ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್

| Updated By: ಆಯೇಷಾ ಬಾನು

Updated on: Jan 05, 2022 | 12:38 PM

Coronavirus: ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಏಳು ದಿನದಿಂದ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ, ರಾಜ್ಯದಲ್ಲಿ ನಿನ್ನೆ 2.59% ಪಾಸಿಟಿವಿಟಿ ರೇಟ್
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸದ್ದಿಲ್ಲದೆ ಗುಪ್ತಗಾಮಿನಿಯಾಗಿ ಮತ್ತೆ ತನ್ನ ಆಟ ಶುರು ಮಾಡಿದೆ. ಕಳೆದೊಂದು ವಾರದಿಂದ ಸೋಂಕಿತರ ಸಂಖ್ಯೆ ಗಗನಕ್ಕೇರುತ್ತಿದೆ. ನಿನ್ನೆ 2.59% ಪಾಸಿಟಿವಿಟಿ ರೇಟ್ ಸಿಕ್ಕಿದೆ. ಹಾಗೂ ಬೆಂಗಳೂರಿನಲ್ಲಿ 1.83% ಪಾಸಿಟಿವಿಟಿ ಇದೆ.

ಬೆಂಗಳೂರಿನ ಒಂದು ವಾರದ ಅಂಕಿ ಅಂಶ
ಡಿಸೆಂಬರ್ 29ರಂದು -400 ಕೇಸ್
ಡಿಸೆಂಬರ್ 30ರಂದು -565 ಕೇಸ್
ಡಿಸೆಂಬರ್ 31ರಂದು -656 ಕೇಸ್
ಜನವರಿ 1ರಂದು -810 ಕೇಸ್
ಜನವರಿ 2ರಂದು -923 ಕೇಸ್
ಜನವರಿ 3ರಂದು -1041 ಕೇಸ್
ಜನವರಿ 4ರಂದು -2053 ಕೇಸ್
ಏಳು ದಿನದಲ್ಲಿ 6,448 ಕೇಸ್​ಗಳು ಪತ್ತೆಯಾಗಿವೆ. ಸದ್ಯ ಇಂದು ಅಂದರೆ ಜನವರಿ 5 ರಂದು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಆತಂಕ ಹೆಚ್ಚಾಗಿದೆ.

ರಾಜ್ಯದ ಒಂದು ವಾರದ ಅಂಕಿ ಅಂಶ
ಡಿಸೆಂಬರ್ 28ರಂದು -356 ಕೇಸ್
ಡಿಸೆಂಬರ್ 29ರಂದು -566ಕೇಸ್
ಡಿಸೆಂಬರ್ 30ರಂದು -700ಕೇಸ್
ಡಿಸೆಂಬರ್ 31ರಂದು -832ಕೇಸ್
ಜನವರಿ 1ರಂದು -1033ಕೇಸ್
ಜನವರಿ 2ರಂದು -1187ಕೇಸ್
ಜನವರಿ 3ರಂದು -1290ಕೇಸ್
ಜನವರಿ 4ರಂದು -2479ಕೇಸ್

ಬೆಂಗಳೂರು 8 ವಲಯಗಳಲ್ಲಿರುವ ಪಾಸಿಟಿವ್ ರೇಟ್ ಮತ್ತು ಕೇಸ್​ಗಳ ಸಂಖ್ಯೆ
ಮಹದೇವಪುರ -201 ಕೇಸ್, ಪಾಸಿಟಿವಿಟಿ ರೇಟ್ -2.45%
ಪೂರ್ವ ವಲಯ -166 ಕೇಸ್, ಪಾಸಿಟಿವಿಟಿ ರೇಟ್ -2.30%
ಬೊಮ್ಮನಹಳ್ಳಿಯಲ್ಲಿ -126 ಕೇಸ್, ಪಾಸಿಟಿವಿಟಿ ರೇಟ್ -1.65%
ದಕ್ಷಿಣ ವಲಯದಲ್ಲಿ -113 ಕೇಸ್, ಪಾಸಿಟಿವಿಟಿ ರೇಟ್ -1.60%
ಪಶ್ಚಿಮ ವಲಯದಲ್ಲಿ -86 ಕೇಸ್, ಪಾಸಿಟಿವಿಟಿ ರೇಟ್ -1.09%
ಯಲಹಂಕ -57 ಕೇಸ್, ಪಾಸಿಟಿವಿಟಿ ರೇಟ್ -1.02%
ದಾಸರಹಳ್ಳಿ -16 ಕೇಸ್, ಪಾಸಿಟಿವಿಟಿ ರೇಟ್ -0.99%
ಆರ್.ಆರ್. ನಗರದಲ್ಲಿ -48 ಕೇಸ್, ಪಾಸಿಟಿವಿಟಿ ರೇಟ್ -0.95%

ಇದನ್ನೂ ಓದಿ: ಓಮಿಕ್ರಾನ್ ಬಳಿಕ ಕೊರೋನಾ ರೂಪಾಂತರಕ್ಕೆ ಯಾವ ಹೆಸರಿಡಬಹುದು? ಗೂಗಲ್​ನಲ್ಲಿ ಜೋರಾದ ಹುಡುಕಾಟ