ಕೊರೊನಾ ಬರದಂತೆ ರಕ್ಷಿಸುವಲ್ಲಿ ಲಸಿಕೆ ಯಶಸ್ವಿ.. ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ

|

Updated on: May 25, 2021 | 12:03 PM

ಮೊದಲ‌ ಡೋಸ್ ಪಡೆದ 3-4 ವಾರದ ನಂತರ ಕೆಲವರು ಕೊರೊನಾಗೆ ಬಲಿಯಾಗಿದ್ದರು. ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ 1907 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 65 ವರ್ಷ ಮೇಲ್ಪಟ್ಟ 190 ಜನ ಕೊರೊನಾ ಮೊದಲ ಲಸಿಕೆ ಪಡೆದಿದ್ರು. ಕೇವಲ ಮೊದಲ ಡೋಸ್ ಪಡೆದಿದ್ದ 190 ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಎರಡನೇ ಹಂತದ ಲಸಿಕೆ ಪಡೆಯುವ ಮುನ್ನವೇ ಕೊರೊನಾಗೆ ಬಲಿಯಾಗಿದ್ದಾರೆ.

ಕೊರೊನಾ ಬರದಂತೆ ರಕ್ಷಿಸುವಲ್ಲಿ ಲಸಿಕೆ ಯಶಸ್ವಿ.. ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ
ಕೊರೊನಾ ಲಸಿಕೆ
Follow us on

ಬೆಂಗಳೂರು: ಮಹಾಮಾರಿ ಕೊರೊನಾ ಸಾವು ತಡೆಗಟ್ಟುವಲ್ಲಿ ಕೊರೊನಾ ಲಸಿಕೆ ಯಶಸ್ವಿಯಾಗಿದೆ. ಲಸಿಕೆ ಪಡೆದರೆ ಸಾವಿನ ಪ್ರಮಾಣ ತಡೆಯಬಹುದು ಎಂಬ ಮಾತು ಈಗ ನಿಜವಾಗಿದೆ. ಏಕೆಂದರೆ ಸಾವಿನ ಪ್ರಮಾಣವನ್ನು ಲಸಿಕೆ ಕಡಿಮೆ ಮಾಡಿದೆ. ಈ ಹಿಂದೆ ಕೂಡ ಈ ಬಗ್ಗೆ ಬಾಗಲಕೋಟೆಯಲ್ಲಿ ತಜ್ಞರು ಅಧ್ಯಯನ ನಡೆಸಿ ಲಸಿಕೆ ಪರಿಣಾಮಕಾರಿ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಮೊದಲ‌ ಡೋಸ್ ಪಡೆದ 3-4 ವಾರದ ನಂತರ ಕೆಲವರು ಕೊರೊನಾಗೆ ಬಲಿಯಾಗಿದ್ದರು. ಬೆಂಗಳೂರಿನಲ್ಲಿ ಏಪ್ರಿಲ್‌ನಲ್ಲಿ 1907 ಜನ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 65 ವರ್ಷ ಮೇಲ್ಪಟ್ಟ 190 ಜನ ಕೊರೊನಾ ಮೊದಲ ಲಸಿಕೆ ಪಡೆದಿದ್ರು. ಕೇವಲ ಮೊದಲ ಡೋಸ್ ಪಡೆದಿದ್ದ 190 ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಎರಡನೇ ಹಂತದ ಲಸಿಕೆ ಪಡೆಯುವ ಮುನ್ನವೇ ಕೊರೊನಾಗೆ ಬಲಿಯಾಗಿದ್ದಾರೆ.

ರಾಜ್ಯದಲ್ಲಿ ಎರಡು ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ
ಇನ್ನು ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಮೊದಲ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರೇ ಅತಿ ಹೆಚ್ಚು ಜನ ಮೃತಪಟ್ಟಿದ್ದರು. 50 ವರ್ಷ ಮೇಲ್ಪಟ್ಟ 10,212 ಜನ ಕೊರೊನಾಗೆ ಬಲಿಯಾಗಿದ್ದರು. ಎರಡನೇ ಅಲೆಯಲ್ಲಿ 50 ವರ್ಷ ಮೇಲ್ಪಟ್ಟವರಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿತ್ತು. 7832 ಜನ ಬಲಿಯಾಗಿದ್ದರು. 50 ವರ್ಷದವರ ಸಾವು ಶೇ.23.62% ಇಳಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಲಸಿಕೆ ಪಡೆದಿರುವುದು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನವನ್ನು ಸರ್ಕಾರ ಕೈಗೊಂಡಿದ್ದು ಅದು ಯಶಸ್ವಿಯಾಗಿದೆ.

ಇನ್ನು ಲಸಿಕೆ ಪಡೆದ ನಂತರವೂ ಸಾವನ್ನಪ್ಪಿದ್ದವರ ಪೈಕಿ ಕೆಲವರಿಗೆ ಮಾರಣಾಂತಿಕ ಖಾಯಿಲೆಗಳಿದ್ದವು. ಹೀಗಾಗಿ ಸೋಂಕಿತರಿಗೆ ಸಾವು ಸಂಭವಿಸಿದೆ ಎಂಬ ಬಗ್ಗೆ ವರದಿಯಾಗಿದೆ. ಲಸಿಕೆ ರಾಜ್ಯದಲ್ಲಿ ಒಳ್ಳೆಯ ಪರಿಣಾಮಬೀರಿದೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆ, ಬಾಗಲಕೋಟೆಯಲ್ಲಿ ತಜ್ಞರ ಅಧ್ಯಯನ