ಬೆಂಗಳೂರು: ಕೊರೊನಾ ಲಸಿಕೆ ಪಡೆದವರು ಮದ್ಯ ಸೇವಿಸುವಂತಿಲ್ಲ ಎಂದು ಕೊವಿಡ್ ಸಲಹಾ ಸಮಿತಿ ತಜ್ಞ ಸದಸ್ಯರು ಅಭಿಪ್ರಾಯ ತಿಳಿಸಿದ್ದಾರೆ. ಕೊವಿಡ್ ವಿರುದ್ಧದ ಲಸಿಕೆ ಪಡೆದ ಬಳಿಕ ಆಹಾರ ಸೇವನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಮದ್ಯಪಾನ ಮಾಡುವಂತಿಲ್ಲ ಎಂದು ತಜ್ಞರು ಸೂಚನೆ ನೀಡಿದ್ದಾರೆ. ಲಸಿಕೆಯ 2ನೇ ಡೋಸ್ ಪಡೆದ 15 ದಿನಗಳವರೆಗೆ ಮದ್ಯ ಸೇವಿಸಬಾರದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ರಿಯಾಕ್ಷನ್ ಆದರೆ ಅಥವಾ ಅಲರ್ಜಿ, ಅನಾರೋಗ್ಯ ಕಂಡುಬಂದರೆ, ಲಸಿಕೆಯ 2ನೇ ಡೋಸ್ ತೆಗೆದುಕೊಳ್ಳುವುದು ಬೇಡ. ಇಲ್ಲವಾದಲ್ಲಿ ವೈದ್ಯರ ಪರಿಶೀಲನೆ ನಂತರ ಲಸಿಕೆಯ ಎರಡನೇ ಡೋಸ್ ನೀಡಲಾಗುತ್ತದೆ ಎಂದು ತಜ್ಞರ ಸಮಿತಿ ತಿಳಿಸಿದೆ. ಕೊರೊನಾ ಲಸಿಕೆ ಪಡೆದ ನಂತರ ಆಹಾರ ಸೇವನೆ ಎಂದಿನಂತೆ ಮುಂದುವರೆಸಬಹುದು. ಇಂಥದೇ ಅಹಾರ ಸೇವನೆ ಮಾಡಬೇಕು ಅಥವಾ ಮಾಡಬಾರದು ಎಂದೇನೂ ಇಲ್ಲ. ಆದರೆ, ಮದ್ಯ ಮಾತ್ರ ಸೇವನೆ ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಲಸಿಕೆ ಪಡೆಯಲು ಹಿಂದೇಟು ಹಾಕಿದ್ದ ನರ್ಸ್ಗೆ ತಿಳಿಯಹೇಳಿ, ಮನವೊಲಿಸಿದ ಮಾಜಿ ಆರೋಗ್ಯ ಸಚಿವ ಶ್ರೀರಾಮುಲು
Published On - 3:57 pm, Sat, 16 January 21