ಭಾರತದಲ್ಲಿ ಇಂದು 3,52,991 ಕೊರೊನಾ ಕೇಸ್ಗಳು ದಾಖಲು, ಒಂದೇ ವಾರದಲ್ಲಿ 22.49 ಲಕ್ಷ ಪ್ರಕರಣಗಳು; ಉಳಿದ ರಾಷ್ಟ್ರಗಳಲ್ಲಿ ಪರಿಸ್ಥಿತಿ ಹೇಗಿದೆ?..
India's covid Updates: ಜ.10ರ ಸಮಯದಲ್ಲಿ ಏಳುದಿನಗಳ ಅವಧಿಯಲ್ಲಿ ಅಮೆರಿಕ 17.9 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು ಬಿಟ್ಟರೆ ಇನ್ಯಾವ ದೇಶಗಳಲ್ಲೂ ಅಷ್ಟು ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಕಳೆದ ಅಲೆಯಲ್ಲಿ ಉತ್ತುಂಗದಲ್ಲಿದ್ದ ಬ್ರೆಜಿಲ್ ಒಂದು ವಾರದಲ್ಲಿ 5.4 ಲಕ್ಷ ದಾಖಲಾಗಿದ್ದೇ ಹೆಚ್ಚು.
ಭಾರತವಷ್ಟೇ ಅಲ್ಲ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ಮತ್ತೆ ಅಪ್ಪಳಿಸಿದ್ದು, ಆತಂಕಕ್ಕೆ ದೂಡುತ್ತಿದೆ. ಭಾರತದಲ್ಲಿ ಕಳೆದ 24ಗಂಟೆಯಲ್ಲಿ 3,52,991 ಪ್ರಕರಣಗಳು ದಾಖಲಾಗಿದ್ದು, 2,891 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಭಾನುವಾರ ಕೂಡ ದೇಶದಲ್ಲಿ 3.55 ಹೊಸ ಕೇಸ್ಗಳು, 2,807 ಸಾವುಗಳು ದಾಖಲಾಗಿದ್ದವು. ಈ ಎರಡೂ ಸಂಖ್ಯೆಗಳು ಜಗತ್ತಿನ ಉಳಿದೆಲ್ಲ ರಾಷ್ಟ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರ ಸಂಖ್ಯೆಗಿಂತ ಜಾಸ್ತಿ.
ದೇಶದಲ್ಲಿ ಕೇವಲ 7ದಿನಗಳಲ್ಲಿ ಅಂದರೆ ಏಪ್ರಿಲ್ 18-25ರವರೆಗೆ 22.49 ಲಕ್ಷ ಕೊರೊನಾ ಕೇಸ್ಗಳು ದಾಖಲಾಗಿವೆ. ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಏಳುದಿನಗಳಲ್ಲಿ 22 ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಇದೇ ಮೊದಲು.. ಮತ್ತು ಅದೂ ಭಾರತದಲ್ಲೇ ಆಗಿದೆ.
