ಬೆಂಗಳೂರು: ಡೇಂಜರಸ್ ಕೊರೊನಾ ವೈರಸ್ ದಿನ ದಿನಕ್ಕೂ ರಾಜ್ಯದ ಜನರ ಮೇಲೆ ತೀವ್ರ ದಾಳಿ ನಡೆಸ್ತಿದೆ. ಆಸ್ಪತ್ರೆಗಳ್ಲಲಿ ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆಯಿಂದ ಜನ ನರಳುತ್ತಿದ್ದಾರೆ. ಜೊತೆಗೆ ಕೊರೊನಾ ಸುಳಿಯಲ್ಲಿ ಸಿಕ್ಕ ಕೊರೊನಾ ವಾರಿಯರ್ಗಳಿಗೂ ಸರ್ಕಾರ ಯಾವುದೇ ರೀತಿಯ ವ್ಯವಸ್ಥೆ ಕೈಗೊಂಡಿಲ್ಲ. ಸೋಂಕಿಗೆ ಪೊಲೀಸ್ ಅಧಿಕಾರಿಗಳು ಸಹ ನರಳಾಡುತ್ತಿದ್ದಾರೆ.
ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ಸಿಗದೆ ಕೊರೊನಾ ಸೋಂಕಿತ ಎಎಸ್ಐ ಪರದಾಡಿದ್ದಾರೆ. ಬರೋಬ್ಬರಿ 45 ಆಸ್ಪತ್ರೆ ಸುತ್ತಾಡಿದ್ದು ನಿನ್ನೆಯಿಂದ ಬೆಡ್ ಸಿಗದೆ ನರಳಿದ್ದಾರೆ. ಕೊರೊನಾ ವಾರಿಯರ್ ಆಗಿದ್ದರೂ ದಿನ ಪೂರ್ತಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಬೆಡ್ ಸಿಗದಿದ್ದರಿಂದ ಮನೆಗೆ ಹಿಂದಿರುಗಿದ್ದಾರೆ. ಈ ಬಗ್ಗೆ ASI ಅಳಿಯ ವಿಡಿಯೋ ಮೂಲಕ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸ್ ಸಿಬ್ಬಂದಿಗೆ ಬೆಡ್ ಸಿಗದಿದ್ದರೆ ಜನಸಾಮಾನ್ಯರ ಸ್ಥಿತಿ ಹೇಗೆ ಎಂದು ವಿಡಿಯೋ ಮಾಡಿ ಪ್ರಶ್ನೆ ಮಾಡಿದ್ದಾರೆ. ಹಾಗೂ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿ ಎಎಸ್‌ಐಯವರ ಅಳಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.