.
ಇದನ್ನೂ ಓದಿ: Karnataka Lockdown: ಕರ್ನಾಟಕ ಲಾಕ್ಡೌನ್; ಕೊರೊನಾ ತಡೆಗೆ ಮೇ 10ರಿಂದ 24ರವರೆಗೆ ಇನ್ನಷ್ಟು ಬಿಗಿ ಕ್ರಮ