ದಾವಣಗೆರೆ: ವರ್ಗಾವಣೆ ನೆಪ ಹೇಳಿ ಮಹಿಳಾ ವಾರ್ಡನ್​​ ಮೇಲೆ ಅತ್ಯಾಚಾರ ಆರೋಪ, ತಲೆಮರೆಸಿಕೊಂಡ ವಾರ್ಡನ್

ತನ್ನ ಮಕ್ಕಳ ಶಿಕ್ಷಣದ ದೃಷ್ಠಿಯಿಂದ ದಾವಣಗೆರೆಗೆ ವರ್ಗಾವಣೆ ಕೇಳಿದ್ದರು. ಈ ವೇಳೆ ವಾರ್ಡನ್ ಮೋಹನ್, ತಾನು ವರ್ಗಾವಣೆ ಮಾಡಿಸಿದ್ದು, ವರ್ಗಾವಣೆ ಆದೇಶ ತನ್ನ ಬಳಿ ಇದೆ ಎಂದು ಸುಳ್ಳು ಹೇಳಿ ಮಹಿಳಾ ವಾರ್ಡನ್ ಅನ್ನು ತನ್ನ ಮನೆಗೆ ಕರೆಯಿಸಿ ಅತ್ಯಾಚಾರ ಎಸಗಿದ್ದಾನಂತೆ.

ದಾವಣಗೆರೆ: ವರ್ಗಾವಣೆ ನೆಪ ಹೇಳಿ ಮಹಿಳಾ ವಾರ್ಡನ್​​ ಮೇಲೆ ಅತ್ಯಾಚಾರ ಆರೋಪ, ತಲೆಮರೆಸಿಕೊಂಡ ವಾರ್ಡನ್
ವಿದ್ಯಾನಗರ ಪೊಲೀಸ್ ಠಾಣೆ
Edited By: ಆಯೇಷಾ ಬಾನು

Updated on: Nov 10, 2022 | 2:35 PM

ದಾವಣಗೆರೆ: ವರ್ಗಾವಣೆ ನೆಪ ಹೇಳಿ ಮಹಿಳಾ ವಾರ್ಡನ್​​ ಮೇಲೆ ಅತ್ಯಾಚಾರ? ಎಸಗಲಾಗಿದೆ ಎಂಬ ಆರೋಪ ಬಾಯ್ಸ್​​ ಹಾಸ್ಟೆಲ್​ ವಾರ್ಡನ್ ಮೋಹನ್ ರಾಮಪ್ಪ ವಿರುದ್ಧ ಕೇಳಿ ಬಂದಿದೆ. ಈ ಬಗ್ಗೆ ದಾವಣಗೆರೆಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ವಾರ್ಡನ್ ದೂರು ದಾಖಲಿಸಿದ್ದು ವಾರ್ಡನ್ ಮೋಹನ್ ತಲೆಮರೆಸಿಕೊಂಡಿದ್ದಾನೆ.

ಬಹುದಿನಗಳಿಂದ ತಾಲೂಕಾ ಕೇಂದ್ರದ ಹಾಸ್ಟೆಲ್​ನಲ್ಲಿ ಸೇವೆಯಲ್ಲಿ‌ದ್ದ ಮಹಿಳಾ ವಾರ್ಡನ್, ತನ್ನ ಮಕ್ಕಳ ಶಿಕ್ಷಣದ ದೃಷ್ಠಿಯಿಂದ ದಾವಣಗೆರೆಗೆ ವರ್ಗಾವಣೆ ಕೇಳಿದ್ದರು. ಈ ವೇಳೆ ವಾರ್ಡನ್ ಮೋಹನ್, ತಾನು ವರ್ಗಾವಣೆ ಮಾಡಿಸಿದ್ದು, ವರ್ಗಾವಣೆ ಆದೇಶ ತನ್ನ ಬಳಿ ಇದೆ ಎಂದು ಸುಳ್ಳು ಹೇಳಿ ಮಹಿಳಾ ವಾರ್ಡನ್ ಅನ್ನು ತನ್ನ ಮನೆಗೆ ಕರೆಯಿಸಿ ಅತ್ಯಾಚಾರ ಎಸಗಿದ್ದಾನಂತೆ. ಈ ಸಂಬಂಧ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ವಾರ್ಡನ್ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಮೋಹನ್ ತಲೆ ಮರೆಸಿಕೊಂಡಿದ್ದಾನೆ.

