ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 15-16 ಜನರಿಗೆ ಸೋಂಕು; ಪ್ರತಿ ಗಂಟೆಗೆ 6-8 ಸೋಂಕಿತರು ಸಾವು

ಹತ್ತು ದಿನಗಳ ಹಿಂದೆ ಪ್ರತಿ ನಿಮಿಷಕ್ಕೆ 8 ರಿಂದ 9 ರಂತೆ ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಪ್ರತಿ ನಿಮಿಷಕ್ಕೆ 15ರಿಂದ 16ಕ್ಕೆ ಏರಿಕೆಯಾಗಿದೆ. ಕಳೆದ ವಾರ ಒಂದು ಗಂಟೆಯಲ್ಲಿ ಇಬ್ಬರಿಂದ ಮೂವರು ಸೋಂಕಿತರು ಮೃತಪಡುತ್ತಿದ್ದು ಇದೀಗ ಸಾವಿಗೀಡಾಗುತ್ತಿರುವವರ ಸಂಖ್ಯೆ ಗಂಟೆಗೆ ಆರರಿಂದ ಎಂಟಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಪ್ರತಿ ನಿಮಿಷಕ್ಕೆ 15-16 ಜನರಿಗೆ ಸೋಂಕು; ಪ್ರತಿ ಗಂಟೆಗೆ 6-8 ಸೋಂಕಿತರು ಸಾವು
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Apr 26, 2021 | 1:44 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರು ಅಪಾಯದ ಸುಳಿಗೆ ಸಿಲುಕುತ್ತಿದೆ. ಕಳೆದ ಹತ್ತು ದಿನಗಳ ಹಿಂದೆ ಪ್ರತಿ ನಿಮಿಷಕ್ಕೆ 8 ರಿಂದ 9 ರಂತೆ ಬೆಂಗಳೂರಿನಲ್ಲಿ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆ ಇದೀಗ ಪ್ರತಿ ನಿಮಿಷಕ್ಕೆ 15ರಿಂದ 16ಕ್ಕೆ ಏರಿಕೆಯಾಗಿದೆ. ಕಳೆದ ವಾರ ಒಂದು ಗಂಟೆಯಲ್ಲಿ ಇಬ್ಬರಿಂದ ಮೂವರು ಸೋಂಕಿತರು ಮೃತಪಡುತ್ತಿದ್ದು ಇದೀಗ ಸಾವಿಗೀಡಾಗುತ್ತಿರುವವರ ಸಂಖ್ಯೆ ಗಂಟೆಗೆ ಆರರಿಂದ ಎಂಟಕ್ಕೆ ತಲುಪಿದೆ.

ಕೇವಲ ಹತ್ತು ದಿನಗಳ ಅವಧಿಯಲ್ಲಿ ಸೋಂಕಿತರು ಮತ್ತು ಮರಣ ಪ್ರಮಾಣ ಎರಡೂ ಹೆಚ್ಚಳವಾಗಿರುವುದು ಆರೋಗ್ಯ ವ್ಯವಸ್ಥೆಗೆ ಸಂಕಷ್ಟವನ್ನುಂಟು ಮಾಡಿದೆ. ಸೋಂಕು ಹಬ್ಬದಂತೆ ನಿಯಂತ್ರಿಸುವುದಕ್ಕೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆಯಾದರೂ ಈಗಾಗಲೇ ಸೋಂಕಿತರಾಗಿರುವವರನ್ನು ನಿಭಾಯಿಸುವುದು ಸಹ ವೈದ್ಯರಿಗೆ ಸವಾಲಾಗಿದೆ.

ಭಾರತದಲ್ಲಿ ಇಂದು 3,52,991 ಕೊರೊನಾ ಕೇಸ್​ಗಳು ದಾಖಲು, ಒಂದೇ ವಾರದಲ್ಲಿ 22.49 ಲಕ್ಷ ಪ್ರಕರಣಗಳು ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಪ್ರಕರಣಗಳು ದಾಖಲಾಗಿದ್ದು, 2,891 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಕೂಡ ದೇಶದಲ್ಲಿ 3.55 ಹೊಸ ಕೇಸ್​ಗಳು, 2,807 ಸಾವುಗಳು ದಾಖಲಾಗಿವೆ. ಈ ಎರಡೂ ಸಂಖ್ಯೆಗಳು ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಜಾಸ್ತಿ. ದೇಶದಲ್ಲಿ ಕೇವಲ 7 ದಿನಗಳಲ್ಲಿ ಅಂದರೆ ಏಪ್ರಿಲ್​ 18-25ರವರೆಗೆ 22.49 ಲಕ್ಷ ಕೊರೊನಾ ಕೇಸ್​ಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಏಳುದಿನಗಳಲ್ಲಿ 22 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು ಮತ್ತು ಅದೂ ಭಾರತದಲ್ಲೇ ಆಗಿದೆ.

ಇದನ್ನೂ ಓದಿ: ಭಾರತದಲ್ಲಿ ಇಂದು 3,52,991 ಕೊರೊನಾ ಕೇಸ್​ಗಳು ದಾಖಲು, ಒಂದೇ ವಾರದಲ್ಲಿ 22.49 ಲಕ್ಷ ಪ್ರಕರಣಗಳು; ಉಳಿದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ?

ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್

Published On - 1:39 pm, Mon, 26 April 21