Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯ ತಪ್ಪಿ ಗುಂಡಿಗೆ ಬಿದ್ದ ಆಹಾರ ಅರಸಿ ಹೋದ ಕರು; ತಾಯಿ ಹಸುವಿನ ರೋಧನೆ ಕಂಡು ಮಾನವೀಯತೆ ಮೆರೆದ ಚಿತ್ರದುರ್ಗ ಜನ

ಇತ್ತಿಚಿನ ದಿನಮಾನಗಳಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಯಾರಿಗೆ ಯಾರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯರೆ ಮನುಷ್ಯರನ್ನು ರಕ್ಷಣೆ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ.

ಆಯ ತಪ್ಪಿ ಗುಂಡಿಗೆ ಬಿದ್ದ ಆಹಾರ ಅರಸಿ ಹೋದ ಕರು; ತಾಯಿ ಹಸುವಿನ ರೋಧನೆ ಕಂಡು ಮಾನವೀಯತೆ ಮೆರೆದ ಚಿತ್ರದುರ್ಗ ಜನ
ಆಯ ತಪ್ಪಿ ಗುಂಡಿಗೆ ಬಿದ್ದ ಕರುವನ್ನು ನೋಡಿ ತಾಯಿ ಹಸುವಿನ ರೋಧನೆ
Follow us
sandhya thejappa
|

Updated on:Apr 26, 2021 | 11:25 AM

ಗದಗ: ಹಸುವೊಂದು ತನ್ನ ಕರುಳಿನ ಕುಡಿಯೊಂದಿಗೆ ಆಹಾರ ಅರಸಿಕೊಂಡು ಹೋಗುತ್ತಿತ್ತು. ಕರ್ಫ್ಯೂ ಜಾರಿಯಾಗಿರುವುದರಿಂದ ಸಮರ್ಪಕವಾಗಿ ಆಹಾರ ಸಿಗದೆ ಪರದಾಟ ನಡೆಸಿದ್ದವು. ಆದರೆ ತಾಯಿ ಹಸುವಿನೊಂದಿಗೆ ಹೋಗುತ್ತಿರುವಾಗ ಕರು ಗುಂಡಿಯೊಂದರಲ್ಲಿ ಏನಾದರೂ ಆಹಾರ ಸಿಗಬಹುದಾ ಎಂದು ಬಂದು ಆಯ ತಪ್ಪಿ ಗುಂಡಿಗೆ ಬಿದ್ದಿದೆ. ತನ್ನ ಕರುಳಿನ ಕುಡಿಯನ್ನು ರಕ್ಷಣೆ ಮಾಡುವಂತೆ ತಾಯಿ ಹಸು ರೋಧನೆ ಅನುಭವಿಸುತ್ತಿತ್ತು. ಕೊನೆಗೆ ಸಾರ್ವಜನಿಕರು ಕರ್ಫ್ಯೂ ನಡುವೆ, ಕರುವನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇತ್ತಿಚಿನ ದಿನಮಾನಗಳಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಯಾರಿಗೆ ಯಾರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯರೆ ಮನುಷ್ಯರನ್ನು ರಕ್ಷಣೆ ಮಾಡಲು ಹಿಂದೆ ಮುಂದೆ ನೋಡುವ ಸ್ಥಿತಿ ಎದುರಾಗಿದೆ. ಇಂತಹ ವೇಳೆ ಗದಗ ನಗರದಲ್ಲಿ ಮಾನವೀಯತೆ ಮೆರೆದು ಪುಟಾಣಿ ಕರು ಹಾಗೂ ತಾಯಿ ಹಸುವನ್ನು ಒಂದು ಮಾಡಲಾಗಿದೆ.

