ಆತಂಕ ಬಿಟ್ಟು ಲಸಿಕೆ ತೆಗೆದುಕೊಳ್ಳಿ: ಡಾ. ಎಂ.ಕೆ. ಸುದರ್ಶನ್ ಅಭಯ

| Updated By: ganapathi bhat

Updated on: Apr 06, 2022 | 8:55 PM

ನಾನು ಲಸಿಕೆ ಪಡೆದ ಬಳಿಕ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ವ್ಯಾಕ್ಸಿನ್​ಗಳಂತೆ ಇದು ಕೂಡ ಒಂದು ವ್ಯಾಕ್ಸಿನ್ ಅಷ್ಟೆ. ಬೆಂಗಳೂರಿನಲ್ಲಿ ಡಾ. ಎಂ.ಕೆ. ಸುದರ್ಶನ್ ಟಿವಿ9 ಜೊತೆ ಮಾತನಾಡಿದ್ದಾರೆ.

ಆತಂಕ ಬಿಟ್ಟು ಲಸಿಕೆ ತೆಗೆದುಕೊಳ್ಳಿ: ಡಾ. ಎಂ.ಕೆ. ಸುದರ್ಶನ್ ಅಭಯ
ಡಾ. ಎಂ.ಕೆ. ಸುದರ್ಶನ್ ಲಸಿಕೆ ಪಡೆದರು
Follow us on

ಬೆಂಗಳೂರು: ನಾನು ಲಸಿಕೆ ಪಡೆದ ಬಳಿಕ ಯಾವುದೇ ತೊಂದರೆಯಾಗಿಲ್ಲ. ಎಲ್ಲಾ ವ್ಯಾಕ್ಸಿನ್​ಗಳಂತೆ ಇದು ಕೂಡ ಒಂದು ವ್ಯಾಕ್ಸಿನ್ ಅಷ್ಟೆ. ಆತಂಕ ಬಿಟ್ಟು ಎಲ್ಲರೂ ಲಸಿಕೆ ತೆಗೆದುಕೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎಂ.ಕೆ. ಸುದರ್ಶನ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಡಾ. ಎಂ.ಕೆ. ಸುದರ್ಶನ್ ಲಸಿಕೆ ಪಡೆದ ಬಳಿಕ ಟಿವಿ9 ಜೊತೆ ಮಾತನಾಡಿದ್ದಾರೆ.

ಕೊವಿಡ್ ಲಸಿಕೆಯಿಂದ ಸಣ್ಣಪುಟ್ಟ ಅಡ್ಡಪರಿಣಾಮಗಳು ಆಗಬಹುದು. ನಾನು ಎಂದಿನಂತೆ ದಿನಚರಿ ಮುಂದುವರೆಸುತ್ತೇನೆ ಎಂದು ಲಸಿಕೆ ಪಡೆಯಲು ವಿಶ್ವಾಸದ ಮಾತುಗಳನ್ನು ಡಾ. ಸುದರ್ಶನ್ ಎಂ.ಕೆ. ಹೇಳಿದ್ದಾರೆ. ಆದರೆ, ಕೊರೊನಾ 2ನೇ ಡೋಸ್ ಲಸಿಕೆ ಪಡೆಯುವವರೆಗೆ ಮದ್ಯಪಾನ ಬೇಡ ಎಂದು ಅವರು ಸೂಚನೆ ನೀಡಿದ್ದಾರೆ.

ಕೊವಿಡ್ ಲಸಿಕೆ ಪಡೆದ ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ ಡಾ. ಸುದರ್ಶನ್ ಬಲ್ಲಾಳ್
ಇವತ್ತು ನಮಗೆ ಬಹಳ ಮಹತ್ವದ ದಿವಸ. ನಮ್ಮ ದೇಶದಲ್ಲಿ ತಯಾರಾದ ಲಸಿಕೆಯನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ. ನಾನು ಕೂಡ ಇವತ್ತು ಲಸಿಕೆ ತೆಗೆದುಕೊಂಡಿದ್ದೇನೆ. ಮೊದಲ ದಿನ ಲಸಿಕೆ ಪಡೆಯಲು ನಾನು ಬಹಳ ಭಾಗ್ಯವಂತ. ಈ ವ್ಯಾಕ್ಸಿನ್ ತೆಗೆದುಕೊಳ್ಳಲು ನೀವೂ ಎಲ್ಲರಿಗೂ ಪ್ರೇರಪಿಸಿ ಎಂದು ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥರು ಹಾಗೂ ಟಾಸ್ಕ್‌ಫೋರ್ಸ್ ಸಮಿತಿ ಸದಸ್ಯ ಡಾ. ಸುದರ್ಶನ್ ಬಲ್ಲಾಳ್ ಮಾತನಾಡಿದ್ದಾರೆ.

ಕೆಲವೇ ದಿನಗಳಲ್ಲಿ ಲಸಿಕೆ ಬಗ್ಗೆ ಇರುವ ಎಲ್ಲಾ ಅನುಮಾನಗಳು ದೂರವಾಗಲಿದೆ. ಧೈರ್ಯವಾಗಿ ಎಲ್ಲರೂ ಲಸಿಕೆಯನ್ನು ಪಡೆಯಬಹುದಾಗಿದೆ. ಕೊರೊನಾ ಲಸಿಕೆ ಸಂಜೀವಿನಿ ಎಂದು ಧೈರ್ಯ ಹೇಳಬೇಕು. ಜನರಲ್ಲಿ ಧೈರ್ಯ ತುಂಬಬೇಕು. ಅದಕ್ಕಾಗಿಯೇ ನಾನು ಲಸಿಕೆಯನ್ನು ಪಡೆದಿದ್ದೇನೆ ಎಂದು ಅವರು ಧೈರ್ಯ ತುಂಬಿದ್ದಾರೆ.

ಕೊವಿಡ್ ಲಸಿಕೆ ಪಡೆದರೂ ನಿಯಮ ಪಾಲನೆ ಕಡ್ಡಾಯ. ಕೊವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಚಿಕ್ಕಂದನಿಂದಲೂ ವ್ಯಾಕ್ಸಿನೇಶನ್ ತೆಗೆದುಕೊಳ್ಳುತ್ತೇವೆ. ಅದರಿಂದ ಸಣ್ಣಪುಟ್ಟ ಅಡ್ಡಪರಿಣಾಮಗಳು ಆಗಬಹುದು ಅಷ್ಟೆ. ಆ ಬಗ್ಗೆ ಜಾಸ್ತಿ ಯೋಚನೆ ಮಾಡಬಾರದು ಎಂದು ಟಿವಿ9ಗೆ ಲಸಿಕೆ ಪಡೆದ ಬಳಿಕ ಡಾ. ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.

ಡಾ. ಸುದರ್ಶನ್ ಬಲ್ಲಾಳ್

ಇಡೀ ವಿಶ್ವದಲ್ಲೇ ಅತಿದೊಡ್ಡ ಅಭಿಯಾನ.. ಭಾರತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ಕೆ ಜೈ ಹೋ ಎಂದ UNICEF

Published On - 1:15 pm, Sat, 16 January 21