ಕೊರೊನಾ​ ಕರ್ಫ್ಯೂ ಜಾರಿಗೂ ಮುನ್ನ.. 20 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಕೊರೊನಾ ಪ್ರಕರಣಗಳೆಷ್ಟು? ಮೃತಪಟ್ಟವರೆಷ್ಟು?

|

Updated on: Apr 09, 2021 | 11:08 AM

ಮಾರ್ಚ್​ 20ರಂದು ಬೆಂಗಳೂರಿನಲ್ಲಿ 1,798 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಏಪ್ರಿಲ್​ 8ರಂದು ಒಂದೇ ದಿನ 6,570 ಜನ ಸೋಂಕಿತರು ಪತ್ತೆಯಾಗಿದ್ದು,  24 ತಾಸಿನಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಭಾರೀ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ.

ಕೊರೊನಾ​ ಕರ್ಫ್ಯೂ ಜಾರಿಗೂ ಮುನ್ನ.. 20 ದಿನಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಕೊರೊನಾ ಪ್ರಕರಣಗಳೆಷ್ಟು? ಮೃತಪಟ್ಟವರೆಷ್ಟು?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ದೇಶಾದ್ಯಂತ ಮತ್ತೆ ಅಲೆಅಲೆಯಾಗಿ ಬೀಸುತ್ತಿದೆ. ಕರ್ನಾಟಕದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರುಗತಿಯಲ್ಲಿ ಸಾಗಿದ್ದು ಸೋಂಕು ಹರಡುವುದನ್ನು ತಪ್ಪಿಸಲು ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏಪ್ರಿಲ್​ 20ರವರೆಗೆ ನೈಟ್​ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅದರಂತೆ ಬೆಂಗಳೂರು ನಗರ, ಮೈಸೂರು ನಗರ, ಮಂಗಳೂರು ನಗರ, ಕಲಬುರಗಿ, ಬೀದರ್, ತುಮಕೂರು, ಉಡುಪಿ ನಗರ, ಮಣಿಪಾಲ ನಗರಗಳಲ್ಲಿ ಕೊರೊನಾ ಕರ್ಫ್ಯೂ ಇಂದಿನಿಂದ ಜಾರಿಗೆ ಬರಲಿದೆ. ಇದಕ್ಕೂ ಮುನ್ನ ಅಂದರೆ ಕಳೆದ ಮಾರ್ಚ್​ 20ರಿಂದ ಏಪ್ರಿಲ್ 08ನೇ ತಾರೀಖಿನ ತನಕ ಬೆಂಗಳೂರಿನಲ್ಲಿ ಪ್ರತಿನಿತ್ಯ ದಾಖಲಾದ ಕೊರೊನಾ ಪ್ರಕರಣಗಳೆಷ್ಟು? ಸಾವಿಗೀಡಾದವರೆಷ್ಟು ಜನ ಎಂಬುದರ ದಿನಾಂಕವಾರು ವಿವರ ಇಲ್ಲಿದೆ.

ಮಾರ್ಚ್ 20ರಿಂದ ಏಪ್ರಿಲ್ 8ರವರೆಗೆ ಬೆಂಗಳೂರಿನಲ್ಲಿ ದಾಖಲಾದ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತು ಮೃತಪಟ್ಟವರ ಸಂಖ್ಯಾ ವಿವರ

  • ಮಾರ್ಚ್ 20: 1798 ಸೋಂಕಿತರು, 7 ಜನ ಮೃತ
  • ಮಾರ್ಚ್ 21: 1715ಸೋಂಕಿತರು, 2 ಜನ ಮೃತ
  • ಮಾರ್ಚ್ 22: 1445 ಸೋಂಕಿತರು, 10 ಜನ ಮೃತ
  • ಮಾರ್ಚ್ 23: 2010ಸೋಂಕಿತರು, 5 ಜನ ಮೃತ
  • ಮಾರ್ಚ್ 24: 2298 ಸೋಂಕಿತರು, 12 ಜನ ಮೃತ
  • ಮಾರ್ಚ್ 25: 2523ಸೋಂಕಿತರು, 10 ಜನ ಮೃತ
  • ಮಾರ್ಚ್ 26:2566 ಸೋಂಕಿತರು, 13 ಜನ ಮೃತ
  • ಮಾರ್ಚ್ 27: 2886 ಸೋಂಕಿತರು, 8 ಜನ ಮೃತ
  • ಮಾರ್ಚ್ 28: 3082 ಸೋಂಕಿತರು, 12 ಜನ ಮೃತ
  • ಮಾರ್ಚ್ 29: 2792 ಸೋಂಕಿತರು, 16ಜನ ಮೃತ
  • ಮಾರ್ಚ್ 30: 2975 ಸೋಂಕಿತರು, 21 ಜನ ಮೃತ
  • ಮಾರ್ಚ್ 31: 4227 ಸೋಂಕಿತರು, 26 ಜನ ಮೃತ
  • ಏಪ್ರಿಲ್ 01: 4234 ಸೋಂಕಿತರು, 18 ಜನ ಮೃತ
  • ಏಪ್ರಿಲ್ 02: 4991 ಸೋಂಕಿತರು, 6 ಜನ ಮೃತ
  • ಏಪ್ರಿಲ್ 03: 4373 ಸೋಂಕಿತರು, 19 ಜನ ಮೃತ
  • ಏಪ್ರಿಲ್ 04: 4553ಸೋಂಕಿತರು, 15 ಜನ ಮೃತ
  • ಏಪ್ರಿಲ್ 05: 5279ಸೋಂಕಿತರು, 32 ಜನ ಮೃತ
  • ಏಪ್ರಿಲ್ 06: 6150 ಸೋಂಕಿತರು, 39 ಜನ ಮೃತ
  • ಏಪ್ರಿಲ್ 07: 6976 ಸೋಂಕಿತರು, 35 ಜನ ಮೃತ
  • ಏಪ್ರಿಲ್ 08: 6570 ಸೋಂಕಿತರು, 36 ಜನ ಮೃತಮೇಲಿನ ಸಂಖ್ಯಾ ವಿವರವನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಏರುಗತಿಯಲ್ಲಿ ಸಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್​ 20ರಂದು ಬೆಂಗಳೂರಿನಲ್ಲಿ 1,798 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದರೆ, ಏಪ್ರಿಲ್​ 8ರಂದು ಒಂದೇ ದಿನ 6,570 ಜನ ಸೋಂಕಿತರು ಪತ್ತೆಯಾಗಿದ್ದು,  24 ತಾಸಿನಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆ ಭಾರೀ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ. ಒಂದು ವೇಳೆ ಜನರು ಎಚ್ಚೆತ್ತುಕೊಳ್ಳದಿದ್ದಲ್ಲಿ ಸೋಂಕು ಇನ್ನೂ ವೇಗವಾಗಿ ಹಬ್ಬುವ ಸಾಧ್ಯತೆ ಇದೆ ಎಂದು ತಜ್ಞರು ಆಂತಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:
    Arjun Janya: ಅರ್ಜುನ್​ ಜನ್ಯಗೆ ಕೊರೊನಾ ಪಾಸಿಟಿವ್​! ಆಸ್ಪತ್ರೆಗೆ ದಾಖಲಾದ ಖ್ಯಾತ ಸಂಗೀತ ನಿರ್ದೇಶಕ

    ಕೊರೊನಾ ನೈಟ್​ ಕರ್ಫ್ಯೂ ಜಾರಿ; ಪೊಲೀಸ್​ ಅಧಿಕಾರಿಗಳ ಜೊತೆ ಇಂದು ಕಮಲ್ ಪಂತ್ ಸಭೆ

Published On - 10:50 am, Fri, 9 April 21