ಬೆಂಗಳೂರು: ಕೊರೊನಾ ಸೋಂಕಿನ ಎರಡನೇ ಅಲೆ ಆತಂಕ ಹಿನ್ನೆಲೆಯಲ್ಲಿ ಇಂದಿನಿಂದ ನಗರದ ಮೂರು ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳು ಪುನಾರಂಭವಾಗುತ್ತಿದೆ. ಕೊವಿಡ್ 2ನೇ ಅಲೆ ನಿಯಂತ್ರಣಕ್ಕೆ ಬಿಬಿಎಂಪಿ, ಆರೋಗ್ಯ ಇಲಾಖೆಯಿಂದ ಜಂಟಿ ಪ್ಲ್ಯಾನ್ ಕೇರ್ ಸೆಂಟರ್‌ಗಳ ಪುನಾರಂಭಕ್ಕೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಎಎಲ್ ಕೊವಿಡ್ ಕೇರ್ ಸೆಂಟರ್, ಹಜ್ ಭವನದ ಸೆಂಟರ್, ಕೋರಮಂಗಲ ಒಳಾಂಗಣ ಸ್ಟೇಡಿಯಂನ ಕೇಂದ್ರವನ್ನು ಆರಂಭ ಮಾಡಲಾಗುತ್ತಿದ್ದು, ಪ್ರತಿ ಕೊವಿಡ್ ಕೇರ್ ಸೆಂಟರ್‌ನಲ್ಲಿ 200 ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಇನ್ನು ಕಳೆದ ವರ್ಷದ ಬೆಡ್ ಹಾಗೂ ಕಾಟ್ಗಳಿವೆ. ಕೇವಲ ಡಾಕ್ಟರ್ ಹಾಗೂ ನರ್ಸ್, ಆಹಾರ ವ್ಯವಸ್ಥೆಗೆ ಸಿದ್ಧತೆ ಮಾಡಬೇಕಿದೆ. ಒಂದೇ ಕಡೆ 5 ಕ್ಕಿಂತ ಹೆಚ್ಚು ಕೊವಿಡ್ ಕೇಸ್ ಪತ್ತೆಯಾದರೆ, ಆ ಏರಿಯಾವನ್ನ ಮೈಕ್ರೋ ಕಂಟೇನ್ಮೆಂಟ್ ಆಗಿ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಟಿವಿ9 ಡಿಜಿಟಲ್ಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಕೊರೊನಾ ಸೋಂಕಿತರ ಸಂಖ್ಯೆಯೂ ಇಳಿಕೆಯಾಗಿದೆ. ಕೊರೊನಾ ಸೋಂಕಿತರು ಸೆಂಟರ್‌ಗೆ ಬರಲು ಸಿದ್ಧರಾಗಿಲ್ಲ. ಯಾರೂ ಸಹ ಕೊವಿಡ್ ಕೇರ್ ಸೆಂಟರ್‌ಗಳಿಗೆ ಬರುತ್ತಿಲ್ಲ. ಯಾವಾಗ ಸೋಂಕಿತರು ಬರುತ್ತಾರೋ ಆಗ ತೆರೆಯುತ್ತೇವೆ. ಸರ್ಕಾರ ಸೂಚನೆ ಹಿನ್ನೆಲೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದೇವೆ. ಕೊವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು. ಹೀಗಾಗಿ ಇಂದಿನಿಂದ ಸೆಂಟರ್ ಓಪನ್ ಇರುತ್ತೆ, ಅಗತ್ಯ ವಿದ್ದಾಗ ರೋಗಿಗಳನ್ನ ಶಿಫ್ಟ್ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಸೆಮಿ ಲಾಕ್‌ಡೌನ್ ಅಥವಾ ಲಾಕ್‌ಡೌನ್ ಈ ಸಂದರ್ಭಕ್ಕೆ ಅನ್ವಯವಾಗುವುದಿಲ್ಲ: ಡಾ.ಸುಧಾಕರ್
ಗೃಹ ಇಲಾಖೆ ಆರೋಗ್ಯ ಇಲಾಖೆ ಸಮನ್ವಯ ಸಭೆ ಇದೆ. ಸೆಮಿ ಲಾಕ್‌ಡೌನ್ ಅಥವಾ ಲಾಕ್‌ಡೌನ್ ಈ ಸಂದರ್ಭಕ್ಕೆ ಅನ್ವಯವಾಗುವುದಿಲ್ಲ. ಮೂರು ಕಡೆ ಈ ವಾರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸುತ್ತೇವೆ. ರಾಜ್ಯದಲ್ಲಿ ಈಗಷ್ಟೇ ಕೊವಿಡ್ ಎರಡನೇ ಅಲೆ ಆರಂಭವಾಗಿದೆ. ಕೋವಿಡ್ ಕೇರ್ ಸೆಂಟರ್‌ಗೆ ಈಗಲೇ ಜನ ಬರವುದಿಲ್ಲ. ನೋಡಿಕೊಂಡು ಕೋವಿಡ್ ಕೇರ್ ಸೆಂಟರ್ ಆರಂಭ ಮಾಡುತ್ತೇವೆ ಡಾ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಗಡಿ ರಾಜ್ಯಗಳಿಂದ ಬರುವವರ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಪರೀಕ್ಷೆ ಕಡ್ಡಾಯ. ಅಲ್ಲಿಯೇ ಕೊವಿಡ್ ಟೆಸ್ಟ್ ಮಾಡಿಸಿಕೊಂಡು ಬರಬೇಕು. ಮಾಸ್ಕ್ ಧರಿಸದಿದ್ದರೆ 250 ರೂಪಾಯಿ ದಂಡ ವಿಧಿಸುತ್ತೇವೆ. ಕೊವಿಡ್ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೊವಿಡ್ ಲಸಿಕೆ ಬಗ್ಗೆ ಅರಿವು ಮೂಡಿಸಲಾಗುವುದು. ಮದುವೆ, ಸಮಾರಂಭಗಳಲ್ಲಿ ಜನರ ಮಿತಿ ಪಾಲಿಸಬೇಕು. ಮಾರ್ಷಲ್ ನೇಮಿಸಿ ದಂಡ ವಿಧಿಸಲು ಕ್ರಮಕೈಗೊಳ್ಳುತ್ತೇವೆ. ಸಾರ್ವಜನಿಕ ಸಮಾರಂಭಗಳಲ್ಲಿ ದೈಹಿಕ ಅಂತರ ಕಡ್ಡಾಯ. ಶಿಕ್ಷಣ ಸಂಸ್ಥೆಗಳನ್ನು 1 ವಾರ ಸೂಕ್ಷ್ಮವಾಗಿ ಗಮನಿಸುತ್ತೇವೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಸಚಿವ ಸಂಪುಟದಲ್ಲೂ ಕೂಡ ಈ ಬಗ್ಗೆ ಒಮ್ಮತವಿದೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:
ಕೊರೊನಾ ಎರಡನೇ ಅಲೆ: ಮಕ್ಕಳ ಬಗ್ಗೆ ಇರಲಿ ಎಚ್ಚರ, ಬೆಂಗಳೂರಿನಲ್ಲಿ ಕೊರೊನಾಗೆ ಚಿಕ್ಕ ಚಿಕ್ಕ ಮಕ್ಕಳು ಗುರಿ