Oxygen Containers Import| ದುಬೈ, ಬ್ಯಾಂಕಾಕ್, ಶಾಂಘೈನಿಂದ ಆಕ್ಸಿಜನ್ ಕಂಟೈನರ್ಗಳ ಆಮದಿಗೆ ಸರ್ಕಾರ ನಿರ್ಧಾರ
ದೇಶದ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಮುಂದಾಗಿದ್ದು ದುಬೈ, ಬ್ಯಾಂಕಾಕ್, ಶಾಂಘೈನಿಂದ ಆಕ್ಸಿಜನ್ ಟ್ಯಾಂಕರ್ ಅಮದು ಮಾಡಿಕೊಳ್ಳಲಿದೆ. 262 ಟ್ಯಾಂಕರ್ ಅಮದಿಗೆ ಕೇಂದ್ರ ಸರ್ಕಾರ, ಖಾಸಗಿ ಕಂಪನಿಗಳು ನಿರ್ಧಾರ ಮಾಡಿವೆ.
ದೆಹಲಿ: ಭಾರತದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದ್ದಂತೆ ಆಕ್ಸಿಜನ್ಗೆ ಹಾಹಾಕಾರ ಉಂಟಾಗಿದೆ. ಆದರೆ ಭಾರತದಲ್ಲಿ ಬೇಡಿಕೆಯಷ್ಟು ಮೆಡಿಕಲ್ ಆಕ್ಸಿಜನ್ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಮೆಡಿಕಲ್ ಆಕ್ಸಿಜನ್ನ ಕೊರತೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆ ನಿವಾರಣೆಗೆ ಈಗ ಪರಿಹಾರ ಸಿಗುತ್ತಿದೆ. ಭಾರತದ ಆಕ್ಸಿಜನ್ ಕೊರತೆ ನೀಗಿಸಲು ಸರ್ಕಾರ ವಿದೇಶಗಳಿಂದ ಆಕ್ಸಿಜನ್, ಕ್ರಯೋಜನಿಕ್ ಕಂಟೈನರ್ ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದೆ.
ದೇಶದ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಮುಂದಾಗಿದ್ದು ದುಬೈ, ಬ್ಯಾಂಕಾಕ್, ಶಾಂಘೈನಿಂದ ಆಕ್ಸಿಜನ್ ಕಂಟೈನರ್ ಅಮದು ಮಾಡಿಕೊಳ್ಳಲಿದೆ. 262 ಕಂಟೈನರ್ ಅಮದಿಗೆ ಕೇಂದ್ರ ಸರ್ಕಾರ, ಖಾಸಗಿ ಕಂಪನಿಗಳು ನಿರ್ಧಾರ ಮಾಡಿವೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ನಿಂದ 100 ಕ್ರಯೋಜನಿಕ್ ಕಂಟೈನರ್ ನಿರ್ಮಾಣವಾಗಲಿದೆ. ಇನ್ನು ಆರೋಗ್ಯ ಇಲಾಖೆ ವಿದೇಶಗಳಿಂದ 50 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಅಮದಿಗೆ ಜಾಗತಿಕ ಟೆಂಡರ್ ಕರೆಯಲಿದೆ. ಈ ಹಿಂದೆ ಜರ್ಮನಿಯಿಂದ 23 ಆಕ್ಸಿಜನ್ ಕಂಟೈನರ್ ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
ಇದನ್ನೂ ಓದಿ: ಟಿವಿ9 ಡಿಜಿಟಲ್ ವಿಶೇಷ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