Corona Vaccine: ಕರ್ನಾಟಕದಲ್ಲಿ 2ನೇ ದಿನ 6,300 ಹಿರಿಯ ನಾಗರಿಕರಿಗೆ ಲಸಿಕೆ ವಿತರಣೆ

Coronavirus Vaccine: ಕರ್ನಾಟಕದಲ್ಲಿ ಲಸಿಕೆ ಪಡೆದಿರುವ 6,313 ಜನರಲ್ಲಿ 1,147 ಮಂದಿ 45ರಿಂದ 60 ವರ್ಷದೊಳಗಿನ ನಿಗದಿತ ಆರೋಗ್ಯ ಸಮಸ್ಯೆ ಹೊಂದಿದ ಜನರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದೆ.

Corona Vaccine: ಕರ್ನಾಟಕದಲ್ಲಿ 2ನೇ ದಿನ 6,300 ಹಿರಿಯ ನಾಗರಿಕರಿಗೆ ಲಸಿಕೆ ವಿತರಣೆ
ಸಾಂದರ್ಭಿಕ ಚಿತ್ರ
Updated By: ganapathi bhat

Updated on: Apr 06, 2022 | 7:28 PM

ಬೆಂಗಳೂರು: ಕೊರೊನಾ ಸೋಂಕಿನ ವಿರುದ್ಧ ಹೋರಾಟ ಮುಂದುವರಿಸಿರುವ ಭಾರತ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಿಗದಿತ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಲಸಿಕೆ ವಿತರಣೆ ನಡೆಸುತ್ತಿದೆ. ಮಾರ್ಚ್ 1ರಿಂದ ಎರಡನೇ ಹಂತದ ಲಸಿಕೆ ಅಭಿಯಾನ ಮುಂದುವರಿದಿದೆ. ಕೊರೊನಾ ಲಸಿಕೆ ನೀಡುವ ಎರಡನೇ ದಿನದಂದು (ಮಾರ್ಚ್ 2), ನಿನ್ನೆ ರಾಜ್ಯಾದ್ಯಂತ ಒಟ್ಟು 6,313 ಜನರು ಮೊದಲ ಲಸಿಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

6,313 ಜನರಲ್ಲಿ 1,147 ಮಂದಿ 45ರಿಂದ 60 ವರ್ಷದೊಳಗಿನ ನಿಗದಿತ ಆರೋಗ್ಯ ಸಮಸ್ಯೆ ಹೊಂದಿದ ಜನರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಕುರಿತು ಮಾಹಿತಿ ನೀಡಿದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿಯ ಕೊವಿಡ್ ಕಾರ್ಯಕರ್ತರು ಸಹಿತ ಒಟ್ಟು 10,046 ಜನರು ಮಂಗಳವಾರ ಲಸಿಕೆ ಹಾಕಿಸಿಕೊಂಡಿದ್ದಾರೆ. ಜನವರಿ 16ರಂದು ಲಸಿಕೆ ಅಭಿಯಾನ ಆರಂಭವಾದ ನಂತರ ಒಟ್ಟು 8.3 ಲಕ್ಷ ಮಂದಿ ಕೊವಿಡ್-19 ಲಸಿಕೆ ಪಡೆದಿದ್ದಾರೆ.

ಕೊವಿನ್ ತಂತ್ರಾಂಶದ ಮುಖ್ಯಸ್ಥ ಆರ್​.ಎಸ್​.ಶರ್ಮಾ, ಪೂರೈಕೆ ಅನುಗುಣವಾಗಿ ಜನರನ್ನು ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸುವುದಕ್ಕಿಂತಲೂ ಜನರ ಬೇಡಿಕೆ ಹೆಚ್ಚಾಗಿ ಲಸಿಕೆ ಪೂರೈಸಬೇಕಾದ ಪರಿಸ್ಥಿತಿ ಇರುವುದು ನಮಗೆ ಉತ್ತೇಜನ ನೀಡಿದೆ. ಇದುವರೆಗೆ ಸುಮಾರು 50 ಲಕ್ಷಕ್ಕಿಂತಲೂ ಹೆಚ್ಚು ಜನ ಕೊವಿನ್​ ತಂತ್ರಾಂಶದ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ಕೊವಿನ್​ನಲ್ಲಿ ಕೆಲ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು, ಜನರ ಮೊಬೈಲ್​ ಸಂಖ್ಯೆಗೆ ಒಟಿಪಿ ಕಳುಹಿಸುವಲ್ಲಿಯೂ ಸಮಸ್ಯೆ ಆಗುತ್ತಿತ್ತು. ಈಗ ಅವೆಲ್ಲವನ್ನೂ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

45 ವರ್ಷ ಮೇಲ್ಪಟ್ಟವರಿಗೆ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ
ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಏಡ್ಸ್ ರೋಗದಿಂದ ಬಳಲುತ್ತಿರುವ ಹೆಸರು ನೋಂದಾಯಿಸಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ಸಂಬಂಧಿಸಿ, ಕಳೆದ ಒಂದು ವರ್ಷದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸ್ಪತ್ರೆಗೆ ದಾಖಲಾದವರು, ತೀವ್ರವಾದ ಶ್ವಾಸಕೋಶದ ಅಪಧಮನಿ ಅಧಿಕ ರಕ್ತದೊತ್ತಡ (ಪಿಎಹೆಚ್), ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಲು ಅರ್ಹರು. 10 ವರ್ಷಗಳಿಗಿಂತ ಹೆಚ್ಚು ಕಾಲ ಮಧುಮೇಹದಿಂದ ಬಳಲುತ್ತಿರುವ ಅಥವಾ ಮಧುಮೇಹದಿಂದ ಉಂಟಾಗುವ ತೊಂದರೆಗಳನ್ನು ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೊಂದಿರುವವರನ್ನು ಸಹ ಲಸಿಕೆ ಪಡೆಯುವ ಪಟ್ಟಿಯಲ್ಲಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಕೊರೊನಾ ಹಿಮ್ಮೆಟ್ಟಿಸುವ ಪ್ರಯೋಗ ಮೊದಲು ಶುರುಮಾಡಿದ್ದೇ ಭಾರತೀಯ ವೈದ್ಯರು

Tv9 Digital Live: 60 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ; ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಧೈರ್ಯ ತುಂಬಿದ ತಜ್ಞರು

Published On - 3:09 pm, Wed, 3 March 21