ಕೊರೊನಾ ಎರಡನೇ ಅಲೆ ವಿರುದ್ದ ಹೋರಾಟ ನಿಂತಿಲ್ಲ, ಜನಾಂದೋಲನ ಮೂಲಕವೇ ಕೊರೊನಾ ನಿಯಂತ್ರಿಸಬೇಕು: ಆರೋಗ್ಯ ಸಚಿವಾಲಯ

ದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳು ಇಳಿಮುಖವಾಗಿದೆ. ಕಳೆದ ವಾರದಲ್ಲಿ ಸರಾಸರಿ ದೈನಂದಿನ ಹೊಸ ಪ್ರಕರಣಗಳಲ್ಲಿ 8% ನಷ್ಟು ಕುಸಿತ ಕಂಡುಬಂದಿದೆ. 90 ಜಿಲ್ಲೆಗಳಿಂದ 80% ಹೊಸ ಪ್ರಕರಣಗಳು ವರದಿಯಾಗಿವ. ದೇಶದಲ್ಲಿ ಚೇತರಿಕೆ ಪ್ರಕರಣಗಳು ಏರಿಕೆಯಾಗಿದ್ದು ಚೇತರಿಕೆ ದರ ಇಂದು ಶೇ 97.2 ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೊರೊನಾ ಎರಡನೇ ಅಲೆ ವಿರುದ್ದ ಹೋರಾಟ ನಿಂತಿಲ್ಲ, ಜನಾಂದೋಲನ ಮೂಲಕವೇ ಕೊರೊನಾ ನಿಯಂತ್ರಿಸಬೇಕು: ಆರೋಗ್ಯ ಸಚಿವಾಲಯ
ಆರೋಗ್ಯ ಸಚಿವಾಲಯದ ಸುದ್ದಿಗೋಷ್ಠಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 09, 2021 | 5:18 PM

ದೆಹಲಿ: ಕೊರೊನಾ ಎರಡನೇ ಅಲೆ ವಿರುದ್ದ ಹೋರಾಟ ನಿಂತಿಲ್ಲ. ಜನರು ಮೈಮರೆತು ಸಾರ್ವಜನಿಕವಾಗಿ ಸೇರುತ್ತಿದ್ದಾರೆ.ಕೊರೊನಾ ನಿಯಂತ್ರಣಕ್ಕೆ ಜನರು ಸಹಕಾರ ನೀಡಬೇಕು.ಜನಾಂದೋಲನ ಮೂಲಕವೇ ಕೊರೊನಾ ನಿಯಂತ್ರಿಸಬೇಕು ಎಂದು ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ.ಪೌಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಪ್ರವಾಸಿ ತಾಣಗಳಲ್ಲಿ ಹೊಸ ಅಪಾಯವನ್ನು ಕಾಣುತ್ತಿದೆ. ಅಲ್ಲಿ ಜನರು ಗುಂಪಾಗಿ ಸೇರುತ್ತಿದ್ದಾರೆ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುತ್ತಿಲ್ಲ .ಕೊವಿಡ್ ಪ್ರೋಟೋಕಾಲ್ ಪಾಲನೆಯಾಗುತ್ತಿಲ್ಲ. ಇದು ಕಳವಳವನ್ನುಂಟು ಮಾಡಿದೆ ಎಂದಿದ್ದಾರೆ ಪೌಲ್. ಕೆಲ ದೇಶದಲ್ಲಿ ಹೊಸ‌ ರೀತಿಯಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ.  ನಗರಗಳಲ್ಲಿ ಮತ್ತು ಪ್ರವಾಸಿ ಸ್ಥಳಗಳಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಪ್ರವಾಸಿ ಸ್ಥಳಗಳಲ್ಲಿ ಹೊಸ ರಿಸ್ಕ್ ಎದುರಾಗುತ್ತಿದೆ. ಇದು ಗಂಭೀರ ಸ್ಥಿತಿಗೆ ಹೋಗಬಹುದು. ಈ ರೀತಿಯಲ್ಲಿ ಜನರು ಗುಂಪುಗೂಡಬಾರದು.ಇದರಿಂದ ವೈರಸ್ ಗೆ ಮನುಷ್ಯನ ದೇಹ ಪ್ರವೇಶಕ್ಕೆ ಅವಕಾಶ ಸಿಗುತ್ತೆ. ಈಗಿನ ಪರಿಸ್ಥಿತಿಯಲ್ಲಿ ವೈರಸ್ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿಲ್ಲ.

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲು ಮಾರ್ಗಸೂಚಿ ನೀಡಲಾಗಿದೆ. ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಲು ಪೋತ್ಸಾಹಿಸಿರಿ. ಬಾಣಂತಿಯರಿಗೂ ಕೊರೊನಾ ಲಸಿಕೆ ನೀಡಬಹುದು. ಯಾವುದೇ ಸಮಸ್ಯೆ ಇಲ್ಲ.ಸ್ಥಳೀಯ ಆಡಳಿತಗಳು ವಿಪತ್ತು ನಿರ್ವಹಣಾ ಕಾಯಿದೆ ನಿಯಮ ಜಾರಿಗೊಳಿಸಬೇಕು. ಪ್ರವಾಸಿ ಸ್ಥಳದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ ಜಾರಿಗೊಳಿಸಿ.

ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕಾಗಿದೆ. ಬ್ರಿಟನ್, ರಷ್ಯಾ ಮತ್ತು ಬಾಂಗ್ಲಾದೇಶದಲ್ಲಿ ಮತ್ತೆ ಕೊವಿಡ್ ಪ್ರಕರಣಗಳು ಏರಿಕೆಯಾಗಿದೆ. ನಾವು ಇನ್ನೂ ಕೊವಿಡ್ ನ ಎರಡನೇ ಎರಡನೇ ಅಲೆಯೊಂದಿಗೆ ಹೋರಾಡುತ್ತಿದ್ದೇವ.ಕೊವಿಡ್ ವಿರುದ್ಧದ ಕ್ರಮಗಳನ್ನು ನಾವು ಮುಂದುವರಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದಲ್ಲಿ ದೈನಂದಿನ ಹೊಸ ಪ್ರಕರಣಗಳು ಇಳಿಮುಖವಾಗಿದೆ. ಕಳೆದ ವಾರದಲ್ಲಿ ಸರಾಸರಿ ದೈನಂದಿನ ಹೊಸ ಪ್ರಕರಣಗಳಲ್ಲಿ 8% ನಷ್ಟು ಕುಸಿತ ಕಂಡುಬಂದಿದೆ. 90 ಜಿಲ್ಲೆಗಳಿಂದ 80% ಹೊಸ ಪ್ರಕರಣಗಳು ವರದಿಯಾಗಿವ. ದೇಶದಲ್ಲಿ ಚೇತರಿಕೆ ಪ್ರಕರಣಗಳು ಏರಿಕೆಯಾಗಿದ್ದು ಚೇತರಿಕೆ ದರ ಇಂದು ಶೇ 97.2 ತಲುಪಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಝಿಕಾ ವೈರಸ್ ಪತ್ತೆಯಾದ ಕೇರಳಕ್ಕೆ ಕೇಂದ್ರದ ತಂಡ ಭೇಟಿ

ಝಿಕಾ ವೈರಸ್ ಪತ್ತೆಯಾದ ಕೇರಳಕ್ಕೆ  ಏಮ್ಸ್ ಆಸ್ಪತ್ರೆಯ ತಜ್ಞರು ಕೇರಳಕ್ಕೆ ಭೇಟಿ ನೀಡಲಿದ್ದಾರೆ. ಕೇರಳ ರಾಜ್ಯ ಸರ್ಕಾರಕ್ಕೆ ನೆರವಾಗಲು ಕೇಂದ್ರ ತಂಡ  ಹೋಗಿದೆ ಎಂದು  ಲವ್ ಅಗರವಾಲ್ ಹೇಳಿದ್ದಾರೆ.

ಜೈಡಸ್ ಕ್ಯಾಡಿಲಾ ಹೆಲ್ತ್‌ಕೇರ್ ಜೈ ಕೋವ್ ಡಿ ಲಸಿಕೆಯ ಡಾಟಾ ಸಲ್ಲಿಸಿದ್ದುಅದರ ಬಗ್ಗೆ ಡಿಸಿಜಿಐ ಪರಿಶೀಲನೆ ನಡೆಸುತ್ತಿದೆ. ಮಾಡೆರ್ನಾ ಲಸಿಕೆಯ ತುರ್ತು ಬಳಕೆಗೆ ಒಪ್ಪಿಗೆ ನೀಡಲಾಗಿದೆ. ಲಸಿಕೆಯ ಅಮದು ಪ್ರಕ್ರಿಯೆ ನಡೆಯುತ್ತಿದೆ.

ಲ್ಯಾಂಬ್ಡಾ ಪ್ರಭೇದದ ವೈರಸ್ ಸದ್ಯ ಆಸಕ್ತಿಯ ಪ್ರಭೇದ ಆಗಿದೆ. ಇದು ಯೂರೋಪ್ ನಲ್ಲಿ ಲ್ಯಾಂಬ್ಡಾ ಪ್ರಭೇದ ಹರಡಿದೆ.ಲ್ಯಾಂಬ್ಡಾ ಪ್ರಭೇದ ಭಾರತಕ್ಕೆ  ಪ್ರವೇಶಿಸಿಲ್ಲ. ಇದರ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಲ್ಯಾಂಬ್ಡಾ ಪ್ರಭೇದದ ವೈರಸ್, ಏಳನೇ ಆಸಕ್ತಿ ಪ್ರಭೇದ ಎಂದು ವಿಶ್ವ ಆರೋಗ್ಯ ಸಂಸ್ಥೆ  ಘೋಷಣೆ ಮಾಡಿರುವುದಾಗಿ ವಿ.ಕೆ.ಪೌಲ್  ಹೇಳಿದ್ದಾರೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಕಪ್ಪಾ ಪ್ರಭೇದದ 2 ಪ್ರಕರಣ ಪತ್ತೆಯಾಗಿದೆ. ಡೆಲ್ಟಾ ಪ್ರಭೇದ ಬಂದ ಬಳಿಕ ಕಪ್ಪಾ ಪ್ರಭೇದ ಹಿಂದೆ ಸರಿದಿದೆ ಕಪಾ ಪ್ರಭೇದದ ತೀವ್ರತೆ ಸ್ವಲ್ಪ ಕಡಿಮೆ ಇವು  ಕಳವಳಕಾರಿ ಪ್ರಭೇದ ಅಲ್ಲ ಎಂದಿದ್ದಾರೆ ಪೌಲ್

ಇದನ್ನೂ ಓದಿ: Kappa Covid Variant ಉತ್ತರಪ್ರದೇಶದಲ್ಲಿ ಕೊವಿಡ್-19 ಕಪ್ಪಾ ತಳಿಯ ಎರಡು ಪ್ರಕರಣ ಪತ್ತೆ

(Covid 19 We cannot lower our guard A new risk is being seen at tourist spots Ministry of Health)