Covid 19 Karnataka Update: ಕರ್ನಾಟಕದಲ್ಲಿ 2290 ಮಂದಿಗೆ ಕೊರೊನಾ ಸೋಂಕು, 68 ಮಂದಿ ಸಾವು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 09, 2021 | 9:24 PM

ಬೆಂಗಳೂರಲ್ಲಿ ಇಂದು ಒಂದೇ ದಿನ 472 ಜನರಿಗೆ ಸೋಂಕು ದೃಢಪಟ್ಟಿದ್ದು, 12 ಜನರು ಸಾವನ್ನಪ್ಪಿದ್ದಾರೆ.

Covid 19 Karnataka Update: ಕರ್ನಾಟಕದಲ್ಲಿ 2290 ಮಂದಿಗೆ ಕೊರೊನಾ ಸೋಂಕು, 68 ಮಂದಿ ಸಾವು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಟ್ಟು 2290 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿವಿಧ ಜಿಲ್ಲೆಗಳಲ್ಲಿ 68 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಇಂದು ಒಂದೇ ದಿನ 472 ಜನರಿಗೆ ಸೋಂಕು ದೃಢಪಟ್ಟಿದ್ದು, 12 ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ 28,67,158ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 27,93,498 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 68 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾದಿಂದ ಈವರೆಗೆ 35,731 ಜನರು ಸಾವನ್ನಪ್ಪಿದ್ದಾರೆ. ಒಟ್ಟು 37,906 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 472 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,18,493ಕ್ಕೆ ಏರಿಕೆಯಾಗಿದೆ. 12,18,493 ಸೋಂಕಿತರ ಪೈಕಿ 11,89,233 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 12 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 15,723 ಜನರು ಸಾವನ್ನಪ್ಪಿದ್ದಾರೆ. 13,536 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 2290 ಜನರಿಗೆ ಕೊರೊನಾ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 472 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಹಾಸನ 228, ಮೈಸೂರು 216, ದಕ್ಷಿಣ ಕನ್ನಡ 209, ಶಿವಮೊಗ್ಗ 152, ಉಡುಪಿ 131, ತುಮಕೂರು 115, ಕೊಡಗು 113, ಮಂಡ್ಯ 95, ಬೆಳಗಾವಿ 87, ಚಿಕ್ಕಮಗಳೂರು 69, ಕೋಲಾರ 67, ಬೆಂಗಳೂರು ಗ್ರಾಮಾಂತರ 63, ಉತ್ತರ ಕನ್ನಡ 55, ಚಾಮರಾಜನಗರ 43, ದಾವಣಗೆರೆ 32, ಚಿತ್ರದುರ್ಗ 30, ಧಾರವಾಡ 27, ಚಿಕ್ಕಬಳ್ಳಾಪುರ 17, ರಾಮನಗರ 14, ಬಳ್ಳಾರಿ 13, ಹಾವೇರಿ 11, ಕೊಪ್ಪಳ 10, ಕಲಬುರಗಿ 6, ಗದಗ 5, ಯಾದಗಿರಿ 5, ರಾಯಚೂರು 2, ವಿಜಯಪುರ 2, ಬೀದರ್ 1 ಪ್ರಕರಣ ವರದಿಯಾಗಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 68 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 12 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ 9, ಮೈಸೂರು 7, ದಾವಣಗೆರೆ, ಧಾರವಾಡ ತಲಾ ಐವರು, ಬೆಳಗಾವಿ 4, ಚಾಮರಾಜನಗರ, ಮಂಡ್ಯ, ಹಾವೇರಿ, ಶಿವಮೊಗ್ಗ, ತುಮಕೂರು ತಲಾ ಮೂವರು, ಬಾಗಲಕೋಟೆ, ಕೋಲಾರ, ಚಿಕ್ಕಮಗಳೂರು ತಲಾ ಇಬ್ಬರು, ಗದಗ, ಹಾಸನ, ಕೊಪ್ಪಳ, ಉಡುಪಿ, ವಿಜಯಪುರ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 35,731 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

(Coronavirus Karnataka Numbers 2290 Infected 68 died due to covid infection)

ಇದನ್ನೂ ಓದಿ: ಕೊರೊನಾ ಎರಡನೇ ಅಲೆ ವಿರುದ್ದ ಹೋರಾಟ ನಿಂತಿಲ್ಲ, ಜನಾಂದೋಲನ ಮೂಲಕವೇ ಕೊರೊನಾ ನಿಯಂತ್ರಿಸಬೇಕು: ಆರೋಗ್ಯ ಸಚಿವಾಲಯ

ಇದನ್ನೂ ಓದಿ: Kappa Covid Variant ಉತ್ತರಪ್ರದೇಶದಲ್ಲಿ ಕೊವಿಡ್-19 ಕಪ್ಪಾ ತಳಿಯ ಎರಡು ಪ್ರಕರಣ ಪತ್ತೆ