ತಾಯಿ ಮೇಲೆ ಹಲ್ಲೆ ಮಾಡಿಸಿ, ಸ್ವಂತ ಮನೆಯಲ್ಲಿ ಕಳ್ಳತನ ಮಾಡಿಸಿದ ದಾರಿ ತಪ್ಪಿದ ಮಗ!

ದಾರಿ ತಪ್ಪಿದ ಮಗ ತನ್ನ ಚಿಕ್ಕಪ್ಪನ ಮಗನ ಜೊತೆ ಸೇರಿ ತನ್ನ ತಾಯಿಯನ್ನೇ ಹಲ್ಲೆ ಮಾಡಿಸಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಸಿದ್ದಾನಂತೆ. ತಾತಿ ಶಾಂತಮ್ಮ ನಿವೃತ್ತಿ ಶಿಕ್ಷಕಿ. ಐದು ವರ್ಷದ ಕೆಳಗೆ ನಿವೃತ್ತಿ ಪಡೆದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದ ಬಳಿ ಶ್ರೀಗಂಧ ಲೇಔಟ್​ನಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡು ಕುಟುಂಬ ಸಮೇತ ವಾಸ ಮಾಡುತ್ತಿದ್ದಾರೆ.

ತಾಯಿ ಮೇಲೆ ಹಲ್ಲೆ ಮಾಡಿಸಿ, ಸ್ವಂತ ಮನೆಯಲ್ಲಿ ಕಳ್ಳತನ ಮಾಡಿಸಿದ ದಾರಿ ತಪ್ಪಿದ ಮಗ!
ಶಾಂತಮ್ಮ
Follow us
sandhya thejappa
|

Updated on:Apr 26, 2021 | 2:48 PM

ರಾಮನಗರ: ತಾಯಿ ತನ್ನ ಮಗನಿಗಾಗಿ ಎಲ್ಲವನ್ನೂ ತ್ಯಾಗ ಮಾಡಿರುತ್ತಾಳೆ. ಅದೇ ರೀತಿ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದ ತಾಯಿಯೊಬ್ಬಳು ತನ್ನ ಮಗನನ್ನ ಮುದ್ದಾಗಿ ಸಾಕಿದ್ದಳು. ಉನ್ನತ ವ್ಯಾಸಂಗ ಕೂಡ ಮಾಡಿಸಿದ್ದಳು. ಅಲ್ಲದೇ ಮಗ ದಾರಿ ತಪ್ಪಬಾರದು ಎಂದು ಸಾಕಷ್ಟು ಶಿಸ್ತಿನಿಂದ ಬೆಳೆಸಿದ್ದಳು. ಅಂತಹ ತಾಯಿಗೆ ಒಳ್ಳೆಯ ಮಗನಾಗಬೇಕಾಗಿದ್ದವ ದಾರಿ ತಪ್ಪಿದ್ದು, ಹಣಕ್ಕಾಗಿ ತನ್ನ ತಾಯಿಯನ್ನೆ ಹಲ್ಲೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಸ್ವಂತ ಮನೆಯಲ್ಲಿ ಕಳ್ಳತನ ಮಾಡಿಸಿದ ಮಗ ದಾರಿ ತಪ್ಪಿದ ಮಗ ತನ್ನ ಚಿಕ್ಕಪ್ಪನ ಮಗನ ಜೊತೆ ಸೇರಿ ತನ್ನ ತಾಯಿಯ ಮೇಲೆ ಹಲ್ಲೆ ಮಾಡಿಸಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿಸಿದ್ದಾನಂತೆ. ತಾಯಿ ಶಾಂತಮ್ಮ ನಿವೃತ್ತಿ ಶಿಕ್ಷಕಿ. ಐದು ವರ್ಷದ ಕೆಳಗೆ ನಿವೃತ್ತಿ ಪಡೆದು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದ ಬಳಿ ಶ್ರೀಗಂಧ ಲೇಔಟ್​ನಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡು ಕುಟುಂಬ ಸಮೇತ ವಾಸ ಮಾಡುತ್ತಿದ್ದಾರೆ. ಆದರೆ ಇವರ ಮಗ ಯುವರಾಜ್ ಮಾತ್ರ ಅಡ್ಡದಾರಿ ಹಿಡಿದ್ದಾನೆ.

