ಸ್ಯಾಂಡಲ್ವುಡ್ಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ
ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದರ ಪ್ರಕಾರ, ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಇದರ ಪ್ರಕಾರ, ಚಿತ್ರಮಂದಿರಗಳಲ್ಲಿ ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಅಂದ ಹಾಗೆ, ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಕೇಂದ್ರ ಅವಕಾಶ ನೀಡಿತ್ತು. ಆದ್ರೆ, ಕೊರೊನಾ 2ನೇ ಅಲೆ ಬರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಟಾಕೀಸ್ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊಸ ಮಾರ್ಗಸೂಚಿ ಫೆ.28ರವರೆಗೂ ಜಾರಿಯಲ್ಲಿರುತ್ತೆ. ರಾಜ್ಯ ಸರ್ಕಾರದ ಈ ನಡೆ ಸ್ಯಾಂಡಲ್ವುಡ್ಗೆ ದೊಡ್ಡ ಆಘಾತ ಕೊಡಲಿದೆ.
ಇತ್ತ, ಕ್ರೀಡಾ, ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನರಂಜನಾ ಕ್ಷೇತ್ರಗಳಲ್ಲಿನ ನಿಯಮಗಳಲ್ಲಿ ಸಡಿಲಿಕೆ ಆಗಿದೆ. ಈಜುಕೊಳ, ಪ್ರದರ್ಶನ ಕೇಂದ್ರಗಳಿಗೂ ನಿಯಮ ಸಡಿಲಿಕೆಯಾಗಿದ್ದು ಇದೀಗ ಮದುವೆ ಹಾಗೂ ಬರ್ತ್ಡೇ ಹಾಲ್ನಲ್ಲಿ 500 ಜನರಿಗೆ ಅವಕಾಶ ನೀಡಲಾಗಿದೆ.
ಹೊಸ ಮಾರ್ಗಸೂಚಿ ಫೆ.28ರವರೆಗೂ ಜಾರಿಯಲ್ಲಿರುತ್ತೆ. ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಮುಂಬೈನಲ್ಲಿ ಹೊತ್ತಿ ಉರಿದ ಪ್ರಭಾಸ್ ನಟನೆಯ ಆದಿ ಪುರುಷ್ ಸಿನಿಮಾ ಸೆಟ್!
Published On - 7:22 pm, Tue, 2 February 21