ಮಂಗಳೂರಿನಲ್ಲಿ ಬೈಕ್ಗೆ ಶ್ವಾನವನ್ನು ಕಟ್ಟಿಕೊಂಡು ಧರಧರ ಎಳೆದೊಯ್ದ ಕಿರಾತಕರು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಓರ್ವ ಬಂಧನ
ನೀಲಪ್ಪ ಮತ್ತು ಮಾದಪ್ಪ ಎಂಬುವವರು ಬೈಕ್ ಹಿಂಬದಿಗೆ ಒಂದು ನಾಯಿಯನ್ನು ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಧರನೆ ಎಳೆದುಕೂಂಡು ಹೋಗಿದ್ದಾರೆ. ಬೈಕ್ ಅತಿ ವೇಗವಾಗಿ ಆಗಿ ಓಡುತ್ತಿದ್ದಾಗ ಅದನ್ನು ಪ್ರತ್ಯಕ್ಷದರ್ಶಿಗಳು ಖಂಡಿಸಿದ್ದಾರೆ. ಈ ಅಮಾನವೀಯ ಘಟನೆ ಏಪ್ರಿಲ್ 15 ರಂದು ಮಂಗಳೂರು ಹೊರವಲಯದ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ನಡೆದಿದೆ.
ಮಂಗಳೂರು: ಮನುಷ್ಯ ಅದೆಷ್ಟು ಕ್ರೂರಿ.. ಯೋಚಿಸಲು ಸಾಧ್ಯವಿಲ್ಲ. ಪ್ರಾಣಿಗಳಿಗೆ ಯಾವ ಯಾವ ರೀತಿಯಲ್ಲಿ ಹಿಂಸಿಸಬಹುದೋ ಹಾಗೆಲ್ಲ ಹಿಂಸೆ ನೀಡುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಪ್ರಾಣಿಗಳಿಗೆ ಹಿಂಸೆ ಕೊಡುವುದಿಲ್ಲ. ಪ್ರಾಣಿಗಳನ್ನು ತಮಗಿಂತ ಇಷ್ಟಪಡುವವರು ಇದ್ದಾರೆ. ಅವುಗಳಿಗೆ ಹಿಂಸೆ ಕೊಟ್ಟು ಖುಷಿ ಪಡುವವರು ಈ ಜಗತ್ತಿನಲ್ಲಿ ಇದ್ದಾರೆ. ನಾಯಿಯೊಂದನ್ನು ತನ್ನ ಬೈಕ್ ಕಟ್ಟಿಕೊಂಡು ಧರಧರನೆ ಎಳೆದೊಯ್ದಿರುವ ದೃಶ್ಯ ಇದೀಗ ವೈರಲ್ ಆಗಿದೆ. ಇಬ್ಬರು ಮಾಡಿರುವ ಈ ಕೃತ್ಯಕ್ಕೆ ಪ್ರಾಣಿ ಪ್ರಿಯರು ಹಿಡಿಶಾಪ ಹಾಕುತ್ತಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ನೀಲಪ್ಪ ಮತ್ತು ಮಾದಪ್ಪ ಎಂಬುವವರು ಬೈಕ್ ಹಿಂಬದಿಗೆ ಒಂದು ನಾಯಿಯನ್ನು ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಧರನೆ ಎಳೆದುಕೂಂಡು ಹೋಗಿದ್ದಾರೆ. ಬೈಕ್ ಅತಿ ವೇಗವಾಗಿ ಆಗಿ ಓಡುತ್ತಿದ್ದಾಗ ಅದನ್ನು ಪ್ರತ್ಯಕ್ಷದರ್ಶಿಗಳು ಖಂಡಿಸಿದ್ದಾರೆ. ಈ ಅಮಾನವೀಯ ಘಟನೆ ಏಪ್ರಿಲ್ 15 ರಂದು ಮಂಗಳೂರು ಹೊರವಲಯದ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ನಡೆದಿದೆ. ನಾಯಿಯನ್ನು ಎಳೆದುಕೊಂಡು ಹೋದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಮಂಗಳೂರು ಪೊಲೀಸರಿಗೂ ತಲುಪಿದೆ. ಸುಮೋಟೊ ಕೇಸ್ ದಾಖಲಿಸಿಕೊಂಡು ಸುರತ್ಕಲ್ ಪೊಲೀಸರು ಇಬ್ಬರಲ್ಲಿ ಓರ್ವ ಆರೋಪಿಯಾದ ನೀಲಪ್ಪ ಎಂಬುವವರನ್ನು ಬಂಧಿಸಿದ್ದಾರೆ.
ಪ್ರಾಣಿ ಹಿಂಸೆ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ನೀಲಪ್ಪ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವಿಚಾರಣೆ ವೇಳೆ ನಾಯಿಯ ಮೃತದೇಹವನ್ನು ನಾವು ಸಾಗಿಸಲು ಈ ರೀತಿ ಮಾಡಿದ್ದೇವೆ ಅಂತಾ ಆರೋಪಿ ನೀಲಪ್ಪ ಹೇಳಿದ್ದಾನೆ. ಆದರೆ ಪ್ರತ್ಯಕ್ಷದರ್ಶಿಗಳು ಮಾತ್ರ ನಾಯಿ ಇನ್ನು ಬದುಕಿತ್ತು. ಕಿರುಚಾಡುತ್ತಿದ್ದ ನಾಯಿಯನ್ನು ಎಳೆದುಕೊಂಡು ಹೋಗುತ್ತಿದ್ದರು ಅಂತಾ ಹೇಳಿದ್ದಾರೆ. ಆದ್ದರಿಂದ ಮತ್ತೊರ್ವ ಆರೋಪಿ ಮಾದಪ್ಪನನ್ನು ಬಂಧಿಸಿ ತನಿಖೆ ನಡೆಸಲು ಖಾಕಿ ಹುಡುಕಾಡುತ್ತಿದೆ.
ಇದನ್ನೂ ಓದಿ
ಆಯ ತಪ್ಪಿ ಗುಂಡಿಗೆ ಬಿದ್ದ ಆಹಾರ ಅರಸಿ ಹೋದ ಕರು; ತಾಯಿ ಹಸುವಿನ ರೋಧನೆ ಕಂಡು ಮಾನವೀಯತೆ ಮೆರೆದ ಚಿತ್ರದುರ್ಗ ಜನ
ವಾನರ ಸೇನೆಗೆ ಕೊರೊನಾ ಕಂಟಕ; ನಗರ ಪ್ರದೇಶಕ್ಕೆ ಲಗ್ಗೆ ಇಡುವ ಮಂಗಗಳ ಬಗ್ಗೆ ಗಮನಹರಿಸಲು ಚಿತ್ರದುರ್ಗ ಜನರ ಆಗ್ರಹ
(video of dog being strapped to bike is viral on social media and Manglore Police arrested one accused)