‘20 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದವನಿಗೆ ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಾರೆ.. ಶೇಮ್ ಶೇಮ್ ಕಾಂಗ್ರೆಸ್’
ಇದಕ್ಕೆಲ್ಲ ನೀವೇ ಕಾರಣ ಎಂದ ಬಸವರಾಜ ಬೊಮ್ಮಾಯಿ ಅಕ್ರಮ ಗಣಿಗಾರಿಕೆ ಮಾಡಿದವನಿಗೆ ಲೈಸೆನ್ಸ್ ನವೀಕರಣ ಮಾಡಿದ್ದಾರೆ. 20 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದ. ಅಂತಹವನಿಗೆ ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಬೆಂಗಳೂರು: ಯಾರು ಸತ್ಯಹರಿಶ್ಚಂದ್ರರು? ಯಾರ ಕಾಲದಲ್ಲಿ ಏನೇನು ಆಗಿದೆ ಎಂದು ಜನರಿಗೆ ಗೊತ್ತಿದೆ ಎಂದು ವಿಧಾನ ಪರಿಷತ್ನಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೆಲ್ಲ ನೀವೇ ಕಾರಣ ಎಂದ ಬಸವರಾಜ ಬೊಮ್ಮಾಯಿ ಅಕ್ರಮ ಗಣಿಗಾರಿಕೆ ಮಾಡಿದವನಿಗೆ ಲೈಸೆನ್ಸ್ ನವೀಕರಣ ಮಾಡಿದ್ದಾರೆ. 20 ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಮಾಡಿದ್ದ. ಅಂತಹವನಿಗೆ ಲೈಸೆನ್ಸ್ ನವೀಕರಣ ಮಾಡಿಕೊಟ್ಟಿದ್ದಾರೆ. ನಿಮ್ಮ ಅವಧಿಯಲ್ಲಿ ಹಾಸನದಲ್ಲಿ ಕಲ್ಲು ಸ್ಫೋಟದ ವೇಳೆ ಜನರು ಮೃತಪಟ್ಟಾಗ ನೀವು ನ್ಯಾಯಾಂಗ ತನಿಖೆಗೆ ಕೊಡ್ಲಿಲ್ಲ. ಈಗ ಕೇಳ್ತಾರೆ. ಎಲ್ಲದಕ್ಕೂ ಕಾರಣ ಕಾಂಗ್ರೆಸ್ನವರೇ. ಶೇಮ್ ಶೇಮ್ ಕಾಂಗ್ರೆಸ್ ಎಂದು ಹೇಳಿದರು.
ಜೊತೆಗೆ, ಗಣಿ ಮಾಲೀಕ ಕುಲಕರ್ಣಿ ವಿರುದ್ಧ ಹಿಂದೆಯೂ ಕೇಸ್ ಆಗಿದೆ. ಬಿಡದಿಯಲ್ಲಿ 16,400 ಜಿಲೆಟಿನ್ ಕಡ್ಡಿ ಸೀಜ್ ಮಾಡಿದ್ದೇವೆ. ಇದಲ್ಲದೆ, 18 ಜಿಲ್ಲೆಗಳಲ್ಲಿ ಜಿಲೆಟಿನ್ ಕಡ್ಡಿ ಜಪ್ತಿ ಮಾಡಿದ್ದೇವೆ. ಇನ್ಮುಂದೆ ಲೈಸೆನ್ಸ್ ಇದ್ದರಷ್ಟೇ ಸ್ಫೋಟಕ ಸಾಗಿಸಲು ಅವಕಾಶ ಕೊಡುತ್ತೇವೆ ಎಂದು ಹೇಳಿದರು.
ನಾವು ಸ್ಫೋಟ ಪ್ರಕರಣದ ತನಿಖೆ ಇಲ್ಲಿಗೆ ಮುಗಿಸುವುದಿಲ್ಲ. ಮೂಲಕ್ಕೆ ಹೋಗುತ್ತೇವೆ. ಎಷ್ಟೇ ಪ್ರಭಾವಿಯಾದರೂ ಬಿಡಲ್ಲ. ಹುಣಸೋಡು ಕೇಸ್ನ ಮಧ್ಯಂತರ ವರದಿ ಕೊಡಲು ಹೇಳಿದ್ದೇನೆ . ಮಧ್ಯಂತರ ವರದಿ ಆಧರಿಸಿ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸುತ್ತೇವೆ. ವರದಿ ಬಂದ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ. ಪೂರ್ಣ ವರದಿಗಾಗಿ ನಾನು ಕಾಯುತ್ತಾ ಕೂರುವುದಿಲ್ಲ ಎಂದು ಬೊಮ್ಮಾಯಿ ಹೇಳಿದರು.
ಹುಣಸೋಡು ಸ್ಫೋಟ ಕೇಸ್ NIAಗೆ ಕೊಡುವ ಅಗತ್ಯವಿಲ್ಲ. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ ಎಂದು ವಿಧಾನಪರಿಷತ್ನಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಸ್ಯಾಂಡಲ್ವುಡ್ಗೆ ಶಾಕ್ ಕೊಟ್ಟ ರಾಜ್ಯ ಸರ್ಕಾರ: ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ
Published On - 7:35 pm, Tue, 2 February 21