ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ, ಆತನಿಗೆ ಅನಂತಪುರದಲ್ಲೇ ಸೋಂಕು ತಗುಲಿತ್ತು

|

Updated on: May 14, 2020 | 11:04 AM

ಬೆಂಗಳೂರು: ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಆಂಧ್ರ ಮೂಲದ 796ನೇ ಸೋಂಕಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಅನಂತಪುರದಲ್ಲೇ ಸೋಂಕು ತಗುಲಿತ್ತು: ಬುಲ್ ಟೆಂಪಲ್ ರಸ್ತೆಯ ಶೇಖರ್ ಆಸ್ಪತ್ರೆಗೆ ಈ ಕೊರೊನಾ ಸೋಂಕಿತ ವ್ಯಕ್ತಿ ಬಿಪಿ ಹಾಗೂ ಶುಗರ್ ಡೌನ್ ಆಗಿದೆ ಎಂದು ಅನಂತಪುರ ಜಿಲ್ಲೆಯಿಂದ ಚಿಕಿತ್ಸೆಗೆ ಬಂದಿದ್ರು. ಈ ವೇಳೆ ವೈದ್ಯರು ಅವರಿಗೆ ಕೊರೊನಾ ಟೆಸ್ಟ್ ಮಾಡಿದ್ದಾರೆ. ಆಗ ಅವರಿಗೆ ಕೊರೊನಾ ಪಾಸಿಟಿವ್ […]

ಬೆಂಗಳೂರಿನಲ್ಲಿ ಕೊರೊನಾಗೆ ಮತ್ತೊಂದು ಬಲಿ, ಆತನಿಗೆ ಅನಂತಪುರದಲ್ಲೇ ಸೋಂಕು ತಗುಲಿತ್ತು
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಅಟ್ಟಹಾಸಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಆಂಧ್ರ ಮೂಲದ 796ನೇ ಸೋಂಕಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.

ಅನಂತಪುರದಲ್ಲೇ ಸೋಂಕು ತಗುಲಿತ್ತು:

ಬುಲ್ ಟೆಂಪಲ್ ರಸ್ತೆಯ ಶೇಖರ್ ಆಸ್ಪತ್ರೆಗೆ ಈ ಕೊರೊನಾ ಸೋಂಕಿತ ವ್ಯಕ್ತಿ ಬಿಪಿ ಹಾಗೂ ಶುಗರ್ ಡೌನ್ ಆಗಿದೆ ಎಂದು ಅನಂತಪುರ ಜಿಲ್ಲೆಯಿಂದ ಚಿಕಿತ್ಸೆಗೆ ಬಂದಿದ್ರು. ಈ ವೇಳೆ ವೈದ್ಯರು ಅವರಿಗೆ ಕೊರೊನಾ ಟೆಸ್ಟ್ ಮಾಡಿದ್ದಾರೆ. ಆಗ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು.

ಮತಿಗೇಡಿಯಿಂದ ಪತ್ನಿ, ವಾರ್ಡ್ ಬಾಯ್​ಗೂ ಸೊಂಕು!

ಈ ಮೊದಲೇ ಅನಂತಪುರದಲ್ಲಿ ಸ್ವಾಬ್ ಟೆಸ್ಟ್ ಮಾಡಿಸಿಕೊಂಡಿದ್ದ ಮೃತ ಸೋಂಕಿತ, ವರದಿ ಬರುವ ಮುನ್ನವೇ ಬೆಂಗಳೂರಿಗೆ ಆಗಮಿಸಿದ್ರು. ಚಾಮರಾಜಪೇಟೆಯ ತನ್ನ ಸಂಬಂಧಿಕರ ವಿಳಾಸ ನೀಡಿ ಆಸ್ಪತ್ರೆಗೆ ದಾಖಲಾಗಿದ್ರು. ಮೃತ ಸೋಂಕಿತ ವ್ಯಕ್ತಿಯಿಂದ ಆತನ ಪತ್ನಿ ಹಾಗೂ ವಾರ್ಡ್ ಬಾಯ್​ಗೂ ಸೊಂಕು ತಗುಲಿತ್ತು.

Published On - 9:08 am, Thu, 14 May 20