ಕುಡಿತದ ಚಟ ಹಾಗೂ ಐಪಿಎಲ್ ಬೆಟ್ಟಿಂಗ್​ನಿಂದ ಸಾಲ ಮಾಡಿಕೊಂಡಿದ್ದ ಯುವರಾಜ್, ತನ್ನ ಚಿಕ್ಕಪ್ಪನ ಮಗ ನವೀನ್ ಜೊತೆ ಸೇರಿಕೊಂಡು ತನ್ನ ಮನೆಯಲ್ಲಿಯೇ ಕಳ್ಳತನ ಮಾಡಲು ಯೋಜನೆ ರೂಪಿಸಿದ್ದಾನೆ. ಏಪ್ರಿಲ್ 20ರಂದು ದೊಡ್ಡಪ್ಪನ ಮನೆಗೆ ಬಂದಿದ್ದ ನವೀನ್ ಹಾಗೂ ಆತನ ಸ್ನೇಹಿತ ವಿನೋದ್ ಎಂಬಾತ, ಶಾಂತಮ್ಮ ಅವರನ್ನ ನೀರು ಕೇಳಿ ನಂತರ ಅವರು ಬರುತ್ತಿದ್ದಂತೆ ಗಟ್ಟಿಯಾಗಿ ಹಿಡಿದು, ದಿಂಬಿನಿಂದ ಉಸಿರುಗಟ್ಟಿಸಿದ್ದಾರೆ. ಆ ಬಳಿಕ ಶಾಂತಮ್ಮರವರ ಮೈಮೇಲೆ ಇದ್ದ ಮಾಂಗಲ್ಯ ಸರ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ದೋಚಿ ಪರಾರಿಯಾಗಿದ್ದರು.

ಮೂಲತಃ ಚನ್ನಪಟ್ಟಣ ಮೂಲದವರಾದ ಶಾಂತಮ್ಮ ಬೆಂಗಳೂರಿನಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ ಆನಂತರ ನಿವೃತ್ತಿಯಾಗಿ ಚನ್ನಪಟ್ಟಣಕ್ಕೆ ಬಂದು ಮಗನ ಜೊತೆಗೆ ಇದ್ದರು. ಎಂ.​ಟೆಕ್​ ವ್ಯಾಸಂಗ ಮಾಡಿರುವ ಯುವರಾಜ್, ಕೆಲಸಕ್ಕೂ ಹೋಗದೇ ಮನೆಯಲ್ಲಿಯೇ ಇದ್ದ. ಸಾಕಷ್ಟು ಕುಡಿತದ ಚಟ ಹಾಗೂ ಐಪಿಎಲ್ ಬೆಟ್ಟಿಂಗ್ ದಂಧೆಗೆ ಬಿದ್ದಿದ್ದ ಈತ ಆಗಾಗ ದುಡ್ಡಿಗಾಗಿ ಶಾಂತಮ್ಮ ಅವರನ್ನ ಪೀಡಿಸುತ್ತಿದ್ದ. ಹಣ ಕೊಟ್ಟರೇ ಮಗ ಹಾಳಾಗಿ ಹೊಗುತ್ತಾನೆ ಎಂದು ಹಣವನ್ನ ಕೊಡುತ್ತಿರಲಿಲ್ಲ. ಹೀಗಾಗಿ ಮನೆಯಲ್ಲಿ ಚಿನ್ನಾಭರಣ ಇರುವ ಬಗ್ಗೆ ಗೊತ್ತಿದ್ದ ಯುವರಾಜ್, ತನ್ನ ಚಿಕ್ಕಪ್ಪನ ಮಗ ನವೀನ್ ಹಾಗೂ ಆತನ ಸ್ನೇಹಿತ ವಿನೋದ್ ಜೊತೆ ಸೇರಿಕೊಂಡು ಈ ಕೃತ್ಯ ಮಾಡಿಸಿದ್ದಾನೆ. ಮಾಡಿದ ತಪ್ಪಿಗೆ ಮೂವರೂ ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಇದನ್ನೂ ಓದಿ

ಮಂಗಳೂರಿನಲ್ಲಿ ಬೈಕ್​ಗೆ ಶ್ವಾನವನ್ನು ಕಟ್ಟಿಕೊಂಡು ಧರಧರ ಎಳೆದೊಯ್ದ ಕಿರಾತಕರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಓರ್ವ ಬಂಧನ

ಬೆಂಗಳೂರು ಕಿಮ್ಸ್​ನಲ್ಲಿ ನಿರ್ಲಕ್ಷ್ಯ, ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಓಡಾಡ್ತಿದ್ದಾರೆ ಸೋಂಕಿತರು

(son has assaulted her mother and has stolen own home at ramanagara)

Published On - 1:24 pm, Mon, 26 April 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM