ಕೊವಿಡ್‌ಗೆ ಪತಿ ಬಲಿ: ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನ, 12 ವರ್ಷದ ಮಗಳು ಸಾವು

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿಯಿಂದ ಕೌಟುಂಬಿಕ ದುರಂತಗಳು ಘಟಿಸುವುದು ಮುಂದುವರಿದಿದೆ. ಪತಿ 3 ತಿಂಗಳ ಹಿಂದೆ ಕೊವಿಡ್‌ಗೆ ಬಲಿಯಾದರೆಂದು ಅಧೀರರಾದ ಪತ್ನಿ, ತಮ್ಮ ಮಗಳನ್ನು ಸಾಯಿಸಿ,ತಾವೂ ನೇಣಿಗೆ ಕೊರಳೊಡ್ಡಿ ಸಾವಿಗೆ ಯತ್ನಿಸಿದ್ದಾರೆ. ಆದರೆ ಅವರೊಬ್ಬರು ಮಾತ್ರ ಈಗ ಬದುಕುಳಿದಿದ್ದಾರೆ.

ಕೊವಿಡ್‌ಗೆ ಪತಿ ಬಲಿ: ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನ, 12 ವರ್ಷದ ಮಗಳು ಸಾವು
ಕೊವಿಡ್‌ಗೆ ಪತಿ ಬಲಿ: ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನ, 12 ವರ್ಷದ ಮಗಳು ಸಾವು
Updated By: ಸಾಧು ಶ್ರೀನಾಥ್​

Updated on: Sep 22, 2021 | 1:05 PM

ಯಲಹಂಕ: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮಹಾಮಾರಿಯಿಂದ ಕೌಟುಂಬಿಕ ದುರಂತಗಳು ಘಟಿಸುವುದು ಮುಂದುವರಿದಿದೆ. ಪತಿ 3 ತಿಂಗಳ ಹಿಂದೆ ಕೊವಿಡ್‌ಗೆ ಬಲಿಯಾದರೆಂದು ಅಧೀರರಾದ ಪತ್ನಿ, ತಮ್ಮ ಮಗಳನ್ನು ಸಾಯಿಸಿ,ತಾವೂ ನೇಣಿಗೆ ಕೊರಳೊಡ್ಡಿ ಸಾವಿಗೆ ಯತ್ನಿಸಿದ್ದಾರೆ. ಆದರೆ ಅವರೊಬ್ಬರು ಮಾತ್ರ ಈಗ ಬದುಕುಳಿದಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ದಿಬ್ಬೂರು ಗ್ರಾಮದಲ್ಲಿ ಘಟನೆ ನಡೆದಿದೆ. 3 ತಿಂಗಳ ಹಿಂದೆ ಕೊವಿಡ್‌ಗೆ ಪತಿ ಬಲಿಯಾದ ಹಿನ್ನೆಲೆ ದೊಡ್ಡ ಮಗಳಿಗೆ ನೇಣು ಬಿಗಿದು ಪತ್ನಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 12 ವರ್ಷದ ಮಗಳು ದಿವ್ಯಾ ಕೊನೆಯುಸಿರೆಳೆದಿದ್ದು, ಪತ್ನಿ ಸ್ಥಿತಿ ಗಂಭೀರವಾಗಿದೆ.

ತಾಯಿ ವರಲಕ್ಷ್ಮೀ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ವೇಳೆ ಹಿರಿಯ ಮಗಳೂ ದಿವ್ಯಾಗೂ ನೇಣು ಬಿಗಿದಿದ್ದಾರೆ. ಅದನ್ನು ಕಂಡು ಕಿರಿಯ ಮಗಳು ಮನೆ ಹೊರಗೆ ಬಂದು ಕಿರುಚಿಕೊಂಡಿದ್ದಾಳೆ. ತಕ್ಷಣ ಸ್ಥಳೀಯರು ತಾಯಿ ಮತ್ತು ಮಗಳು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದಿವ್ಯಾ(12) ಅಸುನೀಗಿದ್ದು, ವರಲಕ್ಷ್ಮೀ (38) ಸ್ಥಿತಿ ಗಂಭೀರವಾಗಿದೆ.

ರಾಜಾನುಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ವರಲಕ್ಷ್ಮಿಗೆ ಚಿಕಿತ್ಸೆ ಮುಂದುವರಿದಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಪ್ರಕರಣ; ಜೀವ ಬಿಡುವವರೆಗೂ ಅಳಿಯನ ಜೊತೆ ಫೋನ್​ನಲ್ಲೇ ಮಾತಾಡುತ್ತಿದ್ದ ಅತ್ತೆ, ನಡೆದಿದ್ದೇನು?

ಇದನ್ನೂ ಓದಿ:
ಕೋರ್ಟ್ ಆದೇಶವಿದ್ದರೂ ಕೆಲಸಕ್ಕೆ ನೇಮಿಸಿಕೊಳ್ಳದ ಹಿನ್ನೆಲೆ ಗ್ರಾ.ಪಂ ಕಚೇರಿ ಮುಂದೆ ವಿಷ ಸೇವಿಸಿ ವಾಟರ್‌ಮ್ಯಾನ್ ಆತ್ಮಹತ್ಯೆಗೆ ಯತ್ನ

(covid 19 tragedy woman tries commit suicide after she lost husband to coronavirus daughter died in yelahanka)

Bengaluru Apartment Fire: ಆ ಯಮ್ಮ ಕಾಪಾಡಿ ಕಾಪಾಡಿ ಅಂತ ಹೊಡ್ಕೋತಿತ್ತು |Tv9Kannada

Published On - 12:49 pm, Wed, 22 September 21