ಬೆಂಗಳೂರಿನಿಂದ ಬರುತ್ತಿದ್ದ ಖಾಸಗಿ ಬಸ್​ನಲ್ಲಿ ಲೇಡಿ ಡಾಕ್ಟರ್​ ಜತೆ ಅಸಭ್ಯ ವರ್ತನೆ

ಮಂಗಳೂರು: ಖಾಸಗಿ ಬಸ್​ನಲ್ಲಿ ಲೇಡಿ ಡಾಕ್ಟರ್​ ಪ್ರಯಾಣಿಕರೊಬ್ಬರ ಜತೆ ಖಾಸಗಿ ಬಸ್ (private bus) ಕ್ಲೀನರ್​ ಮಹಮ್ಮದ್​​ ಇಮ್ರಾನ್ ​(26) ಅಸಭ್ಯ ವರ್ತನೆ (harassment) ತೋರಿದ್ದು, ಆತನನ್ನು ಬಂಧಿಸಲಾಗಿದೆ (arrest). ಬಂಧಿತ ಆರೋಪಿ, ಮಂಗಳೂರಿನ ಬಜ್ಪೆ ಕೆಂಜಾರು ನಿವಾಸಿ. ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ವೈದ್ಯೆ ಜತೆ ದುರ್ವತನೆ ಆರೋಪದಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​​ 151/2022 U/s 354ರಡಿ ಕೇಸ್​​​ ದಾಖಲುಗೊಂಡಿದೆ. ಖಾಸಗಿ ಬಸ್​​ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿತ್ತು.

ಆರೋಪಿ ಇಮ್ರಾನ್​​​ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ. ಪ್ಯಾಂಟ್ ಜಿಪ್ ಓಪನ್ ಮಾಡಿ ಅಸಭ್ಯ ನಡವಳಿಕೆ ತೋರಿದ ಎಂದು ಸಂತ್ರಸ್ತೆ, ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯೆ ದೂರಿನಲ್ಲಿ ದಾಖಲಿಸಿದ್ದಾರೆ. ದೂರುದಾರ ಮಹಿಳಾ ಪ್ರಯಾಣಿಕರು ಮಂಗಳೂರಿನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾರೆ. ಪೊಲೀಸ್ ದೂರು ನೀಡುವ ವಿಚಾರ ಗೊತ್ತಾಗಿ ಆರೋಪಿ ಇಮ್ರಾನ್ ಮಹಿಳೆಗೆ ಬೆದರಿಕೆಯನ್ನು ಹಾಕಿದ್ದ ಎಂದು ತಿಳಿದುಬಂದಿದೆ.

ಮಾಲೂರಿನಲ್ಲಿ ಮತ್ತೆ ಕದ್ದು ಮುಚ್ವಿ ಕೋಳಿ ಪಂದ್ಯ

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕುಂತೂರು ಬಳಿ ಕೋಳಿ ಪಂದ್ಯ ನಡೆದಿದೆ. ಕುಂತೂರು ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ಕೋಳಿ ಪಂದ್ಯ ಆಯೋಜನೆ ಮಾಡಲಾಗಿದ್ದು ತಲಾ ಒಬ್ಬರಿಗೆ 300 ರೂಪಾಯಿ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ. ಕೋಳಿ ಪಂದ್ಯದ ವೇಳೆ ಲಕ್ಷಾಂತರ ರೂಪಾಯಿ ಪಣಕ್ಕಿಟ್ಟು ಜೂಜಾಡಲಾಗಿದೆ. ಕೋಳಿ ಪಂದ್ಯದಲ್ಲಿ ನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.

Published On - 1:51 pm, Thu, 10 November 22

TV9 Web

TV9 Kannada

Read More
Loading...
Unable to load recommendations.
Follow Us