ರಕ್ಷಣೆ ಮಾಡಿದ ಸ್ಥಳೀಯರು ನಗರ ಪ್ರದೇಶದ ಹಸುಗಳು ಹಸಿವಿನಿಂದ ಬಳಲುತ್ತಿದ್ದು, ತಾಯಿ ಹಸು ಹಾಗೂ ಪುಟಾಣಿ ಕರು ಆಹಾರವನ್ನು ಅರಿಸಿಕೊಂಡು ಹೋಗುತ್ತಿದ್ದವು. ಈ ವೇಳೆ ಗದಗ ನಗರದ ಮಹೇಂದ್ರಕರ್ ಸರ್ಕಲ್ ಬಳಿಯ ಗುಂಡಿಯಲ್ಲಿ ಆಹಾರ ಸಿಗುತ್ತದೆ ಅಂತಾ ಇಣುಕಿ ನೋಡುವಾಗ ಆಯ ತಪ್ಪಿ ಕರು ಬಿದ್ದಿದೆ. ತಾಯಿ ಹಸು ಕರುವನ್ನು ರಕ್ಷಣೆ ಮಾಡಲು ಹರ ಸಾಹಸ ಪಟ್ಟಿದೆ. ಇತ್ತರೆ ಹಸುಗಳು ಬಂದು ಇಡೀ ಸರ್ಕಲ್ ಸುತ್ತುವರೆದು ಮುಖ ರೋಧನೆ ಅನುಭವಿಸುತ್ತುದ್ದವು. ಕರುವಿಗಾಗಿ ತಾಯಿ ಹಸು ಸೇರಿದಂತೆ ಇತರೆ ಹಸುಗಳ ದೃಶ್ಯಗಳು ಮನಕಲಕುವಂತಿತ್ತು. ತನ್ನ ಕಂದನ ಮೇಲಿನ ಮೂಕ ಪ್ರಾಣಿಯ ಪ್ರೀತಿ ನೋಡಿ ಮಾನವ ಕುಲವೇ ನಾಚುವಂತಿತ್ತು. ಕೊನೆಗೆ ಸ್ಥಳೀಯರು ನೋಡಿ ಕರುವನ್ನು ಮೇಲೆತ್ತಿ ರಕ್ಷಣೆ ಮಾಡಿ ಪುಟಾಣಿ ಕರು ಹಾಗೂ ತಾಯಿ ಹಸುವನ್ನು ಒಂದು ಮಾಡಿದ್ದಾರೆ. ಸ್ಥಳೀಯರನ್ನು ಕರುವಿನ ಹತ್ತಿರ ಬಿಡದ ಹಸು ಕಠಿಣ ಕರ್ಫ್ಯೂ ಜಾರಿ ಮಾಡಿರುವುದರಿಂದ ಜನರು ಕೂಡಾ ಓಡಾಡುತ್ತಿರಲ್ಲಿಲ್ಲ. ಆಹಾರ ಅರಿಸಿಕೊಂಡು ಹೋದ ಪುಟಾಣಿ ಕರು ಗುಂಡಿಯಲ್ಲಿ ಬಿದ್ದು ನರಳಾಡುತ್ತಿತ್ತು. ಮಹೇಂದ್ರಕರ್ ಸರ್ಕಲ್ ನಿವಾಸಿಗಳು ಕರು ಬಿದ್ದಿರುವುದನ್ನು ನೋಡಿ ಕರ್ಫ್ಯೂ ನಡುವೆ ಸ್ಥಳೀಯರು ಸೇರಿಕೊಂಡು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಈ ವೇಳೆ ತಾಯಿ ಹಸು ತನ್ನ ಕರುಳು ಬಳ್ಳಿಗೆ ಏನಾದರೂ ಆಗುತ್ತದೆ ಅಂತಾ ಸ್ಥಳೀಯರನ್ನು ಕರುವಿನ ಹತ್ತಿರ ಬಿಡುತ್ತಿರಲಿಲ್ಲ. ಪುಟಾಣಿ ಕರು ಹಾಗೂ ತಾಯಿ ಹಸುವಿಗೆ ಸಾಥ್ ನೀಡುವ ಹಾಗೇ ಇನ್ನೆರಡು ಹಸು ಅದೇ ಸರ್ಕಲ್ ಸುತ್ತುವರೆದು ಯಾರನ್ನು ಆ ಕರುವಿನ ಹತ್ತಿರ ಬಿಡದೆ ದಿಗ್ಬಂಧನ ಹಾಕಿದ್ದವು. ನಾಲ್ಕೈದು ಗಂಟೆಗಳ ಕಾಲ ರೋಧನೆ ಅನುಭವಿಸಿದ ಕರುವನ್ನು ರಕ್ಷಣೆ ಮಾಡಿದ ಮೇಲೆ ತನ್ನ ಕರುಳಿನ ಕುಡಿಯನ್ನು ನೆಕ್ಕುತ್ತಾ, ಮೇಲೆತ್ತಿದವರಿಗೆ ತಮ್ಮದೆ ಭಾಷೆಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿತು.

ಒಂದಾದ ಹಸು ಮತ್ತು ಕರು

ಇದನ್ನೂ ಓದಿ

ವಾನರ ಸೇನೆಗೆ ಕೊರೊನಾ ಕಂಟಕ; ನಗರ ಪ್ರದೇಶಕ್ಕೆ ಲಗ್ಗೆ ಇಡುವ ಮಂಗಗಳ ಬಗ್ಗೆ ಗಮನಹರಿಸಲು ಚಿತ್ರದುರ್ಗ ಜನರ ಆಗ್ರಹ

ಕೊರೊನಾ ಕಾಟ: ​ಐಪಿಎಲ್ ಟೂರ್ನಿಯಿಂದ ದೂರ ಸರಿದ ಕೆಚ್ಚೆದೆಯ ಆಟಗಾರ ಆರ್​ ಅಶ್ವಿನ್, ಆರ್​ಸಿಬಿ ತಂಡಕ್ಕೂ ಬರೆ; ಇಬ್ಬರು ಸ್ವದೇಶಕ್ಕೆ ವಾಪಸ್​

(calf had fallen into a pit and natives rescued calf in Gadag)

Published On - 11:12 am, Mon, 26 April 21