ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆ, ಬಾಗಲಕೋಟೆಯಲ್ಲಿ ತಜ್ಞರ ಅಧ್ಯಯನ

ಕೊವಿಡ್ ಲಸಿಕೆ ಪಡೆದವರಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎಂದು ಬಾಗಲಕೋಟೆ ಖಾಸಗಿ ವೈದ್ಯರ ಅಧ್ಯಯನದಿಂದ ಮಾಹಿತಿ ತಿಳಿದು ಬಂದಿದೆ. ಇನ್ನು ಇದೇ ರೀತಿ ಲಸಿಕೆ ಪಡೆದವರಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿತ್ತು.

ಲಸಿಕೆ ಹಾಕಿಸಿಕೊಂಡರೆ ಕೊರೊನಾ ಸೋಂಕು ತಗುಲುವ ಅಪಾಯ ಕಡಿಮೆ, ಬಾಗಲಕೋಟೆಯಲ್ಲಿ ತಜ್ಞರ ಅಧ್ಯಯನ
ಕೊರೊನಾ ಲಸಿಕೆ (ಸಂಗ್ರಹ ಚಿತ್ರ)
Follow us
ಆಯೇಷಾ ಬಾನು
|

Updated on: May 23, 2021 | 7:56 AM

ಬಾಗಲಕೋಟೆ: ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ದೇಶಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಆದರೆ ಅನೇಕರಲ್ಲಿ ಲಸಿಕೆಯಿಂದ ಸೈಡ್ ಎಫೆಕ್ಟ್ ಹೆಚ್ಚು. ಲಸಿಕೆ ಹಾಕಿಸಿಕೊಂಡರೆ ಇದಾಗುತ್ತೆ, ಅದಾಗುತ್ತೆ ಎಂಬ ಅನೇಕ ಗೊಂದಲಗಳಿವೆ. ಹೀಗಾಗಿ ಅದೆಷ್ಟೋ ಮಂದಿ ಲಸಿಕೆ ಪಡೆಯಲು ಹಿಂದೇಡು ಹಾಕುತ್ತಿದ್ದಾರೆ. ಆದರೆ ಕೊವಿಡ್ ಲಸಿಕೆ ಪಡೆದವರಿಗೆ ಕೊರೊನಾ ಹರಡುವ ಸಾಧ್ಯತೆ ಕಡಿಮೆ ಎಂದು ಬಾಗಲಕೋಟೆ ಖಾಸಗಿ ವೈದ್ಯರ ಅಧ್ಯಯನದಿಂದ ಮಾಹಿತಿ ತಿಳಿದು ಬಂದಿದೆ.

ಕೊರೊನಾ ಎರಡನೇ ಅಲೆಯಲ್ಲಿ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದವರ ಮಾಹಿತಿ ಸಂಗ್ರಹಿಸಿ ಬಾಗಲಕೋಟೆ ಸಿಟಿ ಸ್ಕ್ಯಾನ್ ಸೆಂಟರ್ ತಜ್ಞರು ಅಧ್ಯಯನ ನಡೆಸಿದ್ದಾರೆ. ತಜ್ಞರಾದ ಸುಧೀಂದ್ರ, ಅಖಿಲ್ ಅವರ ಅಧ್ಯಯನದ ಪ್ರಕಾರ ಸಿಟಿ ಸ್ಕ್ಯಾನ್ ಮಾಡಿಸಿದ ಜಿಲ್ಲೆಯ 1,158 ಜನರ ಪೈಕಿ ಲಸಿಕೆ ಪಡೆಯದ 806 (ಶೇ. 69.6 ರಷ್ಟು) ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗೂ ಸಿಂಗಲ್ ಡೋಸ್ ಪಡೆದ 294(ಶೇ.25.3 ರಷ್ಟು) ಜನರಿಗೆ ಕೊರೊನಾ ಸೋಂಕು ತಗುಲಿದೆ. ಮತ್ತು 2 ಡೋಸ್ ಪಡೆದವರ ಪೈಕಿ 50(ಶೇ.5 ರಷ್ಟು) ಜನರಿಗೆ ಮಾತ್ರ ಸೋಂಕು ತಗುಲಿದೆ.

ಎರಡೂ ಡೋಸ್ ಪಡೆದ ಸೋಂಕಿತರ ಲಂಗ್ಸ್ ಡ್ಯಾಮೇಜ್ ಆಗುವುದು ತೀರಾ ಕಡಿಮೆ ಇರುವುದು ಕಂಡು ಬಂದಿದೆ. ಲಸಿಕೆ ಪಡೆದವರಲ್ಲಿ ಕೆಲವರಿಗೆ ಸೋಂಕು ಕಾಣಿಸಿಕೊಂಡರೂ ಸಾವು ಸಂಭವಿಸಿಲ್ಲ. ಯಾವುದೇ ಪ್ರಚಾರ, ಅಪ್ರಚಾರಕ್ಕೆ ಕಿವಿಗೊಡದೇ ಜನರು ಲಸಿಕೆ ಪಡೆಯಬೇಕು ಎಂದು ತಜ್ಞ ವೈದ್ಯರು ಅಧ್ಯಯನ ಬಳಿಕ ತಿಳಿಸಿದ್ದಾರೆ. ಫ್ರಂಟ್ ಲೈನ್ ವಾರಿಯರ್ಸ್ ಲಸಿಕೆ ಪಡೆದ ಪರಿಣಾಮವೇ ಎರಡನೇ ಅಲೆಯ ಸಾವಿನ ಸರಣಿಯಲ್ಲಿ ಸೇಫ್ ಆಗಿದ್ದಾರೆ. ಕೊರೊನಾಗೆ ಬಲಿಯಾದ ಬಹುತೇಕರು ಲಸಿಕೆ ಪಡೆದಿಲ್ಲ ಎನ್ನುವುದು ಅನೇಕ ಸೋಂಕಿತರಿಗೆ ಚಿಕಿತ್ಸೆ ನೀಡಿರುವ ವೈದ್ಯರ ಅಭಿಮತ. ಲಸಿಕೆ ಪಡೆದು ಜೀವ ಉಳಿಸಿಕೊಳ್ಳಿ ಎಂದು ವೈದ್ಯರು, ಸ್ಕ್ಯಾನ್ ಸೆಂಟರ್ ತಜ್ಞ ವೈದ್ಯರು ತಿಳಿಸಿದ್ದಾರೆ.

ಇನ್ನು ಇದೇ ರೀತಿ ಲಸಿಕೆ ಪಡೆದವರಿಗೆ ಸೋಂಕು ತಗುಲುವ ಸಾಧ್ಯತೆ ಕಡಿಮೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿತ್ತು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