ಶಿರಚ್ಛೇದ ಮಾಡಿದ ರೀತಿಯಲ್ಲಿ ಹಸುವಿನ ಕರು ಪತ್ತೆ: ಚಿರತೆ ದಾಳಿಯೋ? ದುಷ್ಕೃತ್ಯವೋ?
ಗದಗ ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಹಸು ಕರುವಿನ ಮೃತದೇಹ ಪತ್ತೆಯಾಗಿದೆ. ಶಿರಚ್ಛೇದ ಮಾಡಿರುವ ರೀತಿಯಲ್ಲಿ ಕರು ಪತ್ತೆಯಾಗಿದ್ದು, ಘಟನೆ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಚಿರತೆ ದಾಳಿಯಿಂದ ಹಸು ಮೃತಪಟ್ಟಿದೆಯೋ? ಅಥವಾ ದುಷ್ಟರು ನಡೆಸಿರುವ ಅಟ್ಟಹಾಸವೋ? ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಗದಗ, ಡಿಸೆಂಬರ್ 01: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಶಿರಚ್ಛೇದ ಮಾಡಿದ ರೀತಿಯಲ್ಲಿ ಹಸುವಿನ ಕರು ಪತ್ತೆಯಾಗಿದೆ. ಘಟನೆ ಬೆನ್ನಲ್ಲೇ ಇದು ಚಿರತೆ ದಾಳಿಯಾಗಿರಬಹುದು ಎಂದು ಅಂದಾಜಿಲಾಗಿತ್ತು. ಆದರೆ, ಹಸುವಿನ ಕರು ತಲೆ ಕಡಿದು ಚೀಲದಲ್ಲಿ ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಎಸಿದಿರುವ ಬಗ್ಗೆಯೂ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಎಪಿಎಂಸಿ ಜಾನುವಾರು ಮಾರುಕಟ್ಟೆ ಬಳಿಯೇ ಕರುವಿನ ಮೃತದೇಹ ಪತ್ತೆಯಾಗಿದ್ದು, ಘಟನೆಗೆ ಕಾರಣ ಏನೆಂದು ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 01, 2025 03:41 PM
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
