ಮಾರಾಟವಾಗಿದ್ದ ಗಂಡು ಮಗು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಪತ್ತೆ
ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಎಂಬ ಮಹಿಳೆ ತನ್ನ ಗಂಡು ಮಗುವನ್ನು ವಿಜಯಪುರ ಜಿಲ್ಲಾಸ್ಪತ್ರೆ ಬಳಿ ಮಾರಾಟ ಮಾಡಿದ್ದಳು. ಆಗಸ್ಟ್ 26ರಂದು ಮಗುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಮಾರಾಟ ಮಾಡಿದ್ದರು.
ವಿಜಯಪುರ: ಜಿಲ್ಲೆಯಲ್ಲಿ 5,000 ರೂ.ಗೆ ಮಾರಾಟ ಮಾಡಿದ್ದ ಮಗು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಪತ್ತೆಯಾಗಿದೆ. ಹೆತ್ತ ತಾಯಿ ತನ್ನ ಗಂಡು ಮಗುವನ್ನು 5,000 ರೂ.ಗೆ ಮಾರಾಟ ಮಾಡಿದ್ದಾಳೆ ಎಂದು ವರದಿಯಾಗಿತ್ತು. ಈ ಪ್ರಕರಣ ಸಂಬಂಧ ಸೆಪ್ಟೆಂಬರ್ 12ರಂದು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಮಗು ಇಂದು (ಸೆ.22) ಪತ್ತೆಯಾಗಿದೆ. ಮಗುವನ್ನು ಖರೀದಿಸಿದವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿಗೆ ಅನಾರೋಗ್ಯ ಹಿನ್ನೆಲೆ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಎಂಬ ಮಹಿಳೆ ತನ್ನ ಗಂಡು ಮಗುವನ್ನು ವಿಜಯಪುರ ಜಿಲ್ಲಾಸ್ಪತ್ರೆ ಬಳಿ ಮಾರಾಟ ಮಾಡಿದ್ದಳು. ಆಗಸ್ಟ್ 26ರಂದು ಮಗುವಿನ ತಾಯಿ ಹಾಗೂ ಸಂಬಂಧಿಕರೇ ಮಗುವನ್ನು ಮಾರಾಟ ಮಾಡಿದ್ದರು. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿಗೆ ಮಾರಿದ್ದರು. ಮಗು ಮಾರಾಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ 12ರಂದು ದೂರು ದಾಖಲಾಗಿತ್ತು. ಮಗು ಮಾರಾಟದಲ್ಲಿ ಜಿಲ್ಲಾ ಆಸ್ಪತ್ರೆ ಸ್ಟಾಪ್ ನರ್ಸ್ ಕಸ್ತೂರಿ ಕೈವಾಡವಿದೆ ಎಂಬ ಆರೋಪ ವ್ಯಕ್ತವಾಗಿತ್ತು. ಕಸ್ತೂರಿಯನ್ನು ಸೇವೆಯಿಂದ ಅಮಾನತ್ತು ಮಾಡಲಾಗಿತ್ತು.
ಮಗುವಿನ ತಾಯಿ ರೇಣುಕಾ ಮಗುವನ್ನು ಸ್ಟಾಪ್ ನರ್ಸ್ ಕಸ್ತೂರಿ ಮೂಲಕ ಆಕೆಯ ಪತಿ ಮಂಜುನಾಥ್ಗೆ ಮಾರಾಟ ಮಾಡಿದ್ದಾಗಿ ಮಾಹಿತಿ ನೀಡಿದ್ದಳು. ಮಂಜುನಾಥ್ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಇದೀಗಾ ಮಗು ಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ. ಹುಬ್ಬಳ್ಳಿಯ ಕಿಮ್ಸ್ನ ತೀವ್ರ ನಿಗಾ ಘಟಕದಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿಯನ್ನು ನಂತರ ನೀಡುವುದಾಗಿ ಎಸ್ಪಿ ಆನಂದಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ
ಗೋವಾದಲ್ಲಿ ಕಾರು ಅಪಘಾತ; ಉದಯೋನ್ಮುಖ ನಟಿ ಈಶ್ವರಿ ದೇಶಪಾಂಡೆ ಮತ್ತು ಆಕೆಯ ಸ್ನೇಹಿತ ದುರ್ಮರಣ
ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ
(child who was sold has been found in Hubli KIMS Hospital)
Published On - 2:49 pm, Wed, 22 September 21