ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ (Coronavirus Infection) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಗುರುವಾರ (ಜ 6) ಒಂದೇ ದಿನ 5031 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಾಸಿಟಿವಿಟಿ ಪ್ರಮಾಣ ಶೇ 3.95 ಇದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22,000 ದಾಟಿದೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.01 ಇದೆ. ರಾಜ್ಯದಲ್ಲಿ ಗುರುವಾರ 271 ಮದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 30,22,603 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,62,043 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಂದು ಕೊವಿಡ್ನಿಂದ ಒಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಗರದಲ್ಲಿ 4324 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಪ್ರಸ್ತುತ 18,913 ಸಕ್ರಿಯ ಪ್ರಕರಣಗಳಿವೆ. ಈವರೆಗೆ 12,76,374 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,41,046 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 16,414 ಮಂದಿ ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 4324, ದಕ್ಷಿಣ ಕನ್ನಡ 106, ಉಡುಪಿ 92, ಮಂಡ್ಯ 66, ಮೈಸೂರು 65, ಬೆಳಗಾವಿ 64, ಧಾರವಾಡ 48, ಹಾಸನ 47, ಬೆಂಗಳೂರು ಗ್ರಾಮಾಂತರ, ಕಲಬುರಗಿ 25, ಬಳ್ಳಾರಿ 21, ಚಿಕ್ಕಬಳ್ಳಾಪುರ, ತುಮಕೂರು 20, ಶಿವಮೊಗ್ಗ 16, ಗದಗ 11, ಕೊಡಗು 19, ಕೋಲಾರ 14, ಉತ್ತರ ಕನ್ನಡ 13, ವಿಜಯಪುರ 11, ಚಿಕ್ಕಮಗಳೂರು 9, ದಾವಣಗೆರೆ, ರಾಮನಗರ, ಬೀದರ್ 3, ಚಿತ್ರದುರ್ಗ 4, ಚಾಮರಾಜನಗರ 2.
ಇಂದಿನ 06/01/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/9mzstzdHK5 @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/Kayv0mvbHp
— K’taka Health Dept (@DHFWKA) January 6, 2022
ಇದನ್ನೂ ಓದಿ: ಭಾರತದಲ್ಲಿ 90,928 ಕೊರೊನಾ ಕೇಸ್ಗಳು ದಾಖಲು, ನಿನ್ನೆಗಿಂತಲೂ ಶೇ.56ರಷ್ಟು ಹೆಚ್ಚು; 325 ಮಂದಿ ಸಾವು
ಇದನ್ನೂ ಓದಿ: ಮುಂದಿನ 2 ವಾರ ನಿರ್ಣಾಯಕ: ಧಿಡೀರನೇ ಕೊರೊನಾ ಕೇಸ್ ಏರಿಕೆಯಾದರೆ ಆರೋಗ್ಯ ವ್ಯವಸ್ಥೆಯೇ ಕುಸಿದುಬೀಳಬಹುದು!