ಊರು ಮೇಲೆ ಊರು ಬಿದ್ರೂ ನವಜೋಡಿ ಡೋಂಟ್​ ಕೇರ್: ಬಂದ್​ ಮಧ್ಯೆ ಮಸ್ತ್​ ವೆಡ್ಡಿಂಗ್​ ಫೋಟೋಶೂಟ್

|

Updated on: Dec 05, 2020 | 10:32 AM

ಕರ್ನಾಟಕ ಬಂದ್​ನ ಬಿಸಿ ನಗರದಲ್ಲಿ ತುಸು ಹೆಚ್ಚಾಗಿ ಇದ್ದರೂ ಇದೆಲ್ಲಾ ಪ್ರತಿಭಟನೆ ನಡುವೆ ನವ ಜೋಡಿಯಿಂದ ಮಸ್ತ್ ಮಸ್ತ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಅರಮನೆ ನಗರಿಯಲ್ಲಿ ಎಲ್ಲರ ಗಮನ ಸೆಳೆದಿದೆ.

ಊರು ಮೇಲೆ ಊರು ಬಿದ್ರೂ ನವಜೋಡಿ ಡೋಂಟ್​ ಕೇರ್: ಬಂದ್​ ಮಧ್ಯೆ ಮಸ್ತ್​ ವೆಡ್ಡಿಂಗ್​ ಫೋಟೋಶೂಟ್
ಬಂದ್​ ನಡುವೆ ಪ್ರೀ ವೆಡ್ಡಿಂಗ್​ ಫೋಟೋಶೂಟ್
Follow us on

ಮೈಸೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ವಿರೋಧಿಸಿ ಕನ್ನಡಿಗರು ರಣಕಹಳೆ ಮೊಳಗಿಸಿದ್ದಾರೆ. ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆಗೆ ಇಳಿದು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ.

ಆದರೆ ಇತ್ತ, ಧರಣಿಯ ಕಾವಿನಲ್ಲಿ ಊರು ಮೇಲೆ ಊರು ಬಿದ್ದರೂ ಈ ನವಜೋಡಿ ಮಾತ್ರ ಡೋಂಟ್​ ಕೇರ್​! ಹೌದು, ಕರ್ನಾಟಕ ಬಂದ್​ನ ಬಿಸಿ ನಗರದಲ್ಲಿ ತುಸು ಹೆಚ್ಚಾಗಿ ಇದ್ದರೂ ಇದೆಲ್ಲಾ ಪ್ರತಿಭಟನೆ ನಡುವೆ ನವ ಜೋಡಿಯಿಂದ ಮಸ್ತ್ ಮಸ್ತ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ ಅರಮನೆ ನಗರಿಯಲ್ಲಿ ಎಲ್ಲರ ಗಮನ ಸೆಳೆದಿದೆ.

ಬಂದ್ ಮರೆತು ಫೋಟೋಶೂಟ್​ನಲ್ಲಿ ಮಗ್ನರಾದ ನವ ಜೋಡಿ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಬಿಂದಾಸ್​ ಆಗಿ ಪೋಸ್​ ಕೊಟ್ಟರು. ಅಂದ ಹಾಗೆ, ಮೂರಕ್ಕೂ ಹೆಚ್ಚು ಜೋಡಿಗಳಿಂದ ಫೋಟೋಶೂಟ್ ನಡೆಯಿತು.

Published On - 10:30 am, Sat, 5 December 20