ಜ.10ರ ಸಮಯದಲ್ಲಿ ಏಳುದಿನಗಳ ಅವಧಿಯಲ್ಲಿ ಅಮೆರಿಕ 17.9 ಲಕ್ಷ ಪ್ರಕರಣಗಳನ್ನು ದಾಖಲಿಸಿದ್ದು ಬಿಟ್ಟರೆ ಇನ್ಯಾವ ದೇಶಗಳಲ್ಲೂ ಅಷ್ಟು ಪ್ರಮಾಣದ ಕೊರೊನಾ ಸೋಂಕಿನ ಪ್ರಕರಣಗಳು ದಾಖಲಾಗಿಲ್ಲ. ಕಳೆದ ಅಲೆಯಲ್ಲಿ ಉತ್ತುಂಗದಲ್ಲಿದ್ದ ಬ್ರೆಜಿಲ್ ಒಂದು ವಾರದಲ್ಲಿ 5.4 ಲಕ್ಷ, ಯುಕೆಯಲ್ಲಿ 4.3 ಲಕ್ಷ, ಟರ್ಕಿಯಲ್ಲಿ 4.2 ಲಕ್ಷ ದಾಖಲಾಗಿದ್ದೇ ಹೆಚ್ಚು. ಉಳಿದಂತೆ ಇನ್ಯಾವ ದೇಶಗಳಲ್ಲೂ ಏಳು ದಿನಲ್ಲಿ 4 ಲಕ್ಷಕ್ಕೂ ಅಧಿಕ ಕೊರೊನಾ ಕೇಸ್ಗಳು ಪತ್ತೆಯಾಗಿಲ್ಲ. ಈ ಅಂಕಿ-ಅಂಶ ನೋಡಿದರೆ ಭಾರತದಲ್ಲಿ ಕೊರೊನಾ ಉಲ್ಬಣತೆಯ ಭೀಕರತೆ ಸ್ಪಷ್ಟವಾಗುತ್ತದೆ. ಕೊರೊನಾ ಸೋಂಕಿತರ ಪ್ರಮಾಣದೊಂದಿಗೆ ಸಾವಿನ ಸಂಖ್ಯೆಯನ್ನೂ ಏರಿಕೆಯಾಗುತ್ತಿದೆ. ಏಪ್ರಿಲ್ 18ರಂದು ಕೊನೆಯಾಗುವಂತೆ ಏಳುದಿನಗಳ ಅವಧಿಯಲ್ಲಿ ದೇಶದಲ್ಲಿ 8,588 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದರು. ಆದರೆ 18ರಿಂದ ಈಚೆಗೆ ಒಂದು ವಾರದಲ್ಲಿ ದಾಖಲಾದ ಸಾವಿನ ಸಂಖ್ಯೆ ಬರೋಬ್ಬರಿ 16,257. ದೇಶದಲ್ಲಿ ಸೋಂಕಿತರ ಏರಿಕೆಯ ಪ್ರಮಾಣ ಶೇ.47 ಇದ್ದರೆ, ಸಾವಿನ ಪ್ರಮಾಣ ಅದರ 2ರಷ್ಟು, ಅಂದರೆ ಶೇ.89ರಷ್ಟಿದೆ.
ಅಮೆರಿಕದಲ್ಲಿ ಜನವರಿ 15ರಂದು ಕೊನೆಯಾಗುವಂತೆ ಏಳು ದಿನಗಳಲ್ಲಿ 23,411 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಹಾಗೇ ಅದಾದ ನಂತರ ಬ್ರೆಜಿಲ್ನಲ್ಲಿ 21,865 ಜನ ಮೃತಪಟ್ಟಿದ್ದರ ದಾಖಲೆ ಇದೆ. ಅದಾದ ಬಳಿಕ ವಾರದಲ್ಲಿ ದಾಖಲಾದ ಸಾವಿನ ಸಂಖ್ಯೆಯಲ್ಲೂ ಭಾರತವೇ ಮುಂದಿದೆ. ಉಳಿದ ಯಾವುದೇ ದೇಶಗಳಲ್ಲಿ ಒಂದು ವಾರದಲ್ಲಿ 10ಸಾವಿರಕ್ಕೂ ಮಿಗಿಲಾಗಿ ಸಾವಿನ ಸಂಖ್ಯೆ ದಾಖಲಾಗಿಲ್ಲ.
ಇದನ್ನೂ ಓದಿ: ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಯ ವಿರುದ್ಧ ಸಾಲು ಸಾಲು ಆರೋಪ, ಎಫ್ಐಆರ್ ದಾಖಲು
Gold Rate Today: ಚಿನ್ನ ಕೊಳ್ಳುವ ಮೊದಲು ದರ ಗಮನಿಸಿ; ಕೂಡಿಟ್ಟ ಹಣಕ್ಕೆ ಸರಿಹೊಂದುವುದಾದರೆ ಚಿನ್ನ ಖರೀದಿಸಿ
Published On - 9:31 am, Mon, 26 April 21