ಇಂದೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋ ಹತ್ಯೆ ಪ್ರತಿಬಂಧಕ ವಿಧೇಯಕ

|

Updated on: Feb 02, 2021 | 8:17 PM

ನಾಳೆ ವಿಧಾನಪರಿಷತ್‌ ಅಧಿವೇಶನದಲ್ಲಿ ಬಿಲ್‌ ಮಂಡನೆ ಮಾಡುತ್ತೇವೆ ಎಂದು  ಪರಿಷತ್‌ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ ಸಭಾಪತಿಗೆ ಮಾಹಿತಿ  ನೀಡಿದ್ದಾರೆ.

ಇಂದೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋ ಹತ್ಯೆ ಪ್ರತಿಬಂಧಕ ವಿಧೇಯಕ
ವಿಧಾನ ಪರಿಷತ್
Follow us on

ಬೆಂಗಳೂರು: ಪಶು ಸಂಗೋಪನಾ ಸಚಿವರು ಪರಿಷತ್‌ನಲ್ಲಿ ಹಾಜರಾಗದ ಕಾರಣ ಇಂದು ವಿಧಾನಪರಿಷತ್‌ನಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಆಗಿಲ್ಲ.

ನಾಳೆ ವಿಧಾನಪರಿಷತ್‌ ಅಧಿವೇಶನದಲ್ಲಿ ಬಿಲ್‌ ಮಂಡನೆ ಮಾಡುತ್ತೇವೆ ಎಂದು  ಪರಿಷತ್‌ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ ಸಭಾಪತಿಗೆ ಮಾಹಿತಿ  ನೀಡಿದ್ದಾರೆ. ಕಾರಣಾಂತರಗಳಿಂದ ಕೃಷಿ ಸಚಿವ ಪ್ರಭು ಬಿ. ಚೌಹಾಣ್​ ಅಧಿವೇಶನಕ್ಕೆ ಬಂದಿರಲಿಲ್ಲ.

ಇನ್ನು, ವಿಧಾನಸಭೆಯಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡಿದೆ. ವಂಚಕ ಕಂಪನಿಗಳ ಮೇಲೆ ನಿಗಾ ಇಡಲು ಈ ವಿಧೇಯಕ ಸಹಕಾರಿಯಾಗಲಿದೆ. ಹಣಕಾಸು ಸಂಸ್ಥೆ ಮುಚ್ಚಿದಾಗ ಠೇವಣಿದಾರರಿಗೆ ನ್ಯಾಯ ಸಿಗಲಿದೆ.

‘20 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದವನಿಗೆ ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಾರೆ.. ಶೇಮ್ ಶೇಮ್ ಕಾಂಗ್ರೆಸ್’