ಸುಮನಹಳ್ಳಿ ಚಿತಾಗಾರದಲ್ಲಿ 2 ದಹನ ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದೆ! ಮುಂದೇನು?

ಸುಮನಹಳ್ಳಿಯಲ್ಲಿರುವ ಚಿತಾಗಾರದಲ್ಲಿರುವ 2 ದಹನ ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದ್ದು, ಕೇವಲ ಒಂದೇ ಒಂದು ಯಂತ್ರದ ಮೂಲಕ ಶವಸಂಸ್ಕಾರ ಮಾಡಬೇಕಾಗಿದೆ.

ಸುಮನಹಳ್ಳಿ ಚಿತಾಗಾರದಲ್ಲಿ 2 ದಹನ ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದೆ! ಮುಂದೇನು?
ಆ್ಯಂಬುಲೆನ್ಸ್​ಗಳು
Follow us
Skanda
|

Updated on:Apr 20, 2021 | 12:59 PM

ಬೆಂಗಳೂರು: ಕರ್ನಾಟಕದ ಪಾಲಿಗೆ ಕೊರೊನಾ ಎರಡನೇ ಅಲೆ ಭೀಕರವಾಗಿ ಪರಿಣಮಿಸಿದ್ದು ಪರಿಸ್ಥಿತಿ ದಿನೇದಿನೇ ಗಂಭೀರ ಹಂತದತ್ತ ಸಾಗುತ್ತಿದೆ. ಒಂದೆಡೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಆಸ್ಪತ್ರೆಯಲ್ಲಿ ಪರದಾಟ ಶುರುವಾಗಿದ್ದರೆ ಇನ್ನೊಂದೆಡೆ ಮೃತಪಟ್ಟವರ ಶವಸಂಸ್ಕಾರಕ್ಕೆ ಸ್ಮಶಾನದಲ್ಲಿ ಒದ್ದಾಡಬೇಕಾದ ದುಸ್ಥಿತಿ ಉದ್ಭವವಾಗಿದೆ. ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ಪ್ರತಿನಿತ್ಯ ಶವಗಳ ಸಂಖ್ಯೆ ಹೆಚ್ಚುತ್ತಿದ್ದು ಇದರ ನಡುವೆಯೇ ಶವ ಸುಡುವ ದಹನ ಯಂತ್ರ ಕೆಟ್ಟು ನಿಂತಿರುವುದು ಸಂಕಷ್ಟವನ್ನು ಉಂಟುಮಾಡಿದೆ.

ಸುಮನಹಳ್ಳಿಯಲ್ಲಿರುವ ಚಿತಾಗಾರ 24/7 ಮಾದರಿಯಲ್ಲಿ ಒಂದೇ ಸಮನೆ ಕಾರ್ಯನಿರತವಾಗಿದ್ದ ಇಲ್ಲಿನ ಹೆಣ ಸುಡುವ ಯಂತ್ರಗಳ ಪೈಕಿ ಒಂದು ಈಗ ಕೆಟ್ಟು ನಿಂತಿದೆ. ಇಲ್ಲಿರುವ 2 ದಹನ ಯಂತ್ರಗಳ ಪೈಕಿ 1 ಯಂತ್ರ ಕೆಟ್ಟು ಹೋಗಿದ್ದು, ಕೇವಲ ಒಂದೇ ಒಂದು ಯಂತ್ರದ ಮೂಲಕ ಶವಸಂಸ್ಕಾರ ಮಾಡಬೇಕಾಗಿದೆ. ಕಳೆದೊಂದು ವಾರದಿಂದಲೂ ಚಿತಾಗಾರದಲ್ಲಿ ಬಿಡುವಿಲ್ಲದೇ ಶವಗಳ ದಹನ ಕಾರ್ಯ ನಡೆಯುತ್ತಿದ್ದು, ಇಂದು ಸಹ ಒಟ್ಟು 7 ಆ್ಯಂಬುಲೆನ್ಸ್​ಗಳಲ್ಲಿ ಕೊವಿಡ್​ನಿಂದ ಮೃತಪಟ್ಟವರ ಶವಗಳನ್ನು ತರಲಾಗಿದ್ದು, ದಹನ ಯಂತ್ರ ಹಾಳಾಗಿರುವ ಕಾರಣ ಅಂತ್ಯಸಂಸ್ಕಾರಕ್ಕೆ ಸಮಸ್ಯೆ ಉಂಟಾಗಿದೆ.

