Covid 19 Karnataka Update: ಕರ್ನಾಟಕದಲ್ಲಿ 1501 ಜನರಿಗೆ ಕೊರೊನಾ ಸೋಂಕು, 2030 ಮಂದಿ ಗುಣಮುಖ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 27, 2021 | 9:10 PM

ಬೆಂಗಳೂರು ನಗರದಲ್ಲಿ ಒಟ್ಟು 354 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 1501 ಜನರಿಗೆ ಕೊರೊನಾ ಸೋಂಕು, 2030 ಮಂದಿ ಗುಣಮುಖ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ (ಜುಲೈ 28) ಒಟ್ಟು 1501 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 2039 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 28,97,664 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಈ ಪೈಕಿ 28,38,717 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಒಟ್ಟು 22,487 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟು 354 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಈವರೆಗೆ ಒಟ್ಟು 12,25,581 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,01,693 ಮಂದಿ ಚೇತರಿಸಿಕೊಂಡಿದ್ದಾರೆ. 8047 ಮಂದಿ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬಾಗಲಕೋಟೆ 3, ಬಳ್ಳಾರಿ 4, ಬೆಳಗಾವಿ 51, ಬೆಂಗಳೂರು ಗ್ರಾಮಾಂತರ 19, ಬೆಂಗಳೂರು ನಗರ 354, ಚಾಮರಾಜನಗರ, ಚಿಕ್ಕಬಳ್ಳಾಪುರ 31, ಚಿಕ್ಕಮಗಳೂರು 62, ಚಿತ್ರದುರ್ಗ 8, ದಕ್ಷಿಣ ಕನ್ನಡ 247, ದಾವಣೆಗೆರೆ 24, ಧಾರವಾಡ 11, ಗದಗ 5, ಹಾಸನ 98, ಹಾವೇರಿ 7, ಕಲಬುರಗಿ 13, ಕೊಡಗು 46, ಕೋಲಾರ 41, ಕೊಪ್ಪಳ 15, ಮಂಡ್ಯ 55, ಮೈಸೂರು 108, ರಾಯಚೂರು 2, ರಾಮನಗರ 4, ಶಿವಮೊಗ್ಗ 71, ತುಮಕೂರು 47, ಉಡುಪಿ 98, ಉತ್ತರ ಕನ್ನಡ 40, ವಿಜಯಪುರ 5, ಯಾದಗಿರಿ 1 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿ ಇಂದು ಒಟ್ಟು 32 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರು ನಗರ 5, ಹಾಸನ 4, ಕೋಲಾರ, ಬೆಳಗಾವಿ 3, ಮೈಸೂರು, ತುಮಕೂರು, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ ತಲಾ 2, ಚಿಕ್ಕಮಗಳೂರು, ಕೊಡಗು, ಕೊಪ್ಪಳ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ಉಡುಪಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

(Coronavirus Karnataka Numbers 1501 people infected 2030 cured from covid)

ಇದನ್ನೂ ಓದಿ: Basavaraj Bommai: ಯಡಿಯೂರಪ್ಪ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ, ಹೋರಾಟದ ಹಾದಿಯಲ್ಲಿ ಅರಳಿದ ನಾಯಕ

ಇದನ್ನೂ ಓದಿ: Basavaraj Bommai: ಕೊವಿಡ್ ನಿಯಂತ್ರಿಸಲು ಹಗಲಿರುಳು ಶ್ರಮಿಸುವೆ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Published On - 9:02 pm, Tue, 27 July 21