ಬುರ್ಜ್ ಖಲೀಫಾದಷ್ಟೇ ಎತ್ತರದ ಸಂದೇಶ ನೀಡಿದ ದುಬೈ; ತ್ರಿವರ್ಣ ಧ್ವಜ ಹಾರಿಸಿ ಭಾರತೀಯರೇ ದೃಢವಾಗಿರಿ ಎಂದು ಹಾರೈಸಿದ ಮಿತ್ರ ರಾಷ್ಟ್ರ
Stay Strong India UAE message: ಕೊಲ್ಲಿ ರಾಷ್ಟ್ರದಲ್ಲಿರುವ (UAE) ಭಾರತೀಯ ಅಂಬಾಸಿಡರ್ ಪವನ್ ಕಪೂರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಕೊಲ್ಲಿ ರಾಷ್ಟ್ರಗಳ ಬೆಂಬಲ, ಒಗ್ಗಟ್ಟನ್ನು ಭಾರತವು ಪ್ರಶಂಸಿಸುತ್ತದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಕೇಸ್ಗಳು 1,73,13,163 ಗೆ ನೆಗೆದಿದೆ. ಸಾವಿನ ಸಂಖ್ಯೆ 1,95,123 ಮೀರಿದೆ.
ಅಸಂಖ್ಯಾತ ಭಾರತೀಯರನ್ನು ತನ್ನ ಮಡಿಲಲ್ಲಿ ಪೋಷಿಸುತ್ತಿರುವ ಕೊಲ್ಲಿ ರಾಷ್ಟ್ರಗಳು ಕಾಲಕಾಲಕ್ಕೆ ಭಾರತದ ಕಷ್ಟ ಸುಖಕ್ಕೆ ಮಿಡಿಯುತ್ತಿವೆ. ಭಾರತದಲ್ಲಿ ದಿನೇ ದಿನೇ ಕೊರೊನಾ ಕಾಟ ಹೆಚ್ಚಾಗುತ್ತಿರುವಾಗ ತಮ್ಮ ಕೊಲ್ಲಿ ರಾಷ್ಟ್ರಗಳು ಭಾರತದ ಪರವಾಗಿ ನಿಲ್ಲುತ್ತದೆ. ಭಾರತೀಯರೇ ದೃಢವಾಗಿರಿ ಎಂದು ವಿಶ್ವದ ಅತಿ ದೊಡ್ಡ ಗಗನಚುಂಬಿ ಕಟ್ಟಡವಾದ ಬುರ್ಜ್ ಖಲೀಫಾದಿಂದ (Burj Khalifa) ವಿದ್ಯುತ್ ದೀಪಬೆಳಗುವ ಮೂಲಕ ತನ್ನ ಒಗ್ಗಟ್ಟನ್ನು ಪ್ರದರ್ಶಿಸಿದೆ. ಭಾನುವಾರ ರಾತ್ರಿ ದುಬೈನಲ್ಲಿರುವ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಬಿಂಬಿಸಿ, Stay Strong India ಎಂಬ ಸಂದೇಶವನ್ನೂ ಸಾರಿದೆ.
ಕೊಲ್ಲಿ ರಾಷ್ಟ್ರದಲ್ಲಿರುವ (UAE) ಭಾರತೀಯ ಅಂಬಾಸಿಡರ್ ಪವನ್ ಕಪೂರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಕೊಲ್ಲಿ ರಾಷ್ಟ್ರಗಳ ಬೆಂಬಲ, ಒಗ್ಗಟ್ಟನ್ನು ಭಾರತವು ಪ್ರಶಂಸಿಸುತ್ತದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಕೇಸ್ಗಳು 1,73,13,163 ಗೆ ನೆಗೆದಿದೆ. ಸಾವಿನ ಸಂಖ್ಯೆ 1,95,123 ಮೀರಿದೆ. (Stay Strong India UAE message: Landmark buildings in United Arab Emirates illuminated with Tricolour to show solidarity india amid surge in Covid 19)
A message of solidarity from #UAE to #India over #COVID19 #Stay_Strong_India #WamNews pic.twitter.com/ezX8LmLp5s
— WAM English (@WAMNEWS_ENG) April 25, 2021
⭐️As #India battles the gruesome war against #COVID19 , its friend #UAE sends its best wishes
? @BurjKhalifa in #Dubai lits up in ?? to showcase its support#IndiaUAEDosti @MEAIndia @cgidubai @AmbKapoor @MoFAICUAE @IndianDiplomacy @DrSJaishankar @narendramodi pic.twitter.com/9OFERnLDL4
— India in UAE (@IndembAbuDhabi) April 25, 2021
Published On - 11:59 am, Mon, 26 April 21