ಹೀಗಾಗಿ ದಹನ ಯಂತ್ರಗಳ ಸಮಸ್ಯೆಯಿಂದಾಗಿ ಬೇಸತ್ತ ಮೃತರ ಕುಟುಂಬಸ್ಥರು ಕಾದು ಕಾದು ಬೇಸತ್ತು ಮೃತದೇಹಗಳನ್ನು ಬೇರೆಡೆಗೆ ಕೊಂಡೊಯ್ಯಲು ಆರಂಭಿಸಿದ್ದಾರೆ. ಬೆಳಗ್ಗೆಯಿಂದ ಮೂರು ಮೃತದೇಹಗಳನ್ನು ಸುಮ್ಮನಹಳ್ಳಿ ಚಿತಾಗಾರಕ್ಕೆ ತಂದು ಸುಡಲಾಗದೇ ವಾಪಾಸು ಕೊಂಡೊಯ್ಯಲಾಗಿದೆ. ಸುಮ್ಮನಹಳ್ಳಿಗೆ ತಂದ ಶವಗಳನ್ನು ಪೀಣ್ಯ ಚಿತಾಗಾರಕ್ಕೆ ಕೊಂಡೊಯ್ಯಲಾಗುತ್ತಿದ್ದು ಅಲ್ಲಿಯೂ ಮೃತದೇಹಗಳ ಸಂಖ್ಯೆ ಹೆಚ್ಚಿರುವುದರಿಂದ ಸರತಿಯಲ್ಲಿ ನಿಲ್ಲಬೇಕಾಗಿ ಬಂದಿದೆ. ಈ ಅವ್ಯವಸ್ಥೆಗಳ ಕಾರಣದಿಂದಾಗಿ ಮೃತರ ಕುಟುಂಬಸ್ಥರು ಅಕ್ಷರಶಃ ಹೈರಾಣಾಗಿ ಹೋಗಿದ್ದಾರೆ.

ಇನ್ನೊಂದೆಡೆ ಅಂತ್ಯಕ್ರಿಯೆ ನಡೆಸುವ ಸ್ಥಳದ ಆವರಣದಲ್ಲಿಯೇ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್, ಅಂತ್ಯಕ್ರಿಯೆಗೆ ತಂದ ವಸ್ತುಗಳನ್ನು ಎಸೆಯಲಾಗುತ್ತಿದ್ದು, ಚಿತಾಗಾರಕ್ಕೆ ಶವ ಸುಡಲು ಬಂದವರಿಗೆ ಕೊವಿಡ್ ಭಯ ಆರಂಭವಾಗಿದೆ. ಮೃತದೇಹ ನೋಡಲು ಬಂದವರಿಗೆ ಎಲ್ಲಿ ವೈರಾಣು ತಗುಲುತ್ತದೋ ಎಂಬ ಆತಂಕ ಸೃಷ್ಟಿಯಾಗಿದ್ದು ಎಲ್ಲೆಂದರಲ್ಲಿ ಗಾಳಿಗೆ ಸಿಕ್ಕು ತೂರಾಡುತ್ತಿರುವ ಪಿಪಿಇ ಕಿಟ್​ಗಳು ಎಲ್ಲರ ನೆಮ್ಮದಿ ಕೆಡಿಸಿವೆ.

ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟ ಮುಸ್ಲಿಮರ ಅಂತ್ಯಸಂಸ್ಕಾರಕ್ಕೆ ಪ್ರತ್ಯೇಕ ಸ್ಥಳಾವಕಾಶ ಕೇಳಿದ ಜಮೀರ್ ಅಹ್ಮದ್ 

ಬೆಂಗಳೂರು ಸಾವಿನ ರಾಜಧಾನಿ | ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೂ ಸಂಕಷ್ಟ!

(Crematorium equipment problem in Bengaluru Family members are waiting to burn dead bodies)

Published On - 12:22 pm, Tue, 20 April 21

ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್