ಕೊರೊನಾ ಹೆಚ್ಚಳದ ಮಧ್ಯೆ ರಾಜ್ಯಕ್ಕೆ ಗುಡ್ ನ್ಯೂಸ್: ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಕೊರೊನಾ ಲಸಿಕೆ ರವಾನೆ

| Updated By: ganapathi bhat

Updated on: Apr 05, 2022 | 12:51 PM

ನಿನ್ನೆ 2.5 ಲಕ್ಷ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ರಾಜ್ಯದ ಮನವಿಯ ಮೇರೆಗೆ ಕೇಂದ್ರ ತುರ್ತಾಗಿ ಲಸಿಕೆಗಳನ್ನು ಪೂರೈಸುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.

ಕೊರೊನಾ ಹೆಚ್ಚಳದ ಮಧ್ಯೆ ರಾಜ್ಯಕ್ಕೆ ಗುಡ್ ನ್ಯೂಸ್: ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಕೊರೊನಾ ಲಸಿಕೆ ರವಾನೆ
ಕೊರೊನಾ ಲಸಿಕೆ
Follow us on

ಬೆಂಗಳೂರು: ರಾಜ್ಯಕ್ಕೆ ತುರ್ತಾಗಿ 15.25 ಲಕ್ಷ ಡೋಸ್​ ಕೊರೊನಾ ಲಸಿಕೆಗಳು ಬರಲಿವೆ. ಈ ಪೈಕಿ 10 ಲಕ್ಷ ಡೋಸ್​ ವ್ಯಾಕ್ಸಿನ್​ಗಳು ನಾಳೆಯೇ ರಾಜ್ಯಕ್ಕೆ ತಲುಪಲಿವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ. ಈಗಾಗಲೇ ರಾಜ್ಯದಲ್ಲಿ 7 ಲಕ್ಷ ಡೋಸ್​ ವ್ಯಾಕ್ಸಿನ್ ಸ್ಟಾಕ್ ಇದ್ದು, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತುರ್ತಾಗಿ ಕೊರೊನಾ ಲಸಿಕೆ ರವಾನೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ನಿನ್ನೆ 2.5 ಲಕ್ಷ ಜನರಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆಯ ಕೊರತೆ ಇಲ್ಲ. ರಾಜ್ಯದ ಮನವಿಯ ಮೇರೆಗೆ ಕೇಂದ್ರ ತುರ್ತಾಗಿ ಲಸಿಕೆಗಳನ್ನು ಪೂರೈಸುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.

ಜಿಮ್ ಮೇಲಿನ ನಿರ್ಬಂಧ ಸಡಿಲಿಕೆ
ಜಿಮ್​ಗಳ ಮೇಲೆ ಹೇರಿದ್ದ ಸಂಪೂರ್ಣ ನಿರ್ಬಂಧವನ್ನು ಪರಿಶ್ಕರಿಸಿ ರಾಜ್ಯ ಸರ್ಕಾರ ಇಂದು (ಏಪ್ರಿಲ್ 4) ನೂತನ ಆದೇಶ ಹೊರಡಿಸಿದೆ. ಜಿಮ್​ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು ಎಂದು ರಾಜ್ಯ ಸರ್ಕಾರ ಈ ಮೊದಲು ಹೇಳಿತ್ತು. ಆದರೆ, ಈ ನಿಯಮಕ್ಕೆ ಜಿಮ್ ಅಸೋಸಿಯೇಷನ್​ನಿಂದ ಆಕ್ಷೇಪ ವ್ಯಕ್ತವಾಗಿತ್ತು. ಸಿನಿಮಾ ಹಾಲ್​ಗಳಿಗೆ ನೀಡಿದಂತೆ ಜಿಮ್​ಗಳಿಗೂ ಶೇಕಡಾ 50ರಷ್ಟು ಅವಕಾಶ ನೀಡಿ ಎಂದು ಜಿಮ್ ಅಸೋಸಿಯೇಷನ್ ಮನವಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೂತನ ಆದೇಶವನ್ನು ಇಂದು ಹೊರಡಿಸಿದೆ. ಜಿಮ್​ಗಳಲ್ಲಿ ಶೇಕಡಾ 50ರಷ್ಟು ಅವಕಾಶ ನೀಡಿ, ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಜಿಮ್​ಗಳಲ್ಲಿ ಉಪಕರಣಗಳನ್ನ ಸ್ಯಾನಿಟೈಸ್​​​ ಮಾಡಬೇಕು ಎಂದು ಜಿಮ್​ಗಳಿಗೆ ಹೊರಡಿಸಿದ ಮಾರ್ಗಸೂಚಿಯಲ್ಲಿ ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ: ಜಿಮ್ ಬಂದ್ ನಿರ್ಧಾರ ವಾಪಸ್; ಆದರೆ ಷರತ್ತುಗಳು ಅನ್ವಯ

ಇದನ್ನೂ ಓದಿ: ಯುಗಾದಿ ಆಚರಣೆ; ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಮಲೆ ಮಹದೇಶ್ವರ ದೇವಾಲಯದಲ್ಲಿ ಭಕ್ತರಿಗೆ ನಿರ್ಬಂಧ

Published On - 7:33 pm, Sun, 4 April 21