ಬೆಂಗಳೂರು: ಕರ್ನಾಟಕದಲ್ಲಿ ಇಂದು (ಏಪ್ರಿಲ್ 25) ಒಂದೇ ದಿನ ಒಟ್ಟು 34,804 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. 143 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 20,733 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಒಂದೇ ದಿನ ಸೋಂಕಿಗೆ 77 ಜನರು ಬಲಿಯಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 13,39,201ಕ್ಕೆ (13.39 ಲಕ್ಷ) ಏರಿಕೆಯಾಗಿದೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 14,426 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,62,594 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,62,162 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು 20,733 ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 6,53,656ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 77 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 5,800 ಜನರು ಮೃತಪಟ್ಟಿದ್ದಾರೆ. 6,53,656 ಸೋಂಕಿತರ ಪೈಕಿ 4,67,313 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1,80,542 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿ ಈವರೆಗೆ ಕೊರೊನಾಗೆ 14,426 ಜನರು ಬಲಿಯಾಗಿದ್ದಾರೆ. ಭಾನುವಾರ ಒಂದೇ ದಿನ ಮೃತಪಟ್ಟವರ ಸಂಖ್ಯೆ 143. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 77 ಜನರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಬಳ್ಳಾರಿ ಜಿಲ್ಲೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿನಿಂದ 16 ಜನರು ಸಾವನ್ನಪ್ಪಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 9 ಜನರು ಬಲಿಯಾಗಿದ್ದಾರೆ. ಕಲಬುರಗಿ 7, ತುಮಕೂರು, ಧಾರವಾಡ ಜಿಲ್ಲೆಗಳಲ್ಲಿ ತಲಾ 6, ಹಾಸನ 4, ಮಂಡ್ಯ 3, ವಿಜಯಪುರ, ಕೋಲಾರ, ಹಾವೇರಿ, ಬೀದರ್ ಜಿಲ್ಲೆಗಳಲ್ಲಿ ತಲಾ ಇಬ್ಬರು, ಚಾಮರಾಜನಗರ, ಚಿತ್ರದುರ್ಗ, ದಕ್ಷಿಣ ಕನ್ನಡ, ದಾವಣಗೆರೆ, ರಾಯಚೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
Karnataka reports 34,804 fresh COVID-19 cases, 6,982 recoveries, and 143 deaths in the last 24 hours
Active cases: 2,62,162
Total recoveries: 10,62,594
Death toll: 14,426 pic.twitter.com/0c8l85qUpp— ANI (@ANI) April 25, 2021
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 34,804 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ ಅತಿಹೆಚ್ಚು ಜನರಿಗೆ ಅಂದರೆ 20,733 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಂತರದ ಸ್ಥಾನದಲ್ಲಿ ತುಮಕೂರು ಜಿಲ್ಲೆಯಿದೆ. ಅಲ್ಲಿ ಇಂದು 1,153 ಜನರಲ್ಲಿ ಸೋಂಕು ದೃಢಪಟ್ಟಿದೆ. ಕೊಡಗು ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಒಂದು ಸಾವಿರ ದಾಟಿರುವುದು ಗಾಬರಿ ಹುಟ್ಟಿಸಿದೆ. ಕೊಡಗು ಜಿಲ್ಲೆಯಲ್ಲಿ 1,077 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಬೆಂಗಳೂರು ಗ್ರಾಮಾಂತರ 864, ಮಂಡ್ಯ 814, ಕೋಲಾರ 782, ಹಾಸನ 768, ಬಳ್ಳಾರಿ 732, ಮೈಸೂರು 700, ರಾಯಚೂರು 643, ಕಲಬುರಗಿ 626, ದಕ್ಷಿಣ ಕನ್ನಡ 564, ಧಾರವಾಡ 546, ವಿಜಯಪುರ 468, ಶಿವಮೊಗ್ಗ 418, ಚಿಕ್ಕಬಳ್ಳಾಪುರ 434, ಬೀದರ್ 406, ಬಾಗಲಕೋಟೆ 390, ಬೆಳಗಾವಿ 336, ಯಾದಗಿರಿ 363, ಉಡುಪಿ 319, ಚಾಮರಾಜನಗರ 284, ಚಿಕ್ಕಮಗಳೂರು 247, ದಾವಣಗೆರೆ 242, ಉತ್ತರ ಕನ್ನಡ 243, ರಾಮನಗರ 225, ಕೊಪ್ಪಳ 152, ಚಿತ್ರದುರ್ಗ 100 ಜಿಲ್ಲೆಗಳಲ್ಲಿ ಸೋಂಕಿತರ ಒಟ್ಟು ಸಂಖ್ಯೆ ಮೂರಂಕಿ ದಾಟಿದೆ. ಹಾವೇರಿ 99, ಗದಗ 76 ಜಿಲ್ಲೆಗಳಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದೆ.
ಅಂತ್ಯಕ್ರಿಯೆ ವೇಳೆ ಐವರಿಗೆ ಅವಕಾಶ
ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವದ ಅಂತ್ಯಕ್ರಿಯೆ ವೇಳೆ ಕೇವಲ ಐವರು ಮಾತ್ರ ಪಾಲ್ಗೊಳ್ಳಬಹುದು ಎಂದು ರಾಜ್ಯ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ. ರಾಜ್ಯದ್ಲಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಇದನ್ನೂ ಓದಿ: Explainer: ಕೊವಿಡ್ ಲಸಿಕೆಯ ಮೊದಲ ಡೋಸ್ ಪಡೆದು ಎರಡನೇ ಡೋಸ್ ಪಡೆಯದಿದ್ದರೆ ಏನಾಗುತ್ತದೆ?
(ಮತ್ತಷ್ಟು ಮಾಹಿತಿ ಶೀಘ್ರ ಅಪ್ಡೇಟ್ ಆಗಲಿದೆ)
Published On - 7:19 pm, Sun, 25 April 21