ಲಾಕ್‌ಡೌನ್ ಬಳಿಕ ಬೆಂಗಳೂರಿನಲ್ಲಿ ಕ್ರೈಂ ರೇಟ್ ಇಳಿಕೆ; ದಾಖಲಾಗುತ್ತಿರುವ ಕೇಸ್ಗಳಲ್ಲಿ ಸೈಬರ್ ಕ್ರೈಂ ಹೆಚ್ಚು
ಕೊರೊನಾ ಲಾಕ್ ಡೌನ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಕ್ರೈಂ ರೇಟ್ ಇಳಿಕೆಯಾಗಿದೆ. ಆದರೆ, ವಿಶೇಷ ಎಂಬಂತೆ ಇತ್ತಿಚೇಗೆ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳೇ ಅತಿ ಹೆಚ್ಚು ದಾಖಲಾಗುತ್ತಿದೆ.
ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಪರಾಧಗಳ ಪ್ರಮಾಣ ಇಳಿಕೆಯಾಗಿದೆ. ಮೇ ತಿಂಗಳಿನಲ್ಲಿ ಈವರೆಗೆ 546 ಪ್ರಕರಣ ಮಾತ್ರ ದಾಖಲಾಗಿದೆ. ಸೈಬರ್ ಕ್ರೈಂ ಪ್ರಕರಣಗಳೇ ಈಗ ಹೆಚ್ಚಾಗಿ ದಾಖಲಾಗುತ್ತಿದೆ. ಉಳಿದಂತೆ ಕೊಲೆ, ದರೋಡೆ, ಕಳ್ಳತನ, ಸರಗಳ್ಳತನ, ಮನೆಗಳ್ಳತನ ಪ್ರಕರಣಗಳಲ್ಲಿ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ಜನವರಿ ತಿಂಗಳಿನಲ್ಲಿ 6,526 ಪ್ರಕರಣ ದಾಖಲಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ 5,642 ಅಪರಾಧ ಪ್ರಕರಣಗಳು ದಾಖಲಾಗಿದ್ದವು, ಮಾರ್ಚ್ನಲ್ಲಿ 3,358 ಪ್ರಕರಣ ದಾಖಲಾಗಿತ್ತು ಹಾಗೂ ಏಪ್ರಿಲ್ ತಿಂಗಳಿನಲ್ಲಿ 2,028 ಪ್ರಕರಣಗಳು ದಾಖಲಾಗಿತ್ತು. ಜನವರಿಯಿಂದ ಈಚೆಗೆ ಪ್ರತೀ ತಿಂಗಳು ಅಪರಾಧ ಪ್ರಕರಣಗಳ ಪ್ರಮಾಣ ಇಳಿಕೆಯಾಗಿರುವುದು ಕಂಡುಬಂದಿದೆ. ಮೇ ತಿಂಗಳಿನಲ್ಲಿ ಇದುವರೆಗೆ ಕೇವಲ 546 ಪ್ರಕರಣಗಳು ಮಾತ್ರ ದಾಖಲಾಗಿವೆ.
ಕೊರೊನಾ ಲಾಕ್ ಡೌನ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಕ್ರೈಂ ರೇಟ್ ಇಳಿಕೆಯಾಗಿದೆ. ಆದರೆ, ವಿಶೇಷ ಎಂಬಂತೆ ಇತ್ತಿಚೇಗೆ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳೇ ಅತಿ ಹೆಚ್ಚು ದಾಖಲಾಗುತ್ತಿದೆ. ಕೊವಿಡ್ ಸೋಂಕು ಹೆಚ್ಚಾದ ಬಳಿಕ ಅಪರಾಧ ಪ್ರಕರಣಗಳಲ್ಲಿ ಸೈಬರ್ ಕ್ರೈಂನದ್ದೇ ಮೇಲುಗೈ ಕಂಡುಬಂದಿದೆ.
ಕೊರೊನಾ ಸಂಕಷ್ಟವನ್ನೇ ಬಳಕೆ ಮಾಡುತ್ತಾರೆ ಖದೀಮರು ಕೊರೊನಾ ಸಂಕಷ್ಟದ ನಡುವೆಯೂ ಸೈಬರ್ ಕಳ್ಳರು ದುಷ್ಕೃತ್ಯ ಮಾಡುವಲ್ಲಿ ಹಿಂದುಳಿದಿಲ್ಲ. ರೆಮ್ಡಿಸಿವಿರ್ ಇಂಜೆಕ್ಷನ್ ಕೊರತೆಯೇ ವಂಚಕರ ಬ್ರಹ್ಮಾಸ್ತ್ರವಾಗಿದೆ. ಔಷಧಿಯ ಅಭಾವವನ್ನು ತಮ್ಮ ಲಾಭಕ್ಕಾಗಿ ಖದೀಮರು ಬಳಸಿಕೊಳ್ಳುತ್ತಿದ್ದಾರೆ. ತಮ್ಮ ಬಳಿ ರೆಮ್ಡಿಸಿವಿರ್ ಇರುವುದಾಗಿ ವಾಟ್ಸಾಪ್ ಮೆಸೇಜ್ ಮಾಡುವ ಕಳ್ಳರು ಮೋಸ ಮಾಡಿದ್ದರು.
ರೆಮ್ಡಿಸಿವಿರ್ ಅಗತ್ಯವಿರುವವರ ಮೊಬೈಲ್ಗೆ ಮೆಸೇಜ್ ಮಾಡುತ್ತಾರೆ. ಅಡ್ವಾನ್ಸ್ ಹಣ ನೀಡಿದರೆ ರೆಮ್ಡಿಸಿವಿರ್ ನೀಡುವುದಾಗಿ ಮೆಸೇಜ್ ಮಾಡಿ ಬಳಿಕ ಮೋಸ ಮಾಡಿದ್ದಾರೆ. ಅದನ್ನು ನಂಬಿ ಹಣ ವರ್ಗಾವಣೆ ಮಾಡಿದವರಿಗೆ ವಂಚನೆ ಮಾಡಿದ್ದಾರೆ. ಹಣ ಕಳೆದುಕೊಂಡವರಿಂದ ಬೆಂಗಳೂರು ಪೊಲೀಸರಿಗೆ ದೂರು ನೀಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಟ್ವಿಟರ್ನಲ್ಲಿ ದೂರು ದಾಖಲಾಗಿದೆ. ಮುಂಜಾಗ್ರತೆ ವಹಿಸುವಂತೆ ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಸೈಬರ್ ಕಳ್ಳರ ಕೈಚಳಕ ಆಕ್ಸಿಜನ್ ಸಿಲಿಂಡರ್ ವಿಚಾರದಲ್ಲೂ ಮುಂದುವರಿದಿದೆ. ಖದೀಮರು ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ನಂಬಿಸಿ ವ್ಯಕ್ತಿಗೆ ವಂಚನೆ ಮಾಡಿದ್ದರು. ಹೆಚ್‌ಎಸ್‌ಆರ್ ಲೇಔಟ್ ನಿವಾಸಿ ನೀಲ್‌ಜೈನ್‌ಗೆ ವಂಚನೆ ಮಾಡಲಾಗಿತ್ತು. ಪೇಟಿಯಂನಲ್ಲಿ ಹಂತಹಂತವಾಗಿ ರೂ. 47,635 ವರ್ಗಾವಣೆ ಮಾಡಿಸಿಕೊಂಡಿದ್ದ ಕಳ್ಳರು ವಂಚನೆ ಮಾಡಿದ್ದರು. ವಾಟ್ಸಾಪ್ ಗ್ರೂಪ್‌ನಲ್ಲಿ ನಂಬರ್ ಶೇರ್ ಮಾಡಿ ವಂಚನೆ ಮಾಡಲಾಗಿದ್ದು, ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸೋಶಿಯಲ್ ಮಿಡಿಯಾದಲ್ಲಿ ಕೊರೊನಾ ಬಗ್ಗೆ ತಪ್ಪು ಸಂದೇಶ ಆರೋಪ; ಡಾ.ರಾಜು ಕ್ಲಿನಿಕ್ ಲೈಸೆನ್ಸ್ ರದ್ದುಗೊಳಿಸಲು ನಿರ್ಧಾರ
Published On - 4:13 pm, Mon, 17 May 21