ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು

ಒಂದು ಕೆ.ಜಿ. ದಪ್ಪ ಮಣಸಿನಕಾಯಿ 5 ರೂಪಾಯಿಗೆ ಬಿಕರಿಯಾಗುತ್ತಿರುವ ಹಿನ್ನೆಲೆ ಬೇಸತ್ತು ಬೆಳೆ‌ ನಾಶ ಮಾಡಿರುವುದಾಗಿ ರೈತ ಅಂಬರೀಶ್ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಅವರು ಆಗ್ರಹಿಸಿದ್ದಾರೆ.

ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು
ಸೂಕ್ತ ಬೆಲೆ ಸಿಗದ ಹಿನ್ನೆಲೆ ದಪ್ಪ ಮಣಸಿನಕಾಯಿ ಬೆಳೆ ನಾಶ

Updated on: Apr 27, 2021 | 10:36 AM

ಕೋಲಾರ: ಸೂಕ್ತ ಬೆಲೆ ಸಿಗದ ಹಿನ್ನೆಲೆ ಉರಟಿ ಅಗ್ರಹಾರದಲ್ಲಿ ದಪ್ಪ ಮಣಸಿನಕಾಯಿ ಕ್ಯಾಪ್ಸಿಕಂ (capsicum)  ಬೆಳೆಯನ್ನು ರೈತರು ನಾಶ ಮಾಡಿದ್ದಾರೆ. ಕೋಲಾರ ತಾಲೂಕಿನ ಉರಟಿ ಅಗ್ರಹಾರ ಗ್ರಾಮದ ಅಂಬರೀಶ್ ಎಂಬುವರಿಗೆ ಸೇರಿದ ಕ್ಯಾಪ್ಸಿಕಂ ಬೆಳೆ ಇದಾಗಿದೆ.

ಮಹಾಮಾರಿ‌ ಕೊರೊನಾ ಆತಂಕದಿಂದ ಲಾಕ್ ಡೌನ್ ಹಿನ್ನೆಲೆ ಬೆಲೆ ಕಳೆದುಕೊಂಡ ಕ್ಯಾಪ್ಸಿಕಂ ಬೆಳೆಯನ್ನು ರೈತರು ದಪ್ಪ ಮಣಸಿನಕಾಯಿ ಗಿಡಗಳನ್ನು ಕಿತ್ತುಹಾಕಿದ್ದಾರೆ.  ರೈತ ಅಂಬರೀಶ್ ಸುಮಾರು‌ ಒಂದೂವರೆ ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದರು.

ರೈತ ಅಂಬರೀಶ್ ಸುಮಾರು‌ ಒಂದೂವರೆ ಎಕರೆಯಲ್ಲಿ ಕ್ಯಾಪ್ಸಿಕಂ ಬೆಳೆದಿದ್ದರು

ಒಂದು ಕೆ.ಜಿ. ದಪ್ಪ ಮಣಸಿನಕಾಯಿ 5 ರೂಪಾಯಿಗೆ ಬಿಕರಿಯಾಗುತ್ತಿರುವ ಹಿನ್ನೆಲೆ ಬೇಸತ್ತು ಬೆಳೆ‌ ನಾಶ ಮಾಡಿರುವುದಾಗಿ ರೈತ ಅಂಬರೀಶ್ ಹೇಳಿದ್ದಾರೆ. ಇದೇ ವೇಳೆ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಅವರು ಆಗ್ರಹಿಸಿದ್ದಾರೆ.

ಇದನ್ನು ಓದಿ: 
Horoscope – ದಿನ ಭವಿಷ್ಯ; ಮಿಥುನ ರಾಶಿಯವರಿಗೆ ಜಿಪುಣತನದಿಂದ ತೊಂದರೆಯಾಗುವ ಸಾಧ್ಯತೆ

(covid curfew loss urati agrahara farmer in kolar taluk destroys capsicum crop)

Published On - 10:33 am, Tue, 27 